ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

100 ಸ್ಟಾರ್ಟ್ ಅಪ್ ಗಳಿಗೆ ರಾಜ್ಯ ಸರಕಾದಿಂದ 400 ಕೋಟಿ ರೂ. ನೆರವು

By Sachhidananda Acharya
|
Google Oneindia Kannada News

ಬೆಂಗಳೂರು, ಜುಲೈ 4: 100 ಸ್ಟಾರ್ಟ್ ಅಪ್ ಸಂಸ್ಥೆಗಳಿಗೆ 400 ಕೋಟಿ ನೆರವು ನೀಡಲು ಕರ್ನಾಟಕ ಸರಕಾರ ನಿರ್ಧರಿಸಿದೆ.
'ಎಲಿವೇಟ್-100' ಸಂಸ್ಥೆ ಮೂಲಕ ಪ್ರತಿಭಾನ್ವಿತರನ್ನು ಗುರುತಿಸಿ ಆರ್ಥಿಕ ಹಾಗೂ ತಾಂತ್ರಿಕ ನೆರವು ನೀಡಲು ಸರಕಾರ ಐಟಿ-ಬಿಟಿ ಇಲಾಖೆ ಮುಂದಾಗಿದ್ದು ಇದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ.

ಈ ಸಂಬಂಧ ಮಾತನಾಡಿರುವ ಕಾರ್ಮಿಕ ಸಚಿವ ಪ್ರಿಯಾಂಕ್ ಖರ್ಗೆ, "ಸ್ಟಾರ್ಟ್ ಅಪ್ ಕಂಪೆನಿಗಳನ್ನು ಗುರುತಿಸಿ ಅವುಗಳಿಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಖಾಸಗಿ ಉದ್ದಿಮೆಗಳು, ತಂತ್ರಜ್ಞರನ್ನೊಳಗೊಂಡ 'ಎಲಿವೇಟ್-100' ಸಂಸ್ಥೆ ಸಹಯೋಗದಲ್ಲಿ ಸೃಜನಶೀಲ, ಸಂಶೋಧನಾತ್ಮಕ, ಕ್ರಿಯಾಶೀಲ ಹೊಸ ಹೊಸ ಆಲೋಚನೆಗಳನ್ನು ಇಟ್ಟುಕೊಂಡು ಸಂಸ್ಥೆ ಕಟ್ಟಲು ಮುಂದಾಗುವವರಿಗೆ ಆರ್ಥಿಕ ನೆರವು ಜತೆಗೆ ತಾಂತ್ರಿಕ ಹಾಗೂ ವ್ಯಾಪಾರಿ ಸಂಬಂಧಿತ ನೆರವು ನೀಡಲಾಗುತ್ತದೆ," ಎಂದು ಹೇಳಿದ್ದಾರೆ. ಅರ್ಜಿ ಸಲ್ಲಿಸಲು ಜುಲೈ 18 ಕೊನೆಯ ದಿನವಾಗಿದೆ.

100 Startups in Karnataka to receive Rs. 400 crore fund

40 ಸ್ಟಾರ್ಟ್ ಅಪ್ ಗಳಿಗೆ 15.68 ಕೋಟಿ ಮಂಜೂರು

ಇನ್ನು ಇಲ್ಲಿಯವರೆಗೆ 40 ಸ್ಟಾರ್ಟ್ ಅಪ್‍ಗಳಿಗೆ ರಾಜ್ಯ ಸರಕಾರ 15.68 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ.
ಇದರಲ್ಲಿ ಬಯೋಟೆಕ್ನಾಲಜಿಗೆ ಸಂಬಂಧಿಸಿದ 26 ಸ್ಟಾರ್ಟ್ ಅಪ್‍ಗಳಿಗೆ 10.70 ಕೋಟಿ ರೂ., ಮಾಹಿತಿ ತಂತ್ರಜ್ಞಾನ ಕ್ಷೇತ್ರದ 12 ಸ್ಟಾರ್ಟ್ ಅಪ್‍ಗಳಿಗೆ 3.18 ಕೋಟಿ ರೂ., ಪ್ರವಾಸೋದ್ಯಮ ಕ್ಷೇತ್ರದ 8 ಸ್ಟಾರ್ಟ್‍ಅಪ್‍ಗಳಿಗೆ 1.80 ಕೋಟಿ ರೂ. ಅನುದಾನ ನೀಡಲಾಗಿದೆ.

ಹೊಸದಾಗಿ ಇದೀಗ ಇನ್ನೂ 100 ಸ್ಟಾರ್ಟ್‍ ಅಪ್‍ಗಳನ್ನು ಗುರುತಿಸಿ ಕಾರ್ಯರೂಪಕ್ಕೆ ತರಲು ಸರಕಾರ ಮುಂದಾಗಿದೆ. ಇದಕ್ಕಾಗಿ 400 ಕೋಟಿ ರೂ. ಅನುದಾನವನ್ನೂ ನೀಡಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಮಂಗಳೂರು, ಕಲಬುರಗಿ ಸೇರಿದಂತೆ ರಾಜ್ಯದ ಇನ್ನಿತರ ಕಡೆಗಳಲ್ಲೂ ಸ್ಟಾರ್ಟ್ ಅಪ್ ಯೋಜನೆ ಆರಂಭಿಸಲು ರಾಜ್ಯ ಸರಕಾರ ಚಿಂತನೆ ಆರಂಭಿಸಿದೆ.

English summary
The Karnataka government will spend Rs. 400 crore under ‘Elevate Programme’ to 100 startups by providing them funds to help them turn their ideas into successful businesses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X