1,750 ಮದ್ಯದಂಗಡಿಗಳಿಗೆ ಲೈಸನ್ಸ್, 17 ಸಾವಿರ ಕೋಟಿ ರು ನಿರೀಕ್ಷೆ!

Posted By:
Subscribe to Oneindia Kannada

ಬೆಂಗಳೂರು, ಡಿ. 13: ರಾಜ್ಯದಲ್ಲಿ ಚಿಲ್ಲರೆ ಮದ್ಯ ಮಾರಾಟದ ಅಂಗಡಿಗಳನ್ನು ತೆರೆಯಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಸುಮಾರು 23 ವರ್ಷಗಳ ಬಳಿಕೆ ಹೊಸ ಮದ್ಯದಂಗಡಿಗಳಿಗೆ ಲೈಸನ್ಸ್ ಸಿಗಲಿದೆ.1,750 ಮದ್ಯದಂಗಡಿಗಳಿಗೆ ಲೈಸನ್ಸ್ ನೀಡಿ, 17 ಸಾವಿರ ಕೋಟಿ ರು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ಅಬಕಾರಿ ಸಚಿವ ಮನೋಹರ ತಹಶೀಲ್ದಾರ್ ಹೇಳಿದ್ದಾರೆ.

ಬಲಿಜ ಸಂಘದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ವಧು-ವರರ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. [ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ಮದ್ಯ ನಿಷೇಧಿಸಿ!]

ರಾಜ್ಯದಲ್ಲಿ 1992ರಿಂದ ಈವರೆಗೂ ಸಿಎಲ್-2 (ರೀಟೈಲ್) ಮತ್ತು ಸಿಎಲ್-9 (ಹೋಲ್ ಸೇಲ್) ಮದ್ಯದಂಗಡಿಗಳಿಗೆ ಪರವಾನಿಗೆ ನೀಡಿಲ್ಲ. ಬದಲಿಗೆ ಬಾರ್ ಅಂಡ್ ರೆಸ್ಟೋರೆಂಟ್ (ಸಿಎಲ್-7)ಗಳಿಗೆ ಮಾತ್ರ ಪರವಾನಿಗೆ ನೀಡಲಾಗುತ್ತಿದೆ. ಈವರೆಗೂ 15 ಸಾವಿರ ಮದ್ಯದಂಗಡಿಗಳಿಗೆ ಪರವಾನಿಗೆ ನೀಡಲಾಗಿದೆ ಎಂದು ವಿವರಿಸಿದರು.

1,750 more liquor outlets likely, Neera as health drink: Manohar Tahsildar

2011ರ ಜನಗಣತಿಯನ್ವಯ ಇನ್ನೂ 1,750 ಮದ್ಯದಂಗಡಿಗಳಿಗೆ ಪರವಾನಿಗೆ ನೀಡಬೇಕಿದೆ. ಮದ್ಯದಂಗಡಿಗಳಿಗೆ ಹೊಸದಾಗಿ ಪರವಾನಿಗೆ ನೀಡುವುದು ಅನಿವಾರ್ಯವಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಚರ್ಚಿಸಿ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದರು.[ಮದ್ಯಪ್ರಿಯರಿಗೆ ಕಿಕ್ ಕೊಡುವ ಸುದ್ದಿ : ಓಲ್ಡ್ ಮಾಂಕ್ ಅಲೈವ್!]

ಸಾರಾಯಿ ಮುಕ್ತ ರಾಜ್ಯ: ರಾಜ್ಯದಲ್ಲಿ ಸಾರಾಯಿ ಮತ್ತು ಹೆಂಡ ಮರು ಜಾರಿಗೊಳಿಸುವ ಆಲೋಚನೆ ಇಲ್ಲ. ಆದರೆ, ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದ ‘ನೀರಾ' ಮಾರಾಟವನ್ನು ಅಧಿಕೃತಗೊಳಿಸುವ ಚಿಂತನೆ ಇದೆ ಹೊಸ ಮದ್ಯದಂಗಡಿ ಪರವಾನಿಗೆ ವೇಳೆ ಪರಿಶಿಷ್ಟರಿಗೆ ಆದ್ಯತೆ ನೀಡಲಾಗುವುದು ಎಂದರು.

ರಾಜ್ಯದಲ್ಲಿ ಸಾರಾಯಿ ಮತ್ತು ಹೆಂಡ ಮರು ಜಾರಿಗೊಳಿಸುವ ಆಲೋಚನೆ ಇಲ್ಲ. ಆದರೆ, ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದ ‘ನೀರಾ' ಮಾರಾಟವನ್ನು ಅಧಿಕೃತಗೊಳಿಸುವ ಚಿಂತನೆ ಇದೆ ಎಂದು ಅವರು ಸ್ಪಷ್ಟಣೆ ನೀಡಿದರು. [ಬಿಹಾರದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ]

17 ಸಾವಿರ ಕೋಟಿ ರೂ. ಸಂಗ್ರಹ ಗುರಿ: ಕಳೆದ ವರ್ಷ ಅಬಕಾರಿ ಇಲಾಖೆ 15 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿ ಹೊಂದಿತ್ತು. ಪ್ರಸಕ್ತ ವರ್ಷ 17 ಸಾವಿರ ಕೋಟಿ ರೂ.ಗಳಷ್ಟು ತೆರಿಗೆ ಸಂಗ್ರಹಿಸಲು ಉದ್ದೇಶಿಸಲಾಗಿದೆ

ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್‌) ನಿಂದ 456 ಸಗಟು ಮಾರಾಟ ಮಳಿಗೆಗಳನ್ನು ಸ್ಥಾಪಿಸಲು ಮಂಜೂರಾತಿ ನೀಡಿದ್ದು, ಆ ಪೈಕಿ ಈವರೆಗೂ 407 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಅಕ್ರಮವಾಗಿ ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಮಾರಾಟ ತಡೆಯಲು ಅಬಕಾರಿ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Excise Minister Manohar Tahsildar said Government is keen to issue fresh licences for opening 1,750 wine stores and bars in the state. we're thinking about bringing neera, a health drink which promises a prof it for farmers," he added.
Please Wait while comments are loading...