• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; ಜಿಲ್ಲಾವಾರು ಬ್ಲ್ಯಾಕ್‌ ಫಂಗಸ್ ಪ್ರಕರಣಗಳ ಪಟ್ಟಿ

|
Google Oneindia Kannada News

ಬೆಂಗಳೂರು, ಜೂನ್ 01; ಕರ್ನಾಟಕದಲ್ಲಿ ಕೋವಿಡ್ ಆತಂಕ ಕಡಿಮೆಯಾಗುತ್ತಿದೆ. ಆದರೆ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ಸರ್ಕಾರದ ಮಾಹಿತಿ ಪ್ರಕಾರ 51 ಜನರು ರಾಜ್ಯದಲ್ಲಿ ಇದುವರೆಗೂ ಮೃತಪಟ್ಟಿದ್ದಾರೆ.

ಜೂನ್ 1ಕ್ಕೆ ಅನ್ವಯವಾಗುವಂತೆ ರಾಜ್ಯದಲ್ಲಿನ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಬಗ್ಗೆ ಕರ್ನಾಟಕ ಸರ್ಕಾರ ಮಾಹಿತಿಯನ್ನು ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಇದುವರೆಗೂ 1,370 ಪ್ರಕರಣಗಳು ಪತ್ತೆಯಾಗಿವೆ.

 ಕರ್ನಾಟಕದಲ್ಲಿರುವ ಬ್ಲ್ಯಾಕ್ ಫಂಗಸ್‌ ಪ್ರಕರಣಗಳೆಷ್ಟು, ಮೃತಪಟ್ಟವರೆಷ್ಟು? ಕರ್ನಾಟಕದಲ್ಲಿರುವ ಬ್ಲ್ಯಾಕ್ ಫಂಗಸ್‌ ಪ್ರಕರಣಗಳೆಷ್ಟು, ಮೃತಪಟ್ಟವರೆಷ್ಟು?

1292 ಜನರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. 27 ಜನರು ಗುಣಮುಖರಾಗಿದ್ದು, 51 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಬೆಂಗಳೂರು ನಗರದಲ್ಲಿಯೇ ಅತ್ಯಧಿಕ ಅಂದರೆ 557 ಬ್ಲ್ಯಾಕ್ ಫಂಗಸ್ ಪ್ರಕರಣ ವರದಿಯಾಗಿದೆ.

ದೇಶದಲ್ಲೇ ಮೊದಲ ಚರ್ಮದ ಬ್ಲ್ಯಾಕ್ ಫಂಗಸ್ ಚಿತ್ರದುರ್ಗದಲ್ಲಿ ಪತ್ತೆದೇಶದಲ್ಲೇ ಮೊದಲ ಚರ್ಮದ ಬ್ಲ್ಯಾಕ್ ಫಂಗಸ್ ಚಿತ್ರದುರ್ಗದಲ್ಲಿ ಪತ್ತೆ

ಕರ್ನಾಟಕದಲ್ಲಿಯೇ ಅತಿ ಹೆಚ್ಚು ಬ್ಲ್ಯಾಕ್ ಫಂಗಸ್ ಪ್ರಕರಣಗಳು ಬೆಂಗಳೂರು ನಗರದಲ್ಲಿವೆ. ಆದರೆ ಬ್ಲ್ಯಾಕ್ ಫಂಗಸ್‌ನಿಂದ ಅತಿ ಹೆಚ್ಚು ಎಂದರೆ 14 ಜನರು ಧಾರವಾಡದಲ್ಲಿ ಮೃತಪಟ್ಟಿದ್ದಾರೆ. ಜಿಲ್ಲಾ ಆಸ್ಪತ್ರೆಗಳಲ್ಲಿ, ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಯಲ್ಲಿ ಸೋಂಕಿಗೆ ಚಿಕಿತ್ಸೆ ಲಭ್ಯವಿದೆ.

ಕರ್ನಾಟಕದಲ್ಲಿ ಗ್ರಾಮೀಣ ಪ್ರದೇಶದ ಇಬ್ಬರು ಮಕ್ಕಳಲ್ಲಿ ಬ್ಲ್ಯಾಕ್ ಫಂಗಸ್ ಸೋಂಕುಕರ್ನಾಟಕದಲ್ಲಿ ಗ್ರಾಮೀಣ ಪ್ರದೇಶದ ಇಬ್ಬರು ಮಕ್ಕಳಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು

ಹೆಚ್ಚು ಪ್ರಕರಣಗಳಿರುವ ಜಿಲ್ಲೆಗಳು

ಹೆಚ್ಚು ಪ್ರಕರಣಗಳಿರುವ ಜಿಲ್ಲೆಗಳು

ಕರ್ನಾಟಕದಲ್ಲಿ ಬೆಂಗಳೂರು 557. ಧಾರವಾಡ 156. ಕಲಬುರಗಿ 104. ಬಾಗಲಕೋಟೆ 70. ಬೆಳಗಾವಿ 47. ದಕ್ಷಿಣ ಕನ್ನಡ 35. ಕೋಲಾರ 43. ಮೈಸೂರು 35. ರಾಯಚೂರು 46. ಶಿವಮೊಗ್ಗ 38. ಉಡುಪಿ ಮತ್ತು ತುಮಕೂರು 10 ಪ್ರಕರಣಗಳಿವೆ.

ಯಾದಗಿರಿ 3. ವಿಜಯಪುರ 57. ಉತ್ತರ ಕನ್ನಡ 3. ರಾಮನಗರ . ಮಂಡ್ಯ 3. ಕೊಪ್ಪಳ 16. ಕೋಲಾರ 43. ಹಾಸನ 9, ಗದಗ 11. ದಾವಣಗೆರೆ 26. ಚಿಕ್ಕಮಗಳೂರು 1. ಚಿಕ್ಕಬಳ್ಳಾಪುರ 1. ಬಳ್ಳಾರಿ 6 ಬ್ಲ್ಯಾಕ್ ಫಂಗಸ್ ಪ್ರಕರಣಗಳು ದಾಖಲಾಗಿವೆ.

ಸಾವಿನ ಪ್ರಕರಣಗಳು

ಸಾವಿನ ಪ್ರಕರಣಗಳು

ಅತಿ ಹೆಚ್ಚು ಪ್ರಕರಣಗಳು ಬೆಂಗಳೂರು ನಗರದಲ್ಲಿವೆ. ಆದರೆ ಬ್ಲ್ಯಾಕ್ ಫಂಗಸ್‌ನಿಂದ ಅತಿ ಹೆಚ್ಚು ಎಂದರೆ 14 ಜನರು ಧಾರವಾಡದಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರು ನಗರದಲ್ಲಿ 6 ಜನರು ಸಾವನ್ನಪ್ಪಿದ್ದಾರೆ. ಕಲಬುರಗಿ 5. ಕೋಲಾರ 2. ಕೊಪ್ಪಳ 2. ಶಿವಮೊಗ್ಗ 5. ದಕ್ಷಿಣ ಕನ್ನಡದಲ್ಲಿ 4 ಜನರು ಮೃತಪಟ್ಟಿದ್ದಾರೆ.

ಚಿಕಿತ್ಸೆ ಪಡೆಯುತ್ತಿರುವವರು

ಚಿಕಿತ್ಸೆ ಪಡೆಯುತ್ತಿರುವವರು

ಬ್ಲ್ಯಾಕ್ ಫಂಗಸ್ ಸೋಂಕಿಗೆ ತುತ್ತಾಗಿ ಬೆಂಗಳೂರು ನಗರದಲ್ಲಿ 11, ಬೀದರ್ 1, ಕಲಬುರಗಿ 12, ಕೊಪ್ಪಳ 2, ತುಮಕೂರಿನಲ್ಲಿ ಒಬ್ಬರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಸರ್ಕಾರ ಈ ಕುರಿತು ಮಂಗಳವಾರ ಅಧಿಕೃತ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ.

Recommended Video

  ಪ್ರಪಂಚದಲ್ಲೇ ಮೊದಲ ಬಾರಿಗೆ ಮಾನವನ ದೇಹದಲ್ಲಿ ಕಾಣಿಸಿಕೊಂಡ H10N3 ವೈರಸ್ | Oneindia Kannada

  ಜಿಲ್ಲಾ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ

  ಬ್ಲ್ಯಾಕ್ ಫಂಗಸ್ ಪ್ರಕರಣಗಳ ಸಂಖ್ಯೆಯಲ್ಲಿ ಜಿಲ್ಲೆಗಳಲ್ಲಿ ಏರಿಕೆಯಾಗುತ್ತಲೇ ಇದೆ. ಜನರು ಈ ಸೋಂಕಿಗೆ ಜಿಲ್ಲಾ ಆಸ್ಪತ್ರೆಗಳು, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಚಿಕಿತ್ಸೆಯನ್ನು ಪಡೆಯಬಹುದು. ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ಕುರಿತು ಟ್ವೀಟ್ ಮಾಡಿದ್ದಾರೆ.

  English summary
  A total of 1,370 Mucormycosis also called as black fungus cases reported in Karnataka. 1,292 patients are undergoing treatment.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X