ಮೇಯರ್-ಉಪ ಮೇಯರ್ ಚುನಾವಣೆಗೆ ಕೊನೆಗೂ ಅಸ್ತು ಎಂದ ರಾಜ್ಯ ಸರ್ಕಾರ!
ಬೆಂಗಳೂರು, ಫೆ. 12: ರಾಜ್ಯದ ಹತ್ತು ಮಹಾನಗರ ಪಾಲಿಕೆಗಳಿಗೆ 23ನೇ ಅವಧಿಗೆ ಮೇಯರ್ ಮತ್ತು ಉಪ ಮೇಯರ್ ಗಳ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.
ಈ ಎಲ್ಲಾ ಹತ್ತು ಮಹಾನಗರ ಪಾಲಿಕೆಗಗಳ ಮೇಯರ್ ಹಾಗೂ ಉಪ ಮೇಯರ್ ಮೀಸಲಾತಿ ಪ್ರಕಟಿಸುವ ಮೊದಲು ರಾಜ್ಯ ಸರ್ಕಾರ ಕಳೆದ ಜನವರಿ 21ರಂದು ಮೀಸಲಾತಿ ನಿಗದಿಪಡಿಸುವ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮಾರ್ಗಸೂಚಿ ಹೊರಡಿಸಿತ್ತು. ಅದರಂತೆ ಇಂದು ಅಧಿಕೃತ ಆದೇಶ ಪ್ರಕಟಿಸುವ ಮೂಲಕ 10 ಮಹಾನಗರ ಪಾಲಿಕೆಗಳ ಮೇಯರ್, ಉಪ ಮೇಯರ್ ಚುನಾವಣೆಗೆ ಅವಕಾಶ ಕಲ್ಪಿಸಿದೆ.

ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಉಪ ಮೇಯರ್ ಮೀಸಲಾತಿ ಪಟ್ಟಿ ಹೀಗಿದೆ:
Recommended Video
ಯಾವುದೇ ಕಾರಣಕ್ಕೂ ಮನೆ ಮುಂದೆ ಗಾಡಿ ನಿಲ್ಲಿಸಬೇಡಿ ! | Oneindia Kannada
- ಬಳ್ಳಾರಿ: ಮೇಯರ್-ಸಾಮಾನ್ಯ ವರ್ಗ , ಉಪ ಮೇಯರ್-ಹಿಂದುಳಿದ ವರ್ಗ ಮಹಿಳೆ
- ಬೆಳಗಾವಿ: ಮೇಯರ್-ಸಾಮಾನ್ಯ ವರ್ಗ, ಉಪ ಮೇಯರ್-ಸಾಮಾನ್ಯ ವರ್ಗ ಮಹಿಳೆ
- ದಾವಣಗೆರೆ: ಮೇಯರ್ -ಪರಿಶಿಷ್ಟ ಜಾತಿ ಮಹಿಳೆ, ಉಪ ಮೇಯರ್-ಸಾಮಾನ್ಯ ವರ್ಗ ಮಹಿಳೆ
- ಹುಬ್ಬಳ್ಳಿ-ಧಾರವಾಡ: ಮೇಯರ್- ಹಿಂದುಳಿದ ವರ್ಗ-ಎ, ಉಪ ಮೇಯರ್-ಪರಿಶಿಷ್ಟ ಜಾತಿ ಮಹಿಳೆ
- ಕಲಬುರಗಿ: ಮೇಯರ್-ಸಾಮಾನ್ಯ ವರ್ಗ ಮಹಿಳೆ, ಉಪ ಮೇಯರ್ ಹಿಂದುಳಿದ ವರ್ಗ-ಬಿ
- ಮಂಗಳೂರು: ಮೇಯರ್-ಸಾಮಾನ್ಯ ವರ್ಗ, ಉಪ ಮೇಯರ್- ಹಿಂದುಳಿದ ವರ್ಗ-ಎ ಮಹಿಳೆ
- ಮೈಸೂರು: ಮೇಯರ್- ಸಾಮಾನ್ಯ ವರ್ಗ ಮಹಿಳೆ, ಉಪ ಮೇಯರ್-ಸಾಮಾನ್ಯ
- ಶಿವಮೊಗ್ಗ: ಮೇಯರ್ ಹಿಂದುಳಿದ ವರ್ಗ-ಎ ಮಹಿಳೆ, ಉಪ ಮೇಯರ್-ಸಾಮಾನ್ಯ ವರ್ಗ
- ತುಮಕೂರು: ಮೇಯರ್- ಪರಿಶಿಷ್ಟ ಜಾತಿ, ಉಪ ಮೇಯರ್- ಸಾಮಾನ್ಯ ವರ್ಗ ಮಹಿಳೆ
- ವಿಜಯಪುರ: ಮೇಯರ್-ಸಾಮಾನ್ಯ ವರ್ಗ, ಉಪ ಮೇಯರ್- ಹಿಂದುಳಿದ ವರ್ಗ-ಎ ಮೀಸಲು











Click it and Unblock the Notifications