ಕರ್ನಾಟಕದಲ್ಲಿ 1445 ಕೊರೊನಾ ಪ್ರಕರಣ ದಾಖಲು; ಬೆಂಗಳೂರಿನಲ್ಲೇ ಹೆಚ್ಚು
ಬೆಂಗಳೂರು, ಮಾರ್ಚ್ 22: ಕರ್ನಾಟಕದಲ್ಲಿ ಸೋಮವಾರ ಹೊಸದಾಗಿ 1445 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಇದರಲ್ಲಿ ಬೆಂಗಳೂರಿನ ಪಾಲೇ ಹೆಚ್ಚಿದೆ. ಉಡುಪಿಯಲ್ಲಿಯೂ ಕೊರೊನಾ ಸೋಂಕು ಹೆಚ್ಚಳವಾಗುವ ಸೂಚನೆ ದೊರೆತಿದೆ. ಬೆಂಗಳೂರು ನಗರದಲ್ಲಿ ಸೋಮವಾರ ಒಟ್ಟು 886 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದು, ರಾಜ್ಯದಲ್ಲಿಯೇ ಅತಿ ಹೆಚ್ಚಿನ ಸೋಂಕಿತರ ಸಂಖ್ಯೆ ಇದಾಗಿದೆ.
ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಹತ್ತು ಸೋಂಕಿತರು ಮೃತಪಟ್ಟಿದ್ದಾರೆ. 661 ಮಂದಿ ಗುಣಮುಖರಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 971647 ಕೊರೊನಾ ಪ್ರಕರಣಗಳು ದಾಖಲಾಗಿವೆ.
ಇದುವರೆಗೆ ಸೋಂಕಿನಿಂದ 12444 ಮಂದಿ ಸಾವನ್ನಪ್ಪಿದ್ದು, ಪ್ರಸ್ತುತ 14267 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಹರಡುವಿಕೆ ತಡೆಯಬಹುದಾದ ಕ್ರಮಗಳನ್ನು ಹೇರುವ ಕುರಿತು ರಾಜ್ಯ ಸರ್ಕಾರ ಆಲೋಚನೆ ನಡೆಸಿದೆ.

ಜಿಲ್ಲಾವಾರು ಕೊರೊನಾ ಪ್ರಕರಣಗಳು: ಕಳೆದ 24 ಗಂಟೆಗಳಲ್ಲಿ ಬಾಗಲಕೋಟೆ 7, ಬಳ್ಳಾರಿ 9, ಬೆಳಗಾವಿ 3, ಬೆಂಗಳೂರು ಗ್ರಾಮಾಂತರ 12, ಬೆಂಗಳೂರು ನಗರ 886, ಬೀದರ್ 51, ಚಾಮರಾಜನಗರ 3, ಚಿಕ್ಕಬಳ್ಳಾಪುರ 13, ಚಿಕ್ಕಮಗಳೂರು 1, ಚಿತ್ರದುರ್ಗ 6, ದಕ್ಷಿಣ ಕನ್ನಡ 31, ದಾವಣಗೆರೆ 8, ಧಾರವಾಡ 16, ಗದಗ 5, ಹಾಸನ 20, ಹಾವೇರಿ 2, ಕಲಬುರಗಿ 43, ಕೊಡಗು 23, ಕೋಲಾರ 22, ಕೊಪ್ಪಳ 1, ಮಂಡ್ಯ 28, ಮೈಸೂರು 61, ರಾಯಚೂರು 5, ರಾಮನಗರ 0, ಶಿವಮೊಗ್ಗ 5, ತುಮಕೂರು 51, ಉಡುಪಿ 113, ವಿಜಯಪುರ 10, ಯಾದಗಿರಿಯಲ್ಲಿ 3 ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications