Vande Bharat Express: ಕರ್ನಾಟಕದ ಎಲ್ಲೆಲ್ಲಿ ವಂದೇ ಭಾರತ್ ರೈಲು ಸಂಚರಿಸುತ್ತವೆ? ರೂಟ್ಸ್, ಟೈಮಿಂಗ್ಸ್, ಅಪ್ಡೇಟ್ಸ್

ಬೆಂಗಳೂರು, ಮೇ 11: ಭಾರತೀಯ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ವಂದೇ ಭಾರತ್ ರೈಲು ವಿಶೇಷವಾಗಿ ಗಮನ ಸೆಳೆದಿದೆ. ಭವಿಷ್ಯದಲ್ಲಿ ದೇಶಾದ್ಯಂತ ನೂರಾರು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳೇ ಕಾರ್ಯಾಚರಣೆ ನಡೆಸಲಿವೆ. ಸದ್ಯ ಕರ್ನಾಟಕದಲ್ಲಿ ಒಟ್ಟು 12 ವಂದೇ ಭಾರತ ರೈಲುಗಳು ಸಂಚರಿಸುತ್ತಿವೆ. ರಾಜ್ಯದ ಜನರು ಒಂದು ಭಾಗದಿಂದ ಮತ್ತೊಂದೆಡೆ ಹೋಗುವ ಜನರಿಗೆ ಅಪಾರ ಅನುಕೂಲ ಒದಗಿಸಿದೆ.

ಕರ್ನಾಟಕದ ರೈಲು ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ರೈಲ್ವೆ ಸಚಿವರು ಹಾಗೂ ಕೇಂದ್ರ ರೈಲ್ವೆ ಇಲಾಖೆ ಹೆಚ್ಚಿನ ಆಧ್ಯತೆ ನೀಡುತ್ತಿದೆ. ಈಗಾಗಲೇ ಹೊಸ ಹೊಸ ರೈಲ್ವೆ ಯೋಜನೆಗಳಿಗೆ ರಾಜ್ಯ ಸಚಿವರು, ಸಂಸದರು ಸಹ ಆಗ್ರಹಿಸಿದ್ದಾರೆ. ಇದರ ಪರಿಣಾಮವಾಗಿ ಬೆಂಗಳೂರು-ಧಾರವಾಡವರೆಗೆ ಇದ್ದ ವಂದೇ ಭಾರತ್ ರೈಲು ಬೆಳಗಾವಿವರೆಗೆ ವಿಸ್ತರಣೆ ಮಾಡಲು ಒಪ್ಪಿತ್ತು. ಇದಾದ ಬಳಿಕ ಹಾವೇರಿಯಲ್ಲಿ ನಿಲುಗಡೆ ನೀಡಲಾಯಿತು.

12 Vande Bharat Express Trains Run in Karnataka Route Time Station Schedule of Those trains

ಇತ್ತೀಚೆಗೆ ಬೆಂಗಳೂರಿನಿಂದ ಬೆಳಗಾವಿ ಹೊಸ ವಂದೇ ಭಾರತ್ ರೈಲು ಬಿಡುಗಡೆ ಕೇಂದ್ರ ರೈಲ್ವೆ ಇಲಾಖೆ ಒಪ್ಪಿದೆ. ಈ ಮೂಲಕ ಕರ್ನಾಟಕಕ್ಕೆ ಮತ್ತೊಂದು ರೈಲು ಸಿಕ್ಕಂತಾಗಿದೆ. ಇದಕ್ಕೆ ಸಂಸದ ಜಗದೀಶ್ ಶೆಟ್ಟರ್ ಕೇಂದ್ರ ಅಭಿನಂದನೆ ತಿಳಿಸಿದ್ದಾರೆ. ಇದು ಕರ್ನಾಟಕದ ಒಳಗಿನ ರೈಲಾದರೆ, ಕರ್ನಾಟಕ ಮಾರ್ಗವಾಗಿ ಬೇರೆ ಬೇರೆ ರಾಜ್ಯಗಳಿಗೂ ವಂದೇ ಭಾರತ್ ರೈಲುಗಳು ಓಡಾಡುತ್ತವೆ. ಯಾವೆಲ್ಲ ಮಾರ್ಗಗಳು ಯಾವಾಗೆಲ್ಲ ಸಂಚರಿಸುತ್ತವೆ. ರೈಲು ಸಂಖ್ಯೆ, ಸಮಯ ವೇಳಾಪಟ್ಟಿ, ಮಾರ್ಗಗಳ ವಿವರ ಇಲ್ಲಿದೆ.

ಕರ್ನಾಟಕದ ವಂದೇ ಭಾರತ್ ರೈಲುಗಳ ಪಟ್ಟಿ

1. KSR ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (20661)
* ಬಿಡುವ ಸಮಯ: 05:45 ಗಂಟೆಗೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣ
* ಸೇರುವ ಸಮಯ: ಧಾರವಾಡ 12:10 ಗಂಟೆಗೆ
* ಪ್ರಯಾಣ ಅವಧಿ: 6 ಗಂಟೆ 25 ನಿಮಿಷಗಳು

Take a Poll

2. ಮೈಸೂರು-ಎಂಜಿಆರ್ ಚೆನ್ನೈ ಸೆಂಟ್ರಲ್ ವಂದೇ ಭಾರತ್ ರೈಲು (20608)
* ಮೈಸೂರಿಂದ ಬಿಡುವ ಸಮಯ: 13:05 ಗಂಟೆ
* ತಲುಪುವ ಸಮಯ: 19:20 ಗಂಟೆ
* ಪ್ರಯಾಣ ಅವಧಿ: ಗಂಟೆ 15 ನಿಮಿಷ

3. ಯಶವಂತಪುರ - ಕಾಚೆಗುಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (20704)
* ಯಶವಂತಪುರ ಬಿಡುವ ಸಮಯ: 14:45 ಗಂಟೆ
* ತಲುಪುವ ಸಮಯ: 23:00 ಗಂಟೆಗೆ
* ಪ್ರಯಾಣ ಅವಧಿ: ಗಂಟೆ 15 ನಿಮಿಷ

4. ಬೆಂಗಳೂರು ಕಂ.-ಕೊಯಮತ್ತೂರು ವಂದೇ ಭಾರತ್ ರೈಲು (20641)
* ಬೆಂಗಳೂರು ಕಂಟೋನ್ಮೆಂಟ್ ಬಿಡುವ ಸಮಯ: 14:20 ಗಂಟೆ
* ತಲುಪುವ ಸಮಯ: ಕೊಯಮತ್ತೂರು 20:40 ಗಂಟೆಗೆ
* ಪ್ರಯಾಣ ಅವಧಿ: ಗಂಟೆ 20 ನಿಮಿಷ

5. ಮಂಗಳೂರು ಸೆಂಟ್ರಲ್-ಮಡ್ಗಾಂವ್ ವಂದೇ ಭಾರತ್ ರೈಲು (20646)
* ಮಂಗಳೂರು ಸೆಂಟ್ರಲ್ ಬಿಡುವ ಸಮಯ:08:30 ಗಂಟೆಗೆ
* ತಲುಪುವ ಸಮಯ: 13:10 ಗಂಟೆಗೆ
* ಪ್ರಯಾಣ ಅವಧಿ: ಗಂಟೆ 40 ನಿಮಿಷಗಳು

6. ಕಾಸರಗೋಡು - ತಿರುವನಂತಪುರಂ ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20633)
* ಕಾಸರಗೋಡು ಬಿಡುವ ಸಮಯ: 14:30 ಗಂಟೆ
* ತಲುಪುವ ಸಮಯ: 22:40 ಗಂಟೆಗೆ
* ಪ್ರಯಾಣ ಅವಧಿ: ಗಂಟೆ 10 ನಿಮಿಷಗಳು

7. ಕಲಬುರಗಿ - SMVT ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 22231)
* ಕಲಬುರಗಿ ಬಿಡುವ ಸಮಯ: 05:15 ಗಂಟೆ
* ತಲುಪುವ ಸಮಯ: 14:00 ಗಂಟೆಗೆ
* ಪ್ರಯಾಣ ಅವಧಿ: ಗಂಟೆ 45 ನಿಮಿಷಗಳು

8. SMVT ಬೆಂಗಳೂರು-ಕಲಬುರಗಿ ವಂದೇ ಭಾರತ್ ರೈಲು (22232)
* SMVT ಬೆಂಗಳೂರು ಬಿಡುವ ಸಮಯ: 23:30 ಗಂಟೆ
* ಕಲಬುರಗಿ ತಲುಪುವ ಸಮಯ: 23:30 ಗಂಟೆ
* ಪ್ರಯಾಣ ಅವಧಿ: ಗಂಟೆ 50 ನಿಮಿಷ

9. SMVT ಬೆಂಗಳೂರು-MGR ಚೆನ್ನೈ ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ (20663)
* SMVT ಬೆಂಗಳೂರು ಬಿಡುವ ಸಮಯ: 00:15 ಗಂಟೆ
* ತಲುಪುವ ಸಮಯ: ಸುಮಾರು 04:39 ಗಂಟೆ
* ಪ್ರಯಾಣ ಅವಧಿ: ಗಂಟೆ 24 ನಿಮಿಷ

10. ಬೆಂಗಳೂರು ಕಂಟೋನ್ಮೆಂಟ್-ಮಧುರೈ ವಂದೇ ಭಾರತ್ ಎಕ್ಸ್‌ಪ್ರೆಸ್ (20672)
* ಬೆಂಗಳೂರು ಕಂಟೋನ್ಮೆಂಟ್ ಬಿಡುವ ಸಮಯ: 13:30 ಗಂಟೆ
* ತಲುಪುವ ಸಮಯ: 21:40 ಗಂಟೆಗೆ
* ಪ್ರಯಾಣ ಅವಧಿ: ಗಂಟೆ 10 ನಿಮಿಷಗಳು

11. ಎಸ್‌ಎಸ್‌ಎಸ್ ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20669)
* ಎಸ್‌ಎಸ್‌ಎಸ್ ಹುಬ್ಬಳ್ಳಿ ಬಿಡುವ ಸಮಯ: 05:00 ಗಂಟೆಗೆ
* ತಲುಪುವ ಸಮಯ: 13:30 ಗಂಟೆಗೆ
* ಪ್ರಯಾಣ ಅವಧಿ: ಗಂಟೆ 30 ನಿಮಿಷಗಳು

12. ಬೆಳಗಾವಿ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸದ್ಯ ಹೊಸದಾಗಿ ಘೋಷಣೆ ಆಗಿದೆ. ಇದರ ವೇಳಾಪಟ್ಟಿ ಸಮಯ ಸಿಗಬೇಕಿದೆ. ಬಹುನಿರೀಕ್ಷೆಯ ಈ ರೈಲು ದಕ್ಷಿಣದಿಂದ ಉತ್ತರ ಕರ್ನಾಟಕದ ಮತ್ತೊಂದು ಗಡಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಭಾಗದಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಿರುತ್ತದೆ. ಆದ್ದರಿಂದ ಕೇಂದ್ರ ರೈಲ್ವೆ ಇಲಾಖೆ ನಿರ್ಧಾರ ಸ್ವಾಗತಾರ್ಹವಾಗಿದೆ.

ಹೊಸ ರೈಲ್ವೆ ಮಾರ್ಗದಲ್ಲೂ ವಂದೇ ಭಾರತ್?
ಉತ್ತರ ಕರ್ನಾಟದ ಬೇಡಿಕೆಯ ಬೆಳಗಾವಿ ಮತ್ತು ಬೆಂಗಳೂರು ಮಧ್ಯೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಆರಂಭ ಹರ್ಷದ ಸಂಗತಿಯಾಗಿದೆ. ಸುರಕ್ಷತೆ, ವೇಗದ ಪ್ರಯಾಣ ಸಾರಿಗೆಯಾಗಿದೆ. ಪ್ರಯಾಣಿಕರು ಇದರಲ್ಲಿ ಪ್ರಯಾಣ ಮಾಡುವ ಆಧುನಿಕ ವೈಶಿಷ್ಟ್ಯಗಳು, ವಿನ್ಯಾಸ, ವ್ಯವಸ್ಥಿತ ಮೂಲಸೌಕರ್ಯ ಹಾಗೂ ಆರಾಮದಾಯಕ ಪ್ರಯಾಣದ ಅನುಭವ ಪಡೆಯಲಿದ್ದಾರೆ.

ಕರ್ನಾಟಕದ ಮೈಸೂರು, ಕಲಬುರಗಿ, ಬೆಳಗಾವಿ, ಬೆಂಗಳೂರು ನಗರ ಸೇರಿದಂತೆ ಎಲ್ಲ ದಿಕ್ಕುಗಳಲ್ಲೂ ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಇದು ಆರ್ಥಿಕ ಬೆಳವಣಿಗೆಗೆ , ಪ್ರವಾಸಿಗರನ್ನು ಸೆಳೆಯಲು ಸಹಾಯವಾಗುತ್ತದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಕ್ಕಂತಾಗುತ್ತದೆ. ಇದಷ್ಟೇ ಅಲ್ಲದೇ ರಾಜ್ಯದಲ್ಲಿ ಹೊಸ ರೈಲ್ವೆ ಯೋಜನೆಗಳು ನಿರ್ಮಾಣಗೊಳ್ಳುತ್ತಿವೆ. ಭವಿಷ್ಯದಲ್ಲಿ ಆ ಮಾರ್ಗಗಳಲ್ಲೂ ವಂದೇ ಭಾರತ್ ರೈಲುಗಳು ಸಂಚರಿಸುವ ನಿರೀಕ್ಷೆ ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+