Get Updates
Get notified of breaking news, exclusive insights, and must-see stories!

ಕರ್ನಾಟಕ ಕಾಂಗ್ರೆಸ್‌ಗೆ ಶತಕ ಸಂಭ್ರಮ: ರಾಜ್ಯ 'ಕೈಗಾರಿಕೆ-ಮೂಲಸೌಕರ್ಯ'ದಲ್ಲಾದ ಅಭಿವೃದ್ಧಿಗಳ ಪಟ್ಟಿ ತಿಳಿಯಿರಿ

ಬೆಂಗಳೂರು, ಸೆಪ್ಟಂಬರ್ 01: ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಅಂದುಕೊಂಡಂತೆ ಜಾರಿಗೊಳಿಸುತ್ತಿರುವ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 100 ದಿನ ಪೂರೈಸಿದೆ. ಈ ಸಂಬಂಧ ಸಂಪುಟ ಸಚಿವರಲ್ಲಿ ಸಂಭ್ರಮ ಮನೆ ಮಾಡಿದೆ. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರು 'ಶತಕದ ಸಂಭ್ರಮ' ಕುರಿತು ಅಭಿವೃದ್ಧಿ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಖಷಿ ಹಂಚಿಕೊಂಡಿದ್ದರು.

ಇದೀಗ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಸಚಿವರಾದ ಎಂ.ಬಿ.ಪಾಟೀಲ್ ಅವರು ತಮ್ಮ ವ್ಯಾಪ್ತಿಯಲ್ಲಿ ಆದ ಅಭಿವೃದ್ಧಿ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು. ತಾವು ಅಧಿಕಾರಕ್ಕೆ ಬಂದು ನೂರು ದಿನ ಪೂರೈಸಿದ್ದು, ನುಡಿದಂತೆ ನಡೆದಿದ್ದೇವೆ ಎಂದರು.

100 Days Of Karnataka Congress Govt: MB Patil Revealed His Departments Development List

ಚುನಾವಣೆ ಸಂದರ್ಭದಲ್ಲಿ ನೀಡಿದ್ದ 5 ಪ್ರಮುಖ ಭರವಸೆಗಳ ಪೈಕಿ ನಾಲ್ಕನ್ನು ಮೊದಲ 100 ದಿನಗಳಲ್ಲೇ ಈಡೇರಿಸಿದ್ದೇವೆ. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಸಾಧನೆ ಆಗಿದೆ. ಐದು ಗ್ಯಾರಂಟಿಗಳ ಪೈಕಿ ನಾಲ್ಕು ಮಹಿಳಾ ಸಬಲೀಕರಣಕ್ಕಾಗಿಯೇ ರೂಪಿಸಿದ್ದೇವೆ. ಈ ಮೂಲಕ ಇಡೀ ದೇಶಕ್ಕೆ ನಾವು 'ಕರ್ನಾಟಕ ಮಾಡೆಲ್' ಏನೆಂದು ಸಾಬೀತು ಪಡಿಸಿದ್ದೇವೆ.

ಯಾವುದೇ ಸರ್ಕಾರದ ಮೊದಲ 100 ದಿನಗಳನ್ನು ಸಾಮಾನ್ಯವಾಗಿ ಅದರ ಭವಿಷ್ಯದ ದಿಕ್ಸೂಚಿ ಎಂದೇ ಪರಿಗಣಿಸಲಾಗುತ್ತದೆ, ಮುಂದಿನ ಪ್ರಯತ್ನಗಳಿಗೆ ಇದು ನೀಲನಕ್ಷೆ ಎನ್ನಬಹುದು. ಕರ್ನಾಟಕಕ್ಕೆ ಉಜ್ವಲವಾದ ಕೈಗಾರಿಕಾ ಭವಿಷ್ಯವನ್ನು ರೂಪಿಸಲು ಮುಂದಾಗಿರುವ ನಮ್ಮ ಸರ್ಕಾರ ಸದೃಢ ಹೆಜ್ಜೆಗಳನ್ನು ಇರಿಸಿದೆ ಎಂದು ಹೇಳಿದರು.

ಕೈಗಾರಿಕೆ ಇಲಾಖೆ ವ್ಯಾಪ್ತಿಯ ಅಭಿವೃದ್ಧಿಗಳ ಪಟ್ಟಿ

* ಬೆಂಗಳೂರು ಹೊರವಲಯದಲ್ಲಿ ಸುಮಾರು 2000 ಎಕರೆ ಪ್ರದೇಶದಲ್ಲಿ 'ನಾಲೆಡ್ಜ್‌ -ಹೆಲ್ತ್‌- ಇನ್ನೋವೇಶನ್ ಅಂಡ್ ರಿಸರ್ಜ್‌' ಸಿಟಿ ಸ್ಥಾಪಿಸುವ ಉದ್ದೇಶವಿದೆ. ಮೊದಲ ಹಂತದಲ್ಲಿ ಅಭಿವೃದ್ಧಿಯಾಗಲಿರುವ 1000 ಎಕರೆ ಪ್ರದೇಶದಲ್ಲಿ ವಿಶ್ವದರ್ಜೆಯ ವಿಶ್ವವಿದ್ಯಾಲಯ, ಆಸ್ಪತ್ರೆ, ಆವಿಷ್ಕಾರ- ಸಂಶೋಧನಾ ಕೇಂದ್ರಗಳಿರಲಿವೆ. ಈ ಯೋಜನೆ ಜಾಗತಿಕ ವಲಯದಲ್ಲಿ ಬೆಂಗಳೂರಿನ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಾಗುವುದು.

100 Days Of Karnataka Congress Govt: MB Patil Revealed His Departments Development List

* ಕೈಗಾರಿಕಾ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳನ್ನು ಸುಧಾರಣೆಗಾಗಿ ನಾವು ಮತ್ತೊಂದು ಮಹತ್ವದ ಹೆಜ್ಜೆ ಇಡುತ್ತಿದ್ದೇವೆ. ಒಮ್ಮೆಗೆ ಕೈಗಾರಿಕಾ ಪ್ರದೇಶಗಳ ಮೂಲ ಸೌಕರ್ಯಗಳನ್ನು ಸುಧಾರಿಸಿ, ನಂತರ ಅವುಗಳನ್ನು ಸ್ಥಳೀಯ ಕೈಗಾರಿಕಾ ಅಸೋಸಿಯೇಷನ್ಗಳಿಗೆ ನಿರ್ವಹಣೆಯ ಜವಾಬ್ದಾರಿ ವಹಿಸಲಾಗುವುದು. ಇದರಿಂದ ಮೂಲಸೌಕರ್ಯದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂಬ ವಿಶ್ವಾಸವಿದೆ.

* ಸರ್ಕಾರ ಮತ್ತು ಉದ್ಯಮಗಳ ನಡುವಿನ ಅಂತರವನ್ನು ನೀಗಿಸುವ ನಿಟಿನಲ್ಲಿ ಕೈಗಾರಿಕಾ ಪ್ರತಿನಿಧಿಗಳೊಂದಿಗೆ ಸಂವಾದ ಪ್ರಾರಂಭಿಸಿದ್ದೇನೆ. ಸ್ಟಾರ್ಟ್‌ಅಪ್‌ಗಳಿಂದ ಆರಂಭಿಸಿ ಸಂಘಟಿತ ಸಂಸ್ಥೆಗಳವರೆಗೆ, ಏರೋಸ್ಪೇಸ್‌ನಿಂದ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕರ ಜತೆ ಮಾತುಕತೆ ನಡೆದಿದೆ.

* ಇದಲ್ಲದೇ ನೆದರ್‌ಲ್ಯಾಂಡ್ಸ್, ಜರ್ಮನಿ, ತೈವಾನ್, ಪನಾಮ ಮತ್ತು ಇಸ್ರೇಲ್‌ನ ರಾಜತಾಂತ್ರಿಕರೊಂದಿಗೂ ಸಂವಾದ ನಡೆಯುತ್ತಿದ್ದು, ಈ ಮೂಲಕ ಕೈಗಾರಿಕಾ ಪರಿಸರಕ್ಕೆ ಪೂರಕ ವಾತಾವರಣ ಸೃಷ್ಟಿಸುವ ಕೆಲಸ ಆಗುತ್ತಿದೆ.

100 Days Of Karnataka Congress Govt: MB Patil Revealed His Departments Development List

* ರಾಜ್ಯದಲ್ಲಿ ಸದೃಢ ಕೈಗಾರಿಕಾ ಪರಿಸರ ಸೃಷ್ಟಿ ಜತೆಗೆ ಬಂಡವಾಳ ಆಕರ್ಷಣೆಗೆ 'ಇನ್ವೆಸ್ಟ್‌ ಕರ್ನಾಟಕ' ವೇದಿಕೆಯನ್ನು ಪುನಾರಚಿಸಲಾಗುತ್ತಿದೆ. ಉದ್ಯಮದ ದಿಗ್ಗಜರು ಈ ಮಂಡಳಿಯ ಭಾಗವಾಗಲಿದ್ದಾರೆ.

* ವೆಂಚರ್ ಕ್ಯಾಪಿಟಲ್, ಪ್ರೈವೇಟ್ ಇಕ್ವಿಟಿ ಮತ್ತು ಮೂಲಸೌಕರ್ಯ ಅಭಿವೃದ್ಧಿಯಂತಹ ವಿವಿಧ ವಲಯಗಳ ಅನುಭವಿಗಳನ್ನು ಒಳಗೊಂಡ 'ಕಾರ್ಯತಂತ್ರ ಹೂಡಿಕೆ ಸಮಿತಿ' (Strategic Investment Committee) ರಚಿಸಲಾಗುವುದು.

* ಇದಲ್ಲದೇ, ಸುಲಲಿತ ವ್ಯವಹಾರಕ್ಕೆ ಅನುವು ಮಾಡಲು ಅತ್ಯಾಧುನಿಕ ಏಕಗವಾಕ್ಷಿ ವ್ಯವಸ್ಥೆಯನ್ನು ರೂಪಿಸುವ ಕೆಲಸ ಆಗುತ್ತಿದೆ. ಈ ಸಂಬಂಧ ಹಲವಾರು ಸುತ್ತಿನ ಚರ್ಚೆಗಳು ನೆಡೆದಿವೆ. ಶೀಘ್ರದಲ್ಲೇ ಕ್ರಮ ವಹಿಸಲಾಗುತ್ತದೆ.

* ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆಗೆ ಉತ್ತೇಜಿಸಲು 9 ಆದ್ಯತಾ ವಲಯಗಳಲ್ಲಿ 'ವಿಷನ್ ಗ್ರೂಪ್' ರಚಿಸುತ್ತೇವೆ. ಏರೋಸ್ಪೇಸ್ ಮತ್ತು ಡಿಫೆನ್ಸ್, ಮೆಷಿನ್ ಟೂಲ್ಸ್, ಇಎಸ್‌ಡಿಎಂ, ಫಾರ್ಮಾಸ್ಯುಟಿಕಲ್ಸ್, ಕೋರ್ ಮ್ಯಾನುಫ್ಯಾಕ್ಚರಿಂಗ್, ಆಟೋಮೋಟಿವ್/ಎಲೆಕ್ಟ್ರಿಕ್ ವೆಹಿಕಲ್ಸ್, ಇಂಡಸ್ಟ್ರಿ 5.0, ಟೆಕ್ಸ್‌ಟೈಲ್ಸ್ ಮತ್ತು ಗ್ರೀನ್ ಎನರ್ಜಿಯನ್ನು ಒಳಗೊಂಡಿದೆ.

* ಹೊಸ ಕೈಗಾರಿಕಾ ನೀತಿ ರಚಿಸಲು ನಮ್ಮ ಸರ್ಕಾರ ಮುಂದಾಗಿದ್ದು, ಎಲೆಕ್ಟ್ರಿಕ್ ವೆಹಿಕಲ್ ಮತ್ತು ವೇರ್‌ಹೌಸಿಂಗ್ ಮತ್ತು ಲಾಜಿಸ್ಟಿಕ್ಸ್ ವಲಯಗಳಿಗೆ ಈಗಾಗಲೇ ಕರಡು ರೂಪುಗೊಂಡಿವೆ. ಸದ್ಯ ಇತರ ರಾಜ್ಯಗಳ ಕೈಗಾರಿಕಾ ನೀತಿಯ ಅಧ್ಯಯನ ನಡೆಯುತ್ತಿದ್ದು, ಶೀಘ್ರದಲ್ಲೇ ಪ್ರಗತಿಪರ ನೀತಿಯನ್ನು ಹೊರತರಲಿದ್ದೇವೆ. ಜತೆಗೆ, ಪ್ರೋತ್ಸಾಹಕ ಪ್ಯಾಕೇಜ್‌ಗಳನ್ನು ಘೋಷಿಸಲಿದ್ದೇವೆ. ರಫ್ತು ಉತ್ತೇಜನಕ್ಕೂ ಹೊಸ‌ ನೀತಿಯಲ್ಲಿ ಅವಕಾಶ ನೀಡಲಾಗುತ್ತದೆ.

* ಜಾಗತಿಕ ಮಟ್ಟದಲ್ಲಿ ಸಂಭಾವ್ಯ ಹೂಡಿಕೆದಾರರಿಗೆ ಅತ್ಯಾಧುನಿಕ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ. ಸಿಂಗಾಪುರ ಮತ್ತು ಸೌದಿ ಅರೇಬಿಯಾದಂತಹ ಜಾಗತಿಕ ಹೂಡಿಕೆ ಕೇಂದ್ರಗಳಿಗೆ ಪ್ರತಿಸ್ಪರ್ಧಿಯಾಗಿ ಕರ್ನಾಟಕದ ಹೂಡಿಕೆ ಉತ್ತೇಜನಾ ಸಂಸ್ಥೆ (ಐಪಿಎ)ಗೆ ಯೋಜನೆ ಸಿದ್ಧಪಡಿಸುತ್ತಿದ್ದೇವೆ.

* ಹೂಡಿಕೆದಾರರ ನೆಚ್ಚಿನ ತಾಣ ಕರ್ನಾಟಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದಕ್ಕೆ ಸಾಕ್ಷಿಯಾಗಿ, ಈ ಅವಧಿಯಲ್ಲಿ ಕರ್ನಾಟಕದಲ್ಲಿ ಬರೋಬ್ಬರಿ 60,000 ಕೋಟಿ ರೂ. ಬಂಡವಾಳ ಹೂಡಿಕೆ ಒಪ್ಪಂದ ಆಗಿದೆ, ಮುಖ್ಯವಾಗಿ ಇದರಿಂದ 30,000 ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಹೇಳಲು ಬಹಳ ಖುಷಿಯಾಗುತ್ತದೆ.

* ಫಾಕ್ಸ್‌ಕಾನ್, ಜೆಎಸ್‌ಡಬ್ಲ್ಯೂ ಎನರ್ಜಿ, ಟಾಟಾ ಎಲೆಕ್ಟ್ರಾನಿಕ್ಸ್‌ ಮತ್ತು ಐಬಿಸಿ ಮುಂತಾದ ಕಂಪನಿಗಳೊಂದಿಗಿನ ಫಲಪ್ರದ ಮಾತುಕತೆ ನಡೆಸಲಾಗಿದೆ. ಈ ಕಂಪನಿಗಳು ದೊಡ್ಡ ಮೊತ್ತದ ಹೂಡಿಕೆ ಒಪ್ಪಂದಗಳಿಗೆ ಸಹಿ ಮಾಡಿದ್ದು ಬಹಿರಂಗವಾಗಿದೆ.

* 20ಕ್ಕೂ ಹೆಚ್ಚು ಸಾಂಭಾವ್ಯ ಹೂಡಿಕೆದಾರರ ಜತೆ ಮಾತುಕತೆ ನಡೆಯುತ್ತಿದ್ದು, ಇದು ಸಫಲವಾದರೆ ರಾಜ್ಯಕ್ಕೆ 1,00,000 ಕೋಟಿ ರೂಪಾಯಿ ಬಂಡವಾಳ ಹರಿದು ಬರಲಿದೆ. ಸಂಭಾವ್ಯ ಹೂಡಿಕೆದಾರರ ಪೈಕಿ ತೈವಾನ್, ಕೊರಿಯಾ ಮೂಲದ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಸಾರ್ವಜನಿಕ ಮತ್ತು ಖಾಸಗಿ ವಲಯದ ಪ್ರಮುಖ ಕಂಪನಿಗಳು ಸೇರಿವೆ.

* ಉದ್ಯೋಗಕ್ಕೆ ಪೂರಕವಾದ ಶಿಕ್ಷಣ ಕಲ್ಪಿಸುವ ಮೂಲಕ ಇವೆರಡರ ನಡುವೆ ಇರುವ ಅಂತರ ನೀಗಿಸುವುದು ನಮ್ಮ ಗುರಿ. ಡಿಪ್ಲೋಮಾ/ಎಂಜಿನಿಯರಿಂಗ್ ಪೂರ್ಣಗೊಳಿಸುವ ವಿದ್ಯಾರ್ಥಿಗಳು ನೇರವಾಗಿ ಕೆಲಸದಲ್ಲಿ ತೊಡುಗುವಂತೆ ಆಗಬೇಕು ಈ ನಿಟ್ಟಿನಲ್ಲಿ ಶಿಕ್ಷಣ ಸಚಿವರು, ತಜ್ಞರ ಜತೆ ಸಮಾಲೋಚನೆ ನಡೆಸಲಾಗಿದೆ.

* ಏಷ್ಯಾದಲ್ಲಿ ಕರ್ನಾಟಕವನ್ನು ಉತ್ತುಂಗಕ್ಕೆ ಕೊಂಡೊಯ್ಯುವುದು ನಮ್ಮ ಸರ್ಕಾರದ ಗುರಿ. ಪೂರಕವಾಗಿ ಪರಿಷ್ಕೃತ ಕೈಗಾರಿಕಾ ನೀತಿ, ವಿಶ್ವ ದರ್ಜೆಯ ಮೂಲಸೌಕರ್ಯ, ಡಿಜಿಟಲ್ ಸೇವಾ ವಿತರಣೆ, ನವೀನ ತಂತ್ರಜ್ಞಾನಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.

ರಾಜ್ಯಕ್ಕೆ ಹರಿದು ಬಂದ ಅಪಾರ ಹೂಡಿಕೆ: ಸಾಧನೆ

* ಸ್ಮಾರ್ಟ್‌ಫೋನ್‌ ತಯಾರಿಕಾ ಘಟಕ ಸ್ಥಾಪನೆಗೆ ಫಾಕ್ಸ್‌ಕಾನ್ ಕಂಪನಿಯು 14,000 ಕೋಟಿ ರೂಪಾಯಿ ಹೂಡಿಕೆಗೆ ಮುಂದಾಗಿದ್ದು, 50,000 ಮಂದಿಗೆ ಉದ್ಯೋಗ ದೊರೆಯಲಿದೆ. ಫಾಕ್ಸ್‌ಕಾನ್‌ನ ಅಂಗ ಸಂಸ್ಥೆ ಎಫ್‌ಐಟಿಐ 1200-2000 ಕೋಟಿ ರೂ. ಹೂಡಿಕೆಯೊಂದಿಗೆ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ಆರಂಭಿಸಲಿದ್ದು, ಇದರಿಂದ 1000 ಉದ್ಯೋಗಾವಕಾಶಗಳು ಸೃಷ್ಟಿ ಆಗಲಿವೆ.

* ಅದೇ ರೀತಿ ಫಾಕ್ಸ್‌ಕಾನ್ ಗ್ರೂಪ್‌ ನ ಮತ್ತೊಂದು ಅಂಗಸಂಸ್ಥೆ ಎಫ್‌ಐಐ (Foxcon Industry Internet) ರಾಜ್ಯದಲ್ಲಿ ಸ್ಮಾರ್ಟ್‌ಫೋನ್‌ಗಳ ಜೋಡಣೆಗೆ ಘಟಕ ಸ್ಥಾಪಿಸುತ್ತಿದೆ. ಈ ಯೋಜನೆಯು ಸುಮಾರು 3000 ಕೋಟಿ ರೂಪಾಯಿ ಮೊತ್ತದಾಗಿದ್ದು, ಇದರಿಂದ ಸುಮಾರು 12,000 ಜನರಿಗೆ ಉದ್ಯೋಗ ದೊರೆಯಲಿದೆ.

* ಇದಲ್ಲದೇ, ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮತ್ತು ಜೋಡಣೆಯ ವಿವಿಧ ವಲಯಗಳಲ್ಲಿ 30,000 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಸಂಬಂಧ ಮಾತುಕತೆ ನಡೆಯುತ್ತಿದೆ.

* ಮರುಬಳಕೆ ಮಾಡಬಹುದಾದ ಎಲೆಕ್ಟ್ರಿಕ್ ಬ್ಯಾಟರಿಗಳನ್ನು ತಯಾರಿಸುವ ಅಮೆರಿಕದ 'ಇಂಟರ್ ನ್ಯಾಷನಲ್‌ ಬ್ಯಾಟರಿ ಕಂಪನಿ (ಐಬಿಸಿ) 8,000 ಕೋಟಿ ರೂಪಾಯಿ ಹೂಡಿಕೆ ಮಾಡಲು ಮುಂದೆ ಬಂದಿದ್ದು, ಈ ಸಂಬಂಧ ಒಪ್ಪಂದ ಮಾಡಿಕೊಂಡಿದೆ.

* ಕರ್ನಾಟಕದಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಒತ್ತು ನೀಡುವ ದೃಷ್ಟಿಯಲ್ಲಿ, ಜೆಎಸ್‌ಡಬ್ಲ್ಯೂ ಎನರ್ಜಿ ಸಮೂಹವು 1800 ಎಕರೆ ಭೂಮಿಯಲ್ಲಿ 800 MW ಉತ್ಪಾದಿಸುವ 5000 ಕೋಟಿ ರೂಪಾಯಿ ಹೂಡಿಕೆಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದೆ.

* ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟಿಂಗ್ ಸೇವೆ ಒದಗಿಸುವ 'ಕೇನ್ಸ್ ಟೆಕ್ನಾಲಜಿ' ಮೈಸೂರಿನ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್‌ನಲ್ಲಿ 3500 ಕೋಟಿ ರೂ. ಹೂಡಿಕೆಗೆ ಮುಂದಾಗಿದೆ. ಜಾಗತಿಕ ಮಟ್ಟದ ಸೆಮಿಕಾನ್ ಹಬ್ ಆಗಿ ಗುರುತಿಸಿಕೊಳ್ಳುತ್ತಿರುವ ಮೈಸೂರಿಗೆ ಈ ಒಪ್ಪಂದ ಹೆಚ್ಚಿನ ಬಲ ತುಂಬಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

* ಟಾಟಾ ಟೆಕ್ನಾಲಜೀಸ್ ರಾಜ್ಯದಲ್ಲಿ 3 ಅತ್ಯಾಧುನಿಕ ಎಂಜಿನಿಯರಿಂಗ್ ಸೌಲಭ್ಯಗಳ ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಈ ಕೇಂದ್ರಗಳು ಸುಧಾರಿತ ಉತ್ಪಾದನೆ ಮತ್ತು ರೊಬೊಟಿಕ್ಸ್, ಎಲೆಕ್ಟ್ರಿಕ್ ವಾಹನಗಳು ಮತ್ತು ಏರೋಸ್ಪೇಸ್ ಮತ್ತು ರಕ್ಷಣಾ ಕೇಂದ್ರಗಳಾಗಿವೆ. ಇದಕ್ಕಾಗಿ ಸಂಸ್ಥೆ ಲಿಮಿಟೆಡ್‌ 2,000 ಕೋಟಿ ರೂ. ಹೂಡಲಿದೆ.

* ಕುರುಕಲು ತಿಂಡಿ ತಯಾರಿಸುವ ದೇಶದ ಪ್ರಖ್ಯಾತ ಕಂಪನಿ 'ಬಾಲಾಜಿ ವೇಫರ್ಸ್' ರಾಜ್ಯದ ಬೆಳಗಾವಿಯಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಸಜ್ಜಾಗಿದೆ. 500 ಕೋಟಿ ರೂಪಾಯಿಗಳ ಯೋಜನೆ ಇದಾಗಿದೆ.

* ಹಾರ್ಡ್- ಡಿಸ್ಕ್ ಡ್ರೈವ್‌ಗಳು, ವಿದ್ಯುತ್ ಉಪಕರಣಗಳು, ಆಟೋಮೊಬೈಲ್‌ ಉಪಕರಣಗಳನ್ನು ಉತ್ಪಾದಿಸುವ ಜಪಾನಿನ 'ನಿಡೆಕ್ ಕಾರ್ಪೊರೇಶನ್' ಹುಬ್ಬಳ್ಳಿ- ಧಾರವಾಡದಲ್ಲಿ 400 ಕೋಟಿ ರೂಪಾಯಿ ಹೂಡಿಕೆಗೆ ಮುಂದಾಗಿದೆ.

* ಮೆಕ್ಯಾನಿಕಲ್ ಉಪಕರಣಗಳ ಜೋಡಣೆ ಮತ್ತು ಲಾಜಿಸ್ಟಿಕ್ಸ್ ಪರಿಹಾರಗಳಿಗೆ ಹೆಸರಾಗಿರುವ 'ಎಸ್‌ಎಫ್‌ಎಸ್‌' ಸಂಸ್ಥೆಯೂ ಕರ್ನಾಟಕದಲ್ಲಿ 250 ಕೋಟಿ ರೂ. ಹೂಡಿದೆ.

* ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್ ನಡುವಿನ ಸಹಯೋಗದ ಪ್ರಯತ್ನಗಳು OSAT ವಲಯದಲ್ಲಿ 200 ಕೋಟಿ ರೂಪಾಯಿ ಹೂಡಿಕೆಗೆ ಅವಕಾಶ ಕಲ್ಪಿಸಿದೆ.

* ಕೈಗಾರಿಕಾ ಅನಿಲಗಳನ್ನು ಒದಗಿಸುವ ಪ್ರಮುಖ ಕಂಪನಿ 'ಐನಾಕ್ಸ್ ಏರ್ ಪ್ರಾಡಕ್ಟ್ಸ್‌' 150 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಕೈಗಾರಿಕಾ ಅನಿಲ ಪೂರೈಕೆ ಘಟಕವನ್ನು ಸ್ಥಾಪಿಸಲು ಯೋಜಿಸಿದೆ.

ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ ಪಟ್ಟಿ

* ಮೂಲಸೌಕರ್ಯ ಅಭಿವೃದ್ಧಿಯು ರಾಜ್ಯದ ಅಭಿವೃದ್ಧಿಗೆ ತುಂಬಾ ಮುಖ್ಯವಾಗಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು, ಇದೇ ಆಗಸ್ಟ್ 31ರಂದು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನಯಾನ ಕಾರ್ಯಾಚರಣೆ ಆರಂಭ.

* ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿಗಳು ಭರದಿಂದ ಸಾಗಿದೆ. ಈ ನಿಲ್ದಾಣವನ್ನು 2024ರ ಏಪ್ರಿಲ್ ವೇಳೆಗೆ ಉದ್ಘಾಟನೆ ಮಾಡಲು ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ಇದರಿಂದ ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಆರ್ಥಿಕ ಬೆಳವಣಿಗೆಗೆ ಚೈತನ್ಯ ಬರಲಿದೆ.

* ಉಳಿದಂತೆ ಹಾಸನ ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕೊಡಗು, ಧರ್ಮಸ್ಥಳ ಮತ್ತು ಚಿಕ್ಕಮಗಳೂರುಗಳಲ್ಲಿ ಏರ್ಸ್ಟ್ರಿಪ್ಗಳನ್ನು ನಿರ್ಮಿಸುವುದಾಗಿ ಈಗಾಗಲೇ ಈ ವರ್ಷದ ಬಜೆಟ್ನಲ್ಲಿ ಘೋಷಿಸಲಾಗಿದೆ.

* KSIIDC ಮೂಲಕ ಉತ್ತರ ಕನ್ನಡದ ತದಡಿಯಲ್ಲಿ 1,819 ಎಕರೆ ವಿಸ್ತಾರದಲ್ಲಿ ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ Eco-tourism Park ಸ್ಥಾಪಿಸಲು ಅಗತ್ಯ ಕ್ರಮಗಳಿಗೆ ಚಾಲನೆ ನೀಡಲಾಗಿದೆ.

* ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ KSIIDC ಮೂಲಕ 407 ಎಕರೆ ವಿಸ್ತೀರ್ಣದಲ್ಲಿ ದೆಹಲಿಯಲ್ಲಿರುವ Aero City ಮಾದರಿಯಲ್ಲಿ Business Park ಸ್ಥಾಪಿಸಲು ಯೋಜಿಸಲಾಗುತ್ತಿದೆ.

* ನಿಮ್ಮೆಲ್ಲರಿಗೂ ತಿಳಿದಿರುವಂತೆ ಬೆಂಗಳೂರು ಉಪನಗರ ರೈಲು ಯೋಜನೆಯು ಅತ್ಯಂತ ಮಹತ್ತ್ವದ್ದಾಗಿದೆ. ಮೊದಲನೆಯ ಹಂತದಲ್ಲಿ 149 ಕಿ.ಮೀ. ಇರುವ ಈ ಯೋಜನೆಯನ್ನು 2ನೇ ಹಂತದಲ್ಲಿ 452 ಕಿ.ಮೀ.ಗಳಿಗೆ ವಿಸ್ತರಿಸಲು ಈಗಾಗಲೇ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.

* ಈ ಮೂಲಕ ಸಬರ್ಬನ್ ರೈಲು ಯೋಜನೆಯ ಲಾಭವು ಸುತ್ತಲಿನ ತುಮಕೂರು, ಮೈಸೂರು, ಮಾಗಡಿ, ಗೌರಿಬಿದನೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಹೊಸೂರುಗಳಿಗೆ ಸಿಗುವಂತೆ ಮಾಡಲಾಗುವುದು. ಈ ನಿಟ್ಟಿನಲ್ಲಿ K-RIDE ಸಂಸ್ಥೆಯು ಕೇಂದ್ರ ರೈಲ್ವೆ ಸಚಿವಾಲಯದ ಅನುಮತಿಯನ್ನು ನಿರೀಕ್ಷಿಸುತ್ತಿದೆ. ಅಂದಂತೆ, ಈ ಯೋಜನೆಗೆಂದು ನಮ್ಮ ಸರಕಾರವು 2023-24ರ ಬಜೆಟ್ನಲ್ಲಿ 1,000 ಕೋಟಿ ರೂ.ಗಳನ್ನು ಎತ್ತಿಟ್ಟಿದೆ.

*ಎಂಎಸ್ಐಎಲ್ ಮತ್ತು ಕೆಎಸ್ಡಿಎಲ್- ಈ ಎರಡೂ ಸಂಸ್ಥೆಗಳಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತಂದು ಮತ್ತಷ್ಟು ಪ್ರಗತಿಯನ್ನು ಕಾಣಲಾಗುತ್ತದೆ. ಈ ನಿಟ್ಟಿನಲ್ಲಿ ಪರಿಣತರ ಸಲಹೆಗಳನ್ನೂ ಪಡೆಯಲಾಗುತ್ತಿದೆ.

* ಈ ಸರಕಾರದಲ್ಲಿ ನಾನು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವನೂ ಆಗಿದ್ದೇನೆ. ಈ ಹೊಣೆಯನ್ನು ಅರಿತಿರುವ ನಾನು, ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಕಂಕಣ ತೊಟ್ಟಿದ್ದೇನೆ. ಇದರ ಭಾಗವಾಗಿ ಈ ವರ್ಷದ ಬಜೆಟ್ನಲ್ಲಿ ವಿಜಯಪುರಕ್ಕೆ ಉತ್ಪಾದನೆ ಆಧರಿತ ಕೈಗಾರಿಕಾ ಕ್ಲಸ್ಟರ್ನ್ನು ಘೋಷಿಸಲಾಗಿದೆ.

* ಬಬಲೇಶ್ವರ ಮತ್ತು ತಿಕೋಟಾ ಪಟ್ಟಣಗಳಿಗೆ ಈಗಿನ ಅಗತ್ಯಕ್ಕೆ ತಕ್ಕಂತೆ 'ನಗರ ಕುಡಿಯುವ ನೀರು ಯೋಜನೆ'ಯನ್ನು ಮಂಜೂರು ಮಾಡಿಸಲಾಗಿದೆ.

* ಅಗಾಧವಾಗಿ ಬೆಳೆಯುತ್ತಿರುವ ವಿಜಯಪುರ ಜಿಲ್ಲಾ ಕೇಂದ್ರಕ್ಕೆ ಮುಂದಿನ 50 ವರ್ಷಗಳ ದೂರದೃಷ್ಟಿಯನ್ನು ಇಟ್ಟುಕೊಂಡು 24/7 ಕುಡಿಯುವ ನೀರನ್ನು ಕೃಷ್ಣಾ ನದಿಯಿಂದ ಒದಗಿಸಲು ನಿರ್ಧರಿಸಲಾಗಿದೆ ಎಂದು ತಮ್ಮ ಇಲಾಖೆಗಳ ವ್ಯಾಪ್ತಿಯಲ್ಲಿ ಆದ ಅಭಿವೃದ್ಧಿಗಳನ್ನು ಎಂಬಿ ಪಾಟೀಲ್ ವಿವರಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+