ಕಲಬುರಗಿ: ಬಿಲ್ ಕಲೆಕ್ಟರ್ ಮೇಲೆ ಹಲ್ಲೆ ಮಾಡಿದ ಗ್ರಾ.ಪಂ ಉಪಾಧ್ಯಕ್ಷೆ ಪತಿ

Posted By: ಕಲಬುರಗಿ ಪ್ರತಿನಿಧಿ
Subscribe to Oneindia Kannada

ಕಲಬುರಗಿ, ಡಿಸೆಂಬರ್ 02: ಹಫ್ತಾ ಕೊಡದಿದ್ದಕ್ಕೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆಯ ಪತಿ ಹಾಗೂ ಮತ್ತಿಬ್ಬರು ಮಹಿಳಾ ಸದಸ್ಯೆಯರ ಗಂಡಂದಿರು ಸೇರಿ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಒಬ್ಬನಿಗೆ ಹಿಗ್ಗಾ ಮುಗ್ಗ ಥಳಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ದಸ್ತಗೀರ್ ಮೇಲೆ ಕಲಬುರಗಿ ಜಿಲ್ಲೆ, ಅಫಜಲಪುರ ತಾಲ್ಲೂಕಿನ ಗಾಣಗಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸಾವಿತ್ರಿ ಅವರ ಪತಿ ಗುಂಡೂರಾವ್ ಹಾಗೂ ಅದೇ ಪಂಚಾಯಿತಿಯ ಇಬ್ಬರು ಮಹಿಳಾ ಸದಸ್ಯರ ಪತಿಯಂದಿರು ಹಲ್ಲೆ ಮಾಡಿದ್ದಾರೆ.

Village bill collector beaten by Panchayat vice president's husband

ಬಿಲ್ ಕಲೆಕ್ಟರ್ ದಸ್ತಗೀರ್ ಮೇಲೆ ಐದು ಸಾವಿರ ರೂಪಾಯಿ ಪಂಚಾಯಿತಿಯ ಹಣವನ್ನು ಸ್ವಂತ ಖರ್ಚಿಗೆ ಬಳಸಿಕೊಂಡಿರುವ ಆರೋಪ ಹೊರಿಸಲಾಗಿತ್ತು, ಆರೋಪದಿಂದ ಬಚಾವು ಮಾಡಲು ಉಪಾಧ್ಯಕ್ಷೆ ಪತಿ ಗುಂಡೂರಾವ್ ಹಾಗೂ ಮತ್ತಿಬ್ಬರು ಒಂದು ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಹಣ ಕೊಡಲು ದಸ್ತಗೀರ್ ನಿರಾಕರಿಸಿದ ಕಾರಣ ಅವರ ಮೇಲೆ ಹಲ್ಲೆ ನಡೆಸಲಾಗಿದೆ, ಗಾಯಗೊಂಡಿರುವ ದಸ್ತಗೀರ್ ಅವರು ಇದೀಗ ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kalaburagi's Ganagapura village Panchayat bill collector Dasthagiri has been beaten by panchayat vice president Savithri's husband Gundurao for not giving bribe .

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ