ಚುನಾವಣಾ ಪ್ರಚಾರಕ್ಕಾಗಿ 10000ಕ್ಕೂ ಹೆಚ್ಚು ಸರ್ಕಾರಿ ಬಸ್‌ಗಳು ಬುಕ್‌: ಮೇ 5 ರಿಂದ 13ರ ವರಗೆ ರಾಜ್ಯದಲ್ಲಿ ಬಸ್ಸುಗಳ ಕೊರತೆ

ಬೆಂಗಳೂರು, ಏಪ್ರಿಲ್‌, 27: ವಿಧಾನಸಭೆ ಚುನವಣೆ ಹಿನ್ನೆಲೆ ಪ್ರಚಾರಕ್ಕಾಗಿ ರಾಜ್ಯಾದ್ಯಂತ 10 ಸಾವಿರಕ್ಕೂ ಹೆಚ್ಚು ಸರ್ಕಾರಿ ಬಸ್‌ಗಳನ್ನು ಬುಕ್ ಮಾಡಲಾಗಿದ್ದು, ಈ ಹಿನ್ನೆಲೆ ಮೇ 5ರಿಂದ 13ರವರೆಗೂ ಪ್ರಯಾಣಿಕರಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಿಎಂಟಿಸಿ, ಕೆಎಸ್ಆರ್​ಟಿಸಿ, ಹಾಗೂ ಆರ್​ಟಿಒ ಬಸ್‌ಗಳನ್ನು ಚುನಾವಣಾ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳುತ್ತಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಚುನಾವಣೆ ಪ್ರಚಾರಕ್ಕೆ ಬೇಕಾದ ಸಾರಿಗೆ ವ್ಯವಸ್ಥೆಗೆ ಈಗಾಗಲೇ ಬಸ್‌ಗಳ ಬುಕಿಂಗ್ ಕಾರ್ಯವೂ ಆರಂಭವಾಗಿದೆ. ಪ್ರಚಾರದ ವೇಳೆ ರಾಜ್ಯ ರಾಜಧಾನಿ ಬೆಂಗಳೂರಿಗೆ ಬಸ್‌ಗಳ ಕೊರತೆ ಉಂಟಾಗುವ ಸಾಧ್ಯತೆಯಿದೆ.

10000+ Govt Busses are Booked for Election Campaigns: Commuters May Face Shortage from May 5 to 13

ಮತ್ತೊಂದೆಡೆ ಚುನಾವಣಾ ಅಧಿಕಾರಿಗಳು ಈಗಾಗಲೇ ಚುನಾವಣೆಗೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಹಾಗೆಯೆ ಸಾರಿಗೆ ವ್ಯವಸ್ಥೆಗೆ ರಾಜ್ಯಾದ್ಯಂತ ಅಂದಾಜು ಬಿಎಂಟಿಸಿ, ಕೆಎಸ್​ಆರ್​ಟಿಸಿ ಹಾಗೂ ಆರ್​ಟಿಒ ವಾಹನಗಳನ್ನು ಸೇರಿದಂರೆ 10 ಸಾವಿರಕ್ಕೂ ಹೆಚ್ಚು ಬಸ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ ಎನ್ನಲಾಗುತ್ತದೆ.

ಪ್ರಚಾರಕ್ಕೆ ಮೇ 5 ರಿಂದ ಮೇ 13ರ ವರೆಗೂ ಬಸ್‌ಗಳ ಅವಶ್ಯಕತೆ ಇದ್ದೇ ಇರುತ್ತದೆ. ಆದ್ದರಿಂದ ಚುನಾವಣಾ ಅಧಿಕಾರಿಗಳು ಕೆಎಸ್​ಆರ್​ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳನ್ನು ಈಗಿನಿಂದಲೇ ಬುಕಿಂಗ್ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಪೈಕಿ ಬಿಬಿಎಂಪಿ ವ್ಯಾಪ್ತಿಯಲ್ಲಿ 28 ವಿಧಾನಸಭಾ 1000-2000 ಬಸ್‌ಗಳನ್ನ ಬುಕ್ ಮಾಡಿಕೊಳ್ಳಲಾಗುತ್ತದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಜೊತೆಗೆ 700ಕ್ಕೂ ಅಧಿಕ ಆರ್​ಟಿಒ ವಾಹನಗಳನ್ನು ಸ್ಕ್ರೀನಿಂಗ್ ಹಾಗೂ ಸ್ಕ್ವಾಡ್‌ಗಳಿಗೆ ನೀಡಲು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹಾಗೆಯೆ ಸರ್ಕಾರಿ ಬಸ್‌ಗಳನ್ನು ಪೊಲೀಸ್ ಇಲಾಖೆ, ಬಿಬಿಎಂಪಿ, ಆರ್​ಟಿಒ, ಸಾರಿಗೆ ಇಲಾಖೆಗಳ ಸಿಬ್ಬಂದಿಗಾಗಿ ಹಾಗೂ ಹಲವು ಚುನಾವಣಾ ಕೆಲಸಗಳಿಗಾಗಿ ಬಳಕೆ ಮಾಡಲಾಗುತ್ತದೆ. ಈ 10,000 ಬಸ್‌ಗಳನ್ನು ಮೇ 5ರಿಂದ 13ರವರೆಗೂ ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಇದರಿಂದ ಊರುಗಳಿಗೆ ಪ್ರಯಾಣ ಬೆಳೆಸುವ ಜನರಿಗೆ ಬಸ್‌ಗಳ ಕೊರತೆ ಆಗುವ ಸಾಧ್ಯತೆಗಳಿವೆ. ಸಿಲಿಕಾನ್‌ ಸಿಟಿಯಲ್ಲಿ 8,063 ಪೋಲಿಂಗ್ ಬೂತ್‌ಗಳಿದ್ದು, ಅವುಗಳನ್ನು ಮತ ಕೇಂದ್ರಗಳಿಗೆ ತೆಗೆದುಕೊಂಡು ಹೋಗಲು ಮತ್ತು ಮತದಾನ ಮುಗಿದ ಮೇಲೆ ಸ್ಟ್ರಾಂಗ್ ರೂಂಗೆ ಕೊಂಡೊಯ್ಯಲು ವಾಹನಗಳು ಅತ್ಯವಶ್ಯಕವಾಗಿರುತ್ತವೆ.

ಇವೆಲ್ಲ ಕಾರ್ಯಗಳಿಗೂ ಅನುಕೂಲ ಆಗುವ ನಿಟ್ಟಿನಲ್ಲಿ ನಗರದಲ್ಲಿರುವ ಪ್ರತಿ ಆರ್‌ಟಿಒ ಕಚೇರಿಗಳಿಗೂ 100-2000 ವಾಹನಗಳನ್ನು ಕೊಡುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ಆರ್​ಟಿಒ ಅಧಿಕಾರಿಗಳು ಕೂಡ ಚುನಾವಣೆ ಸಿದ್ದತೆಗೆ ಬೇಕಾದ ವಾಹನಗಳನ್ನು ನೀಡಲು ಸಿದ್ಧತೆ ಕೈಗೊಂಡಿದ್ದಾರೆ.

ಹೀಗೆ ಚುನಾವಣೆ ಸಮಯದಲ್ಲಿ ಯಾವುದೇ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಂಡಿರುವ ಅಧಿಕಾರಿಗಳು, ಮತ್ತೊಂದೆಡೆ ಜನರಿಗೆ ಸಾರಿಗೆ ವ್ಯವಸ್ಥೆಯ ಅಭಾವ ಆಗದಂತೆ ಯಾವ ರೀತಿ ಕ್ರಮ ಕೈಗೊಳ್ಳಲಿದ್ದಾರೆ ಎಂಬುದೇ ಪ್ರಶ್ನೆಯಾಗಿದೆ. ಒಟ್ಟಿನಲ್ಲಿ ಹೆಚ್ಚಿನ ಸರ್ಕಾರಿ ಬಸ್‌ಗಳನ್ನು ಚುನವಣೆ ಕಾರ್ಯಗಳಿಗಾಗಿ ಬಳಸಿಕೊಳ್ಳುತ್ತಿದ್ದು, ಇದರಿಂದ ಬೇರೆ ಊರುಗಳಿಗೆ ಪ್ರಯಾಣ ಬೆಳೆಸುವ ಜನರು ತೊಂದರೆ ಅನುಭವಿಸುವ ಸಾಧ್ಯತೆಯೂ ಇದೆ. ಇದಕ್ಕೆ ಅಧಿಕಾರಿಗಳು ಮುಂದೆ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನುವುದನ್ನು ಕೂಡ ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+