ಕಲಬುರಗಿ : 5 ಸಾವಿರ ರೂ.ಗೆ ಗಂಡು ಮಗು ಮಾರಾಟ
ಕಲಬುರಗಿ, ಅಕ್ಟೋಬರ್ 28 : 20 ದಿನದ ಗಂಡು ಮಗುವನ್ನು 5 ಸಾವಿರ ರೂ.ಗಳಿಗೆ ಮಾರಾಟ ಮಾಡಿರುವ ಪ್ರಕರಣ ಕಲಬುರಗಿಯಲ್ಲಿ ನಡೆದಿದೆ. ಮಗು ಮಾರಾಟ ಮಾಡಿದ ತಾಯಿ ಮತ್ತು ಮಗುವನ್ನು ಖರೀದಿಸಿದ್ದ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜೇವರ್ಗಿ ತಾಲೂಕಿನ ನರಿಬೋಳ್ ಗ್ರಾಮದ ರಜಿಯಾ ಬೇಗಂ 20 ದಿನದ ಮಗುವನ್ನು ಮಾರಾಟ ಮಾಡಿದ ಮಹಿಳೆಯಾಗಿದ್ದಾಳೆ. ಕಲಬುರಗಿ ನಗರದ ರೆಹಮತ್ ಉನ್ನಿಸಾ ಅವರು 5 ಸಾವಿರ ರೂ. ನೀಡಿದ ಮಗುವನ್ನು ಖರೀದಿ ಮಾಡಿದ್ದರು.
ರಜಿಯಾ ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ಬಂದಾಗ ರೆಹಮತ್ ಉನ್ನಿಸಾ ಪರಿಚಯವಾಗಿತ್ತು. ಆಗ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ರೆಹಮತ್ ಉನ್ನಿಸಾಗೆ ಮಕ್ಕಳಿರಲಿಲ್ಲ. ರಜಿಯಾಗೆ ಎರಡು ಹೆಣ್ಣು ಮಕ್ಕಳಿದ್ದು, ಒಂದು ವಿಕಲಚೇತವಾಗಿದೆ.

ರಜಿಯಾ ಕತೆ ಕೇಳಿದ್ದ ರೆಮತ್ ಉನ್ನಿಸಾ 5 ಸಾವಿರ ರೂ.ಗಳಿಗೆ ಮಗವನ್ನು ನೀಡುವಂತೆ ಒತ್ತಡ ಹಾಕಿದ್ದಳು. ಇದಕ್ಕೆ ರಜಿಯಾ ಒಪ್ಪಿ ಮರುದಿನ ಮಗುವನ್ನು ಕರೆದುಕೊಂಡು ಬಂದಿದ್ದಳು. ಆಗ ಅಗ್ರಿಮೆಂಟ್ ಪತ್ರಕ್ಕೆ ಸಹಿ ಮಾಡಿಸಿಕೊಳ್ಳಲಾಗಿದೆ.
ಇದನ್ನು ನೋಡಿದ್ದ ಸ್ಥಳೀಯರು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದರು. ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಪೊಲೀಸರು ಸಹಾಯದಿಂದ ಮಗುವನ್ನು ರಕ್ಷಣೆ ಮಾಡಿದ್ದು, ತಾಯಿ ಮತ್ತು ಖರೀದಿ ಮಾಡಿದ ಮಗುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications