ಕರ್ನಾಟಕ; 1,464 ಹೊಸ ಕೋವಿಡ್ ಪ್ರಕರಣ ದಾಖಲು

ಬೆಂಗಳೂರು, ಜುಲೈ 20; ಕರ್ನಾಟಕದಲ್ಲಿ 24 ಗಂಟೆಯಲ್ಲಿ 1,464 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 29 ಜನರು ಮೃತಪಟ್ಟಿದ್ದಾರೆ. ರಾಜ್ಯದ ಪಾಸಿಟಿವಿಟಿ ದರ ಶೇ 1.29.

ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. 24 ಗಂಟೆಯಲ್ಲಿ ರಾಜ್ಯದಲ್ಲಿ 2706 ಜನರು ಗುಣಮುಖಗೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಮರಣ ಪ್ರಮಾಣ ಶೇ 1.98 ಆಗಿದೆ.

ರಾಜ್ಯದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 2886702. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 26256. ಇದುವರೆಗೂ ರಾಜ್ಯದಲ್ಲಿ 36226 ಜನರು ಮೃತಪಟ್ಟಿದ್ದಾರೆ. 2824197 ಜನರು ಡಿಸ್ಚಾರ್ಜ್ ಆಗಿದ್ದಾರೆ ಎಂದು ಹೆಲ್ತ್ ಬುಲೆಟಿನ್‌ನಲ್ಲಿ ಮಾಹಿತಿ ನೀಡಲಾಗಿದೆ.

1464 New Covid Cases Reported At Karnataka In 24 Hours

32474 ಆಂಟಿಜೆನ್, 80,982 ಆರ್‌ಟಿಪಿಸಿಆರ್‌ ಸೇರಿದಂತೆ ಒಟ್ಟು 113456 ಮಾದರಿಗಳ ಕೋವಿಡ್ ಪರೀಕ್ಷೆಯನ್ನು ನಡೆಸಲಾಗಿದೆ. ಇದುವರೆಗೂ ರಾಜ್ಯದಲ್ಲಿ 37133137 ಮಾದರಿಗಳ ಪರೀಕ್ಷೆ ನಡೆಸಲಾಗಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು?; ಬೆಂಗಳೂರು ನಗರದಲ್ಲಿ 352 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 1222807. ಸಕ್ರಿಯ ಪ್ರಕರಣಗಳ ಸಂಖ್ಯೆ 10046.

ದಕ್ಷಿಣ ಕನ್ನಡ 200. ಹಾಸನ 108. ಮೈಸೂರು 117 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ದಕ್ಷಿಣ ಕನ್ನಡ ಮತ್ತು ಮೈಸೂರಿನಲ್ಲಿ ತಲಾ ಮೂವರು ಮೃತಪಟ್ಟಿದ್ದಾರೆ.

ಬೆಳಗಾವಿ 75. ಬೆಂಗಳೂರು ಗ್ರಾಮಾಂತರ 35. ಚಿಕ್ಕಮಗಳೂರು 81. ಚಿತ್ರದುರ್ಗ 11. ದಾವಣಗೆರೆ 13. ಧಾರವಾಡ 14. ಕೊಡಗು 56. ಕೋಲಾರ 36. ಮಂಡ್ಯ 37. ಶಿವಮೊಗ್ಗ 63. ತುಮಕೂರು 86. ಉಡುಪಿ 68. ಉತ್ತರ ಕನ್ನಡ 53 ಹೊಸ ಪ್ರಕರಣ ಪತ್ತೆಯಾಗಿದೆ.

ಯಾದಗಿರಿ 1. ವಿಜಯಪುರ 4. ರಾಮನಗರ 4. ರಾಯಚೂರು 3. ಕೊಪ್ಪಳ 0. ಕಲಬುರಗಿ 8. ಹಾವೇರಿ 3. ಗದಗ 1. ಚಿಕ್ಕಬಳ್ಳಾಪುರ 8. ಬೀದರ್ 2. ಬಳ್ಳಾರಿ 8 ಮತ್ತು ಬಾಗಲಕೋಟೆಯಲ್ಲಿ 1 ಹೊಸ ಕೇಸ್ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+