Devanahalli elections: ಮತ್ತೆ ಅಖಾಡದಲ್ಲಿ ರಣಕಹಳೆ ಮೊಳಗಿಸಲು ಸಜ್ಜಾದ ನಾರಾಯಣಸ್ವಾಮಿ
ದೇವನಹಳ್ಳಿ, ಮಾರ್ಚ್, 27: ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ಹಾಗೆಯೇ ದೇವನಹಳ್ಳಿ ವಿಧಾನಸಭಾ ಕ್ರೇತ್ರದಲ್ಲಿ ರಾಜಕೀಯ ಸ್ಥಿತಿಗತಿ ಹೇಗಿದೆ ಎಂದು ಇಲ್ಲಿ ತಿಳಿಯಿರಿ.
ಮತ್ತೊಮ್ಮೆ ಚುನಾವಣಾ ಸಮರಕ್ಕೆ ಸಜ್ಜಾಗಿರುವ ದೇವನಹಳ್ಳಿ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದಾಗಿದೆ. 2018, ಕಳೆದ ಚುನಾವಣೆಯಲ್ಲಿ ಇಲ್ಲಿ ಜನತಾ ದಳ (ಜಾತ್ಯತೀತ) ಪಕ್ಷದ ಅಭ್ಯರ್ಥಿ ಎಲ್.ಎನ್. ನಾರಾಯಣಸ್ವಾಮಿ ಜಯಗಳಿಸಿದ್ದರು. ಇವರ ವಿರುದ್ದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವೆಂಕಟಸ್ವಾಮಿ 17,010 ಮತಗಳ ಅಂತರದಿಂದ ಸೋಲನುಭವಿಸಿದ್ದರು.

ದೇವನಹಳ್ಳಿ ಕ್ಷೇತ್ರ ಪರಿಚಯ
ದೇವನಹಳ್ಳಿಗೆ ಈ ಹಿಂದೆ ದೇವನದೊಡ್ಡಿ, ದೇವನಪುರ ಅಂತಲೂ ಕರೆಯುತ್ತಿದ್ದರು. ಆದರೆ ಇದೀಗ ದೇವನಹಳ್ಳಿ ಹಳ್ಳಿಯಾಗಿ ಉಳಿದಿಲ್ಲ. ನವದೆಹಲಿಯಲಿಯನ್ನು ಮೀರಿಸುವ ರೀತಿಯಲ್ಲಿ ಅಭಿವೃದ್ಧಿ ಪಥದತ್ತ ಸಾಗಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಇದರ ವ್ಯಾಪ್ತಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ದೇವನಹಳ್ಳಿ ವಿಧಾನಸಭಾ ಕ್ಷೇತ್ರವು ಬೆಂಗಳೂರು ಗ್ರಾಮಾಂತರದಲ್ಲಿ ಪ್ರಮುಖ ಕ್ಷೇತ್ರಗಳಲ್ಲೊಂದಾಗಿದೆ. ಕೆಂಪೇಗೌಡರು, ಟಿಪ್ಪು ಸುಲ್ತಾನ್ ಸೇರಿದಂತೆ ಐತಿಹಾಸಿಕ ಮಹಾನ್ ಪುರುಷರೊಂದಿಗೆ ನಂಟು ಹೊಂದಿರುವ ದೇವನಹಳ್ಳಿ ಬೆಂಗಳೂರಿನಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ.
ಜೆಡಿಎಸ್ ಪಕ್ಷದ ನಿಸರ್ಗ ನಾರಾಯಣಸ್ವಾಮಿ ದೇವನಹಳ್ಳಿ ಶಾಸಕ ಆಗಿದ್ದಾರೆ. ದೇವನಹಳ್ಳಿಯು ಬೆಂಗಳೂರಿನಿಂದ ಹೈದಾರಬಾದ್‌ಗೆ ಹೋಗುವ NH-7ರಲ್ಲಿದ್ದು, ಸಿಲಿಕಾನ್ ಸಿಟಿಯಿಂದ ಸುಮಾರು 34 ಕೀಲೋ ಮೀಟರ್‌ಗಳನ್ನು ದೂರದಲ್ಲಿದೆ. ಮೈಸೂರು ಹುಲಿ ಎಂದೇ ಪ್ರಸಿದ್ಧಿಯಾಗಿದ್ದ ಟಿಪ್ಪು ಸುಲ್ತಾನ್‌ನ ಜನ್ಮ ಸ್ಥಳವು ಪುರಸಭೆ ವ್ಯಾಪ್ತಿಯಲ್ಲಿದೆ. ಈ ಸ್ಥಳವು ಪುರಾತತ್ವ ಇಲಾಖೆಗೆ ಒಳಪಡುತ್ತದೆ. ದೇವನಹಳ್ಳಿಯಲ್ಲಿ 1501ನೇ ಇಸವಿಯ ಪುರಾತನ ಕೋಟೆಯಿದೆ. ಅಲ್ಲದೆ ಇಲ್ಲಿ ಹಲವು ಐತಿಹಾಸಿಕ ತಾಣಗಳಿದ್ದು, ಅವು ಪ್ರವಾಸಿಗರ ಆಕರ್ಷಣೀಯ ಅಚ್ಚುಮೆಚ್ಚಿನ ತಾಣಗಳಾಗಿವೆ.
ದೇವನಹಳ್ಳಿಯಲ್ಲಿನ ಅಭಿವೃದ್ಧಿ ಕಾರ್ಯಗಳು
ಬೆಂಗಳೂರು ಅಂತಾರಾಷ್ಷೀಯ ವಿಮಾನ ನಿಲ್ದಾಣವು ದೇವನಹಳ್ಳಿಯಿಂದ 6.5 ಕೀಲೋ ಮೀಟರ್ ದೂರದಲ್ಲಿದೆ. ದೇವನಹಳ್ಳಿ ಮೊದಲು ಅತೀ ಹೆಚ್ಚು ಕೃಷಿ ಭೂಮಿ ಹೊಂದಿದ್ದ ಕ್ಷೇತ್ರವಾಗಿದ್ದು, ಇಲ್ಲಿಂದ ಬೆಂಗಳೂರಿಗೆ ಅತೀ ಹೆಚ್ಚು ತರಕಾರಿ ಸರಬರಾಜು ಮಾಡಲಾಗುತ್ತಿತ್ತು. ಆದ್ರೆ 2008ರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಾಪನೆಯಾಯಿತು. ಆಗಿನಿಂದ ದೇವನಹಳ್ಳಿ ತುಂಬಾ ಪ್ರಖ್ಯಾತಿ ಪಡೆಯುತ್ತಾ ಬಂದಿದೆ.
ಇಲ್ಲಿ ಕೃಷಿಕರಿಗಿಂತ ರಿಯಲ್ ಎಸ್ಟೇಟ್ ಉದ್ಯಮಿಗಳೇ ಹೆಚ್ಚಾಗಿದ್ದ ಕಾರಣ ಇಲ್ಲಿರುವ ಭೂಮಿಗೆ ಬಂಗಾರದ ಬೆಲೆ ಬಂದಂತಾಗಿದೆ. ಖ್ಯಾತ ಸಾಹಿತಿ ಡಿವಿಜಿಯವರು ವಾಸಿಸುತ್ತಿದ್ದ ಹಳೆಯ ಮನೆಯೂ ಇಲ್ಲಿದೆ ಎನ್ನುವುದೇ ವಿಶೇಷ. ಚಕ್ಕೋತನ ಹಣ್ಣುಗಳಿನ್ನು ದುಬೈ, ಶಾರ್ಜಾಗೆ ರಫ್ತು ಮಾಡುವ ಮೂಲಕ ದೇವನಹಳ್ಳಿ ತುಂಬಾ ಪ್ರಖ್ಯಾತಿ ಪಡೆದಿದೆ. ಸಭೆ-ಸಮಾರಂಭಗಳಲ್ಲಿ ನಮ್ಮ ಜನ ನಿಂಬೆಹಣ್ಣಿನ ಜ್ಯೂಸ್ ಕೊಟ್ಟು ಅತಿಥಿಗಳ ದಣಿವಾರಿಕೆಯನ್ನು ನಿವಾರಿಸುವ ಪದ್ಧತಿ ಮೊದಲಿಂದಲೂ ಇದೆ. ಆದರೆ, ದೇವನಹಳ್ಳಿಯಲ್ಲಿ ಚಕ್ಕೋತ ಹಣ್ಣು ನಿಂಬೆಹಣ್ಣಿನ ಜಾಗಕ್ಕೆ ಲಗ್ಗೆಯಟ್ಟಿದೆ.

ಬಂಡಾಯದ ಬಿಸಿ ಅನುಭವಿಸಿದ್ದ ಶಾಸಕ
ದೇವನಹಳ್ಳಿ ಹಾಲಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಆರಂಭದಲ್ಲೇ ಬಂಡಾಯದ ಬಿಸಿ ಅನುಭವಿಸಿದ್ದವರಾಗಿದ್ದಾರೆ. 2018ರ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ, ಇಲ್ಲಿನ ಸ್ಥಳೀಯರು ಅಲ್ಲ. ಕೇವಲ ನಾಲ್ಕು ವರ್ಷದ ಹಿಂದೆ ದೇವನಹಳ್ಳಿ ರಾಜಕೀಯದಲ್ಲಿ ಕಾಣಿಸಿಕೊಂಡಿದ್ದರು. ದೇವಸ್ಥಾನಗಳ ಜೀರ್ಣೋದ್ಧಾರ, ಆರೋಗ್ಯ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಮೂಲಕ ಜೆಡಿಎಸ್ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿಯೂ ಯಶಸ್ವಿಯಾಗಿದ್ದರು. ಅಲ್ಲದೇ ಚುನಾವಣೆಯಲ್ಲೂ ಗೆಲುವು ಸಾಧಿಸಿದ್ದರು.
Devanahalli Constituency Analysis
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಎಲ್.ಎನ್. ನಾರಾಯಣಸ್ವಾಮಿ (ಜೆಡಿಎಸ್) | 86,966 | ವೆಂಕಟಸ್ವಾಮಿ (ಕಾಂಗ್ರೆಸ್) | 69,956 |
| 2013 | ಪಿಳ್ಳ ಮುನಿಶಾಮಪ್ಪ (ಜೆಡಿಎಸ್) | 70,323 | ವೆಂಕಟಸ್ವಾಮಿ (ಕಾಂಗ್ರೆಸ್) | 68,381 |
| 2008 | ವೆಂಕಟಸ್ವಾಮಿ (ಕಾಂಗ್ರೆಸ್) | 57,181 | ಜಿ. ಚಂದ್ರಣ್ಣ (ಜೆಡಿಎಸ್) | 50,559 |
ಬಿಜೆಪಿ ಸೇರ್ಪಡೆಯಾದ ಪಿಳ್ಳಮುನಿಶಾಮಪ್ಪ
ಜೆಡಿಎಸ್‌ನಿಂದ ಗೆಲವು ಸಾಧಿಸಿದ್ದ ಪಿಳ್ಳಮುನಿಶಾಮಪ್ಪ ಸದ್ಯ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. 2018ರಲ್ಲಿ ಟಿಕೆಟ್ ವಂಚಿತ ಪಿಳ್ಳಮುನಿಶ್ಯಾಮಪ್ಪ ಮತ್ತು ಅವರ ಬೆಂಬಲಿಗರು ಜೆಡಿಎಸ್ ವರಿಷ್ಠರ ಈ ನಡೆಯಿಂದ ಮುನಿಸಿಕೊಂಡಿದ್ದರು. ಬಳಿಕ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಮತ್ತೊಂದೆಡೆ ಜೆಡಿಎಸ್‌ನಿಂದ ಈ ಬಾರಿಯೂ ಕೂಡ ನಿಸರ್ಗ ನಾರಾಯಣ ಸ್ವಾಮಿ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಮತ್ತೊಂದೆಡೆ ಕಾಂಗ್ರೆಸ್‌ನಿಂದ ಕೆ.ಎಚ್. ಮುನಿಯಪ್ಪಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
ಇನ್ನು ವಿಧಾಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ದೇವನಹಳ್ಳಿ ಅಭಿವೃದ್ಧಿಗೆ ಸರ್ಕಾರ ಯೋಜನೆಯನ್ನು ರೂಪಿಸುತ್ತಿದೆ. ಎಕ್ಸ್‌ಪ್ರೆಸ್ ವೇ ಮತ್ತು ಹೈಸ್ಪೀಡ್ ರೈಲ್ವೆ ಲೈನ್‌ನ ಯೋಜನೆಯ ನೀಲನಕ್ಷೆ ತಯಾರಾಗಿದೆ. ಟ್ಯಾಕ್ಸಿ ಸೇವೆ, ಮತ್ತು ಕೆಎಸ್‌ಆರ್‌ಟಿಸಿ ಹವಾನಿಯಂತ್ರಿತ ಬಸ್‍ಗಳು ಪ್ರತಿ 15 ನಿಮಿಷಕ್ಕೊಂದು ಸಂಚಾರ ಮಾಡುತ್ತಿವೆ. ಬೆಂಗಳೂರಿನ ಯಾವ ಮೂಲೆಯಿಂದಲಾದರೂ ಹೊರಟು ವಿಮಾನ ನಿಲ್ದಾಣವನ್ನು ಸುಮಾರು ಒಂದರಿಂದ ಒಂದೂವರೆ ಗಂಟೆಗಳಲ್ಲಿ ತಲುಪುವ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ.
ಇಲ್ಲಿ ಅಂತಾರರಾಷ್ಟ್ರೀಯ ಮಟ್ಟದ ಕಂಪನಿಗಳು ತಲೆ ಎತ್ತುತ್ತಿದ್ದು, ಆದರೂ ಇಲ್ಲಿನ ಸ್ಥಳೀಯರಿಗೆ ದೊಡ್ಡ ಪ್ರಮಾಣದ ಉದ್ಯೋಗಗಳು ಸಿಗುತ್ತಿಲ್ಲ ಎನ್ನುವ ಆರೋಪವಿದೆ. ರಿಯಲ್ ಎಸ್ಟೇಟ್ ದಂಧೆ ಜೋರಾಗಿದ್ದು, ಕ್ರೈಂ ಪ್ರಕರಣಗಳು ನಡೆಯುತ್ತಲೇ ಇವೆ.
ಮತ್ತೊಂದೆಡೆ ಆವತಿ ಬೆಟ್ಟ, ದೇವನಹಳ್ಳಿ ಕೋಟೆ, ನಲ್ಲೂರಿನ ಹುಣಸೆ ತೋಪು, ಕುಂದಾಣ ಬೆಟ್ಟ, ತಿಮ್ಮರಾಯಸ್ವಾಮಿ ಬೆಟ್ಟ ಸೇರಿದಂತೆ ಇತರ ಪ್ರವಾಸಿ ತಾಣಗಳ ಅಭಿವೃದ್ಧಿಗಳಿಗೆ ಅನುದಾನ ಬಿಡುಗಡೆಯಾಗಿದೆ. ಆದರೂ ಪ್ರವಾಸೋದ್ಯಮ ಇಲಾಖೆಯು ಅವುಗಳ ಅಭಿವೃದ್ಧಿಗೆ ಮುಂದಾಗುತ್ತಿಲ್ಲ ಎನ್ನುವುದು ಇಲ್ಲಿನ ಸ್ಥಳೀಯರ ಆರೋಪವಾಗಿದೆ.
ದೇವನಹಳ್ಳಿ ಕ್ಷೇತ್ರದಲ್ಲಿ ಒಟ್ಟು 20,6029 ಮತದಾರರಿದ್ದಾರೆ. ಇದರಲ್ಲಿ ಎಸ್‌ಸಿ, ಎಸ್‌ಟಿ 74,662, ಒಕ್ಕಲಿಗ 45,723, ಕುರುಬರು 16,231 ಮತದಾರರಿದ್ದಾರೆ. ಹಾಗೆಯೇ 8723 ಜನ ಮುಸ್ಲಿಂ ಮತದಾರಿದ್ದರೆ, ಲಿಂಗಾಯತ 7233, ವಿಶ್ವಕರ್ಮ ಸಮುದಾಯದವರು 2,621 ಜನ ಮತದಾರರು ಇದ್ದಾರೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications