ರಾಷ್ಟ್ರೀಯ ಹೆದ್ದಾರಿಯಾಗಲಿರುವ 14 ರಾಜ್ಯ ಹೆದ್ದಾರಿಗಳ ಪಟ್ಟಿ
ಬೆಂಗಳೂರು, ಜನವರಿ 16 : ಕರ್ನಾಟಕದ 1,656 ಕಿ.ಮೀ.ಉದ್ದದ 14 ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಈ ರಸ್ತೆಗಳ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಸಿ. ಮಹಾದೇವಪ್ಪ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಕುರಿತು ಸಲ್ಲಿಸಿದ ಮನವಿಗೆ ಒಪ್ಪಿಗೆ ನೀಡಲಾಗಿದೆ. 14 ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ. [ರಾಜ್ಯದ ರಸ್ತೆ ಯೋಜನೆಗಳಿಗೆ ನೆರವು ಕೇಳಿದ ಸಿದ್ದರಾಮಯ್ಯ]

ಅಭಿವೃದ್ಧಿಯಾಗಲಿರುವ ಹೆದ್ದಾರಿಗಳ ಪಟ್ಟಿ [ಬೆಂಗಳೂರು-ಮೈಸೂರು ನಡುವೆ 6 ಪಥದ ಕಾಂಕ್ರಿಟ್ ರಸ್ತೆ]
* ಯಲ್ಲಾಪುರ-ಸಿದ್ದಾಪುರ-ತಾಳಗುಪ್ಪ ಹಾಗೂ ಭಟ್ಕಳ ರಸ್ತೆ (219 ಕಿ.ಮೀ)
* ಬೆಳಗಾವಿ-ಬಾಗಲಕೋಟೆ ಮತ್ತು ರಾಯಚೂರು ನಡುವಿನ ರಸ್ತೆ (336 ಕಿ.ಮೀ.)
* ಶಿರಸಿ, ಹಾವೇರಿ, ಕೂಡ್ಲಗಿ ಹಾಗೂ ಮೊಳಕಾಲ್ಮೂರು ರಸ್ತೆ (247 ಕಿ.ಮೀ.)
* ಚಿಂತಾಮಣಿ, ಚೆಳೂರು, ರಾಯಚೆರವು ಆಂಧ್ರದ ಪ್ರದೇಶದ ಟಣಕಲ್ ನಡುವಿನ ರಸ್ತೆ (55 ಕಿ.ಮೀ.)
* ಮೊಳಕಾಲ್ಮೂರು-ರಾಯದುರ್ಗ ಮತ್ತು ಅನಂತಪುರ ರಸ್ತೆ (12 ಕಿ.ಮೀ.)
* ತುಮಕೂರು-ಕೊರಟಗೆರೆ-ಪಾವಗಡ-ಕಲ್ಯಾಣದುರ್ಗ ರಸ್ತೆ (95 ಕಿ.ಮೀ.)
* ರಾಮದುರ್ಗ-ಸದಾಶಿವಗಢ ರಸ್ತೆ (118 ಕಿ.ಮೀ.)
* ದಾವಣಗೆರೆ ಮತ್ತು ಚನ್ನಗಿರಿ ರಸ್ತೆ (60 ಕಿ.ಮೀ.)
* ಚಿತ್ರದುರ್ಗ, ಚಳ್ಳಕೆರೆ, ಪಾವಗಡ, ಪೆನುಕೊಂಡ ರಸ್ತೆ (120 ಕಿ.ಮೀ.)
* ಕಲಬುರಗಿ ಮತ್ತು ಉಮರ್ಗಾ ರಸ್ತೆ (64 ಕಿ.ಮೀ.)
* ಸಂಕೇಶ್ವರ-ಗೋಕಾಕ್-ಯರಗಟ್ಟಿ-ಮುನವಳ್ಳಿ-ನರಗುಂದ ರಸ್ತೆ (127 ಕಿ.ಮೀ.)
* ಮೈಸೂರು-ಬನ್ನೂರು-ಮಳವಳ್ಳಿ ರಸ್ತೆ (50 ಕಿ.ಮೀ.)
* ಕನಕಪುರ-ಯಲ್ಲಾಪುರ ನಡುವಿನ ರಸ್ತೆ (50 ಕಿ.ಮೀ.)
* ಕೇರಳದ ಕಲ್ಪೆಟ್ಟಾ-ಮಾನಂದವಾಡಿಯಿಂದ ಕರ್ನಾಟಕದ ಎಚ್.ಡಿ. ಕೋಟೆ-ಜಯಪುರ ಮತ್ತು ಮೈಸೂರು ರಸ್ತೆ (103 ಕಿ.ಮೀ.)












Click it and Unblock the Notifications