ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಒಂದೇ ದಿನ 10145 ಮಂದಿಗೆ ಕೊವಿಡ್-19

|
Google Oneindia Kannada News

ಬೆಂಗಳೂರು, ಅಕ್ಟೋಬರ್.04: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 640661ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲೇ 10145 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ.

ರಾಜ್ಯದಲ್ಲಿ ಒಂದೇ ದಿನ ಕೊರೊನಾವೈರಸ್ ಸೋಂಕಿಗೆ 67 ಜನರು ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 9286ಕ್ಕೆ ಏರಿಕೆಯಾಗಿದೆ. ಕೊವಿಡ್-19 ಸೋಂಕಿತ ಪ್ರಕರಣ ಸಂಬಂಧ ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.

ಒಡಿಶಾದಲ್ಲಿ ಸಿಎಂ ಪರಿಹಾರ ನಿಧಿಯಿಂದ ಕೊವಿಡ್19 ನಿರ್ವಹಣೆಗೆ 472 ಕೋಟಿಒಡಿಶಾದಲ್ಲಿ ಸಿಎಂ ಪರಿಹಾರ ನಿಧಿಯಿಂದ ಕೊವಿಡ್19 ನಿರ್ವಹಣೆಗೆ 472 ಕೋಟಿ

ಕೊರೊನಾವೈರಸ್ ಒಟ್ಟು 640661 ಸೋಂಕಿತ ಪ್ರಕರಣಗಳ ಪೈಕಿ 515782 ಸೋಂಕಿತರು ಗುಣಮುಖರಾಗಿದ್ದಾರೆ. 115574 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿದು ಬಂದಿದೆ. ಕಳೆದ 24 ಗಂಟೆಗಳಲ್ಲಿ 7287 ಕೊವಿಡ್-19 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

10145 New Coronavirus Cases Reported in Karnataka Today, State Tally Rise to 640661

ಯಾವ ಜಿಲ್ಲೆಗಳಲ್ಲಿ ಎಷ್ಟು ಕೊರೊನಾವೈರಸ್ ಕೇಸ್?:

ರಾಜ್ಯದಲ್ಲಿ ಒಟ್ಟು 10145 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 97, ಬಳ್ಳಾರಿ 304, ಬೆಳಗಾವಿ 224, ಬೆಂಗಳೂರು ಗ್ರಾಮಾಂತರ 274, ಬೆಂಗಳೂರು 4340, ಬೀದರ್ 65, ಚಾಮರಾಜನಗರ 141, ಚಿಕ್ಕಬಳ್ಳಾಪುರ 128, ಚಿಕ್ಕಮಗಳೂರು 227, ಚಿತ್ರದುರ್ಗ 122, ದಕ್ಷಿಣ ಕನ್ನಡ 293, ದಾವಣಗೆರೆ 106, ಧಾರವಾಡ 90, ಗದಗ 110, ಹಾಸನ 307, ಹಾವೇರಿ 112, ಕಲಬುರಗಿ 121, ಕೊಡಗು 148, ಕೋಲಾರ 165, ಕೊಪ್ಪಳ 85, ಮಂಡ್ಯ 233, ಮೈಸೂರು 1037, ರಾಯಚೂರು 124, ರಾಮನಗರ 182, ಶಿವಮೊಗ್ಗ 279, ತುಮಕೂರು 245, ಉಡುಪಿ 231, ಉತ್ತರ ಕನ್ನಡ 84, ವಿಜಯಪುರ 152, ಯಾದಗಿರಿ 119 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

Recommended Video

ಇದು ರಾಜಕೀಯ ಪ್ರೇರೇಪಿತ ,by - election ಹತ್ರ ಬಂತಲ್ಲಾ ? | Oneindia Kannada

English summary
10145 New Coronavirus Cases Reported in Karnataka Today, State Tally Rise to 640661.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X