ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: Ola, Uberನ 15 ದಿನದ ಗಡುವು ಅಂತ್ಯ: ಕನಿಷ್ಠ ದರ ನಿಗದಿಗೆ ಮುಂದಾದ ರಾಜ್ಯ ಸರ್ಕಾರ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 27: ಆಪ್ ಆಧಾರಿತ ಆಟೋ ರಿಕ್ಷಾ ಸೇವೆಗಳಾದ ಓಲಾ, ಉಬರ್‌ಗಳಿಗೆ ಪ್ರಯಾಣ ದರ ನಿಗದಿಗೆ ಮಾಡುವಂತೆ ಹೈಕೋರ್ಟ್ ನೀಡಿದ್ದ ಗಡುವು ಕೊನೆಗೊಂಡಿದೆ. ಆದಷ್ಟು ಶೀಘ್ರವೇ ಜಿಎಸ್‌ಟಿ ಸಹಿತ ಕನಿಷ್ಠ ದರ ನಿಗದಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಓಲಾ, ಉಬರ್ ಪ್ರಯಾಣ ದರ ಕುರಿತು ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ ಪ್ರಯಾಣದ ದರ ನಿಗದಿಪಡಿಸುವಂತೆ 15 ದಿನ ಗಡುವು ನೀಡಿ ಆದೇಶಿಸಿತ್ತು. ಆದರೆ ಗುಡುವು ಮುಗಿದರೂ ಈ ಬಗ್ಗೆ ಕಂಪನಿಗಳು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗಿದೆ.

ಓಲಾ, ಉಬರ್‌ಗೆ ಸೆಡ್ಡು ಹೊಡೆಯಲು ಬರುತ್ತಿದೆ ನಮ್ಮ ಯಾತ್ರಿ App ಓಲಾ, ಉಬರ್‌ಗೆ ಸೆಡ್ಡು ಹೊಡೆಯಲು ಬರುತ್ತಿದೆ ನಮ್ಮ ಯಾತ್ರಿ App

ಈ ಕಾರಣದಿಂದ ರಾಜ್ಯ ಸರ್ಕಾರವೇ ಓಲಾ, ಉಬರ್ ಆಟೋಗಳಿಗೆ ಹೊಸದಾಗಿ ಪ್ರಯಾಣದ ಕನಿಷ್ಠ (ಮಿನಿಮಮ್) ದರ ನಿಗದಿ ಮಾಡಿ ಆದಷ್ಟು ಶೀಘ್ರ ದರಪಟ್ಟಿ ಬಿಡುಗಡೆ ಮಾಡಲಿದೆ. ಈ ದರದಲ್ಲಿ ಸರಕು ಸೇವಾ ತೆರಿಗೆ (ಜಿಎಸ್‌ಟಿ) ಸಹ ಒಳಗೊಂಡಿರಲಿದೆ.

15 days deadline ends, Karnataka govt moves to fix minimum auto fare for Ola, Uber

ಹೆಚ್ಚುವರಿ ಹಣ ವಸೂಲಿ ವಿಚಾರ ತೀವ್ರತೆ ಪಡೆದುಕೊಂಡ ಬಳಿಕ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ 2 ಕಿಲೋ ಮೀಟರ್‌ ಪ್ರಯಾಣಕ್ಕೆ 30ರೂ. ನಿಗದಿ ಮಾಡಿತ್ತು. ಇದೀಗ ಗುಡುವು ಮುಗಿದ ಹಿನ್ನೆಲೆ ಹೊಸ ದರವನ್ನು ನಿಗದಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಿದ್ದು, ವಾರದೊಳಗೆ ಓಲಾ ಮತ್ತು ಊಬರ್ ಕಂಪನಿಗಳ ಆಟೋರಿಕ್ಷಾ ಪ್ರಯಾಣಕ್ಕೆ ಹೊಸ ದರ ಫಿಕ್ಸ್ ಮಾಡಲಿದೆ.

ಹೈಕೋರ್ಟ್ ಸೂಚನೆ ಏನು?

ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಉಬರ್ ಇಂಡಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಹೈಕೋರ್ಟ್‌ಗೆ ಈ ಹಿಂದೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದವು. ಇವುಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ಏಕಸದಸ್ಯ ಪೀಠವು ಪ್ರಯಾಣ ಶುಲ್ಕ ನಿಗದಿ ಮಾಡುವಂತೆ ಸೂಚಿಸಿತ್ತು.

15 days deadline ends, Karnataka govt moves to fix minimum auto fare for Ola, Uber

ಹೊಸ ದರ ನಿಗದಿ ಮಾಡಲು ಕಂಪನಿಗಳ ಜೊತೆ ಚರ್ಚಿಸಿ ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್ 15 ದಿನ ಗಡುವು ನೀಡಿತ್ತು. ಜೊತೆಗೆ ಕಂಪನಿಗಳಿಗೆ ನಿಗದಿತ ದರ ಮತ್ತು ಹೆಚ್ಚುವರಿ ಶೇ. 10ರಷ್ಟು ಸೇವಾ ತೆರಿಗೆ ಮಾತ್ರ ಪಡೆಯುವಂತೆ ತಿಳಿಸಿತ್ತು. ಆದರೆ ಈ ವರೆಗೆ ಕಂಪನಿಗಳು ಯಾವುದೇ ನಿರ್ಧಾರ ಕೈಗೊಳ್ಳದ ಹಿನ್ನೆಲೆ ರಾಜ್ಯ ಸರ್ಕಾರವೇ ಓಲಾ, ಉಬರ್ ಕಂಪನಿ ಆಟೋ ಗಳಿಗೆ ಪ್ರಯಾಣದ ಕನಿಷ್ಠ ದರ ನಿಗದಿಗೆ ಮುಂದಾಗಿದೆ.

English summary
15 days deadline ends, Karnataka government moves to fix minimum auto fare for Ola, Uber travel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X