ಕರ್ನಾಟಕ; ಬೆಂಗಳೂರಲ್ಲಿ 10 ಓಮಿಕ್ರಾನ್ ಪ್ರಕರಣ ಪತ್ತೆ

ಬೆಂಗಳೂರು, ಡಿಸೆಂಬರ್ 24; ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲಿ ಧಿಡೀರ್ ಏರಿಕೆಯಾಗಿದೆ. ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 358 ಆಗಿದ್ದು, ಕರ್ನಾಟಕದಲ್ಲಿ 12 ಹೊಸ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಬೆಂಗಳೂರು ನಗರದಲ್ಲಿಯೇ 10 ಪ್ರಕರಣ ದಾಖಲಾಗಿದೆ.

ಗುರುವಾರ ಕರ್ನಾಟಕದಲ್ಲಿ 12 ಹೊಸ ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಅತಿ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗಿರುವ ರಾಜ್ಯ ಮಹಾರಾಷ್ಟ್ರ (88).

ಕರ್ನಾಟಕದ ಹೊಸ ಪ್ರಕರಣಗಳಲ್ಲಿ ಅಘಾತಕಾರಿ ಅಂಶಗಳಿವೆ. ಬೆಂಗಳೂರು ನಗರದಲ್ಲಿಯೇ 10 ಹೊಸ ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 11 ವರ್ಷದ ಮಗು ಮತ್ತು ಮೈಸೂರಿನಲ್ಲಿ 9 ವರ್ಷದ ಮಗುವಿಗೆ ಓಮಿಕ್ರಾನ್ ಸೋಂಕು ತಗುಲಿದೆ. ಗುರುವಾರ ಬೆಂಗಳೂರು, ಮಂಗಳೂರು, ಮೈಸೂರಿನಲ್ಲಿ ಹೊಸ ಓಮಿಕ್ರಾನ್ ಪ್ರಕರಣ ದಾಖಲಾಗಿದೆ.

12 New Omicron Cases Reported In Karnataka Total Cases Number 31

ಹೊಸ ಪ್ರಕರಣಗಳ ವಿವರ; ಗುರುವಾರ ಪತ್ತೆಯಾದ ಹೊಸ ಪ್ರಕರಣಗಳಲ್ಲಿ ಮಂಗಳೂರಿನ 27 ವರ್ಷದ ಪುರುಷನಿಗೆ ಸೋಂಕು ಖಚಿತವಾಗಿದೆ. ಅವರು ಘನಾದಿಂದ ಮರಳಿದವರು ಎಂಬ ಮಾಹಿತಿ ಸಿಕ್ಕಿದೆ.

ಮೈಸೂರಿನಲ್ಲಿ ಓಮಿಕ್ರಾನ್ ಪತ್ತೆಯಾದ 9 ವರ್ಷದ ಮಗು ಡಿಸೆಂಬರ್ 19ರಂದು ಸ್ವಿಜರ್ಲ್ಯಾಂಡ್‌ನಿಂದ ಅಬುದಾಬಿ ಮೂಲಕ ವಾಪಸ್ ಆಗಿತ್ತು. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಮಾದರಿ ಪಡೆಯಲಾಗಿತ್ತು. ಆದರೆ ಮಗುವಿನ ಅಪ್ಪ, ಅಮ್ಮನ ಓಮಿಕ್ರಾನ್ ಪರೀಕ್ಷೆ ವರದಿ ನೆಗೆಟಿವ್ ಬಂದಿದೆ.

ಬೆಂಗಳೂರಿನಲ್ಲಿ ಓಮಿಕ್ರಾನ್ ಪ್ರಕರಣ ಖಚಿತವಾಗಿ 11 ವರ್ಷದ ಮಗು 18/12/2021ರಂದು ಯುನೈಟೆಡ್ ಕಿಂಗ್‌ಡಮ್‌ನಿಂದ ಆಗಮಿಸಿತ್ತು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಾದರಿ ಸಂಗ್ರಹ ಮಾಡಲಾಗಿತ್ತು. ಅಂದೇ ಓಮಿಕ್ರಾನ್ ದೃಢಪಟ್ಟಿದ್ದು ಅಂಬ್ಯುಲೆನ್ಸ್ ಮೂಲಕ ಬೌರಿಂಗ್ ಆಸ್ಪತ್ರೆಗೆ ಕಳುಹಿಸಲಾಗಿದೆ.

ಕರ್ನಾಟಕದ ಉಳಿದ ಪ್ರಕರಣಗಳ ವಿವರ

* 20 ವರ್ಷದ ಯುವತಿ, ಬೆಂಗಳೂರು
* 56 ವರ್ಷದ ಪುರುಷ, ಬೆಂಗಳೂರು
* 54 ವರ್ಷದ ಮಹಿಳೆ, ಬೆಂಗಳೂರು
* 31 ವರ್ಷದ ಪುರುಷ, ಬೆಂಗಳುರು (ಯುಕೆಯಿಂದ ವಾಪಸ್)
* 42 ವರ್ಷದ ಪುರುಷ, ಬೆಂಗಳೂರು (ಯುಕೆಯಿಂದ ವಾಪಸ್)
* 18 ವರ್ಷದ ಯುವತಿ, ಬೆಂಗಳೂರು (ಯುಕೆಯಿಂದ ವಾಪಸ್)
* 21 ವರ್ಷದ ಪುರುಷ, ಬೆಂಗಳೂರು (ಯುಕೆಯಿಂದ ವಾಪಸ್)
* 49 ವರ್ಷದ ಮಹಿಳೆ, ಬೆಂಗಳೂರು (ಡೆನ್ಮಾರ್ಕ್‌ದಿಂದ ವಾಪಸ್)
* 11 ವರ್ಷದ ಮಗು, ಬೆಂಗಳೂರು (ಯುಕೆಯಿಂದ ವಾಪಸ್)
* 59 ವರ್ಷದ ಮಹಿಳೆ ಬೆಂಗಳೂರು (ನೈಜೀರಿಯಾದಿಂದ ವಾಪಸ್)

ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಗುರುವಾರದ ಹೆಲ್ತ್ ಬುಲೆಟಿನ್ ಪ್ರಕಾರ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ 299 ಆಗಿದೆ. 24 ಗಂಟೆಯಲ್ಲಿ 318 ಜನರು ಡಿಸ್ಚಾರ್ಜ್ ಆಗಿದ್ದಾರೆ.

ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 7117. 24 ಗಂಟೆಯಲ್ಲಿ ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 3003564, ಒಟ್ಟು ಮೃತಪಟ್ಟವರು 38301.

ಮಾರ್ಗಸೂಚಿ ಪ್ರಕಟ; ಓಮಿಕ್ರಾನ್ ಭೀತಿ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಕ್ರಿಸ್‌ ಮಸ್ ಮತ್ತು ಹೊಸ ವರ್ಷದ ಆಚರಣೆಗೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಪ್ರಾರ್ಥನೆಗಳು ನಡೆಸಲು ಯಾವುದೇ ಸಾರ್ವಜನಿಕ ಸ್ಥಳಗಳು/ ರಸ್ತೆಗಳು ಉದ್ಯಾನವನ ಇತ್ಯಾದಿಗಳನ್ನು ಬಳಸುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಹೊಸ ವರ್ಷದ ಆಚರಣೆಗೆ ಕ್ಲಬ್/ ಪಬ್/ ರೆಸ್ಟೋರೆಂಟ್/ ಹೋಟೆಲ್/ ಉದ್ಯಾನವನಗಳು ಅಥವ ಖಾಸಗಿ ಸ್ಥಳಗಳಲ್ಲಿ ಡಿಜೆ/ ಆರ್ಕೆಸ್ಟ್ರಾ/ ಸಮೂಹ ನೃತ್ಯ ಮುಂತಾದ ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಇರುವುದಿಲ್ಲ.

ರೆಸ್ಟೋರೆಂಟ್/ ಹೋಟೆಲ್/ ಕ್ಲಬ್/ ಪಬ್ ಎಂದಿನಂತೆ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಬೇಕು. ಸಿಬ್ಬಂದಿಗಳಿಗೆ ಆರ್‌ಟಿಸಿಆರ್‌ ನೆಗೆಟಿವ್ ವರದಿ ಕಡ್ಡಾಯ ಮತ್ತು ಎರಡು ಡೋಸ್ ಲಸಿಕೆಯನ್ನು ಪಡೆದಿರಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+