ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಪ್ರಾಯೋಗಿಕ ಹಾರಾಟ ಯಶಸ್ವಿ

By Gururaj
|
Google Oneindia Kannada News

ಕಲಬುರಗಿ, ಆಗಸ್ಟ್ 26 : ಹೈದರಬಾದ್-ಕರ್ನಾಟಕ ಭಾಗದ ಬಹುಜನರ ಕನಸು ನನಸಾಗಿದೆ. ಕಲಬುರಗಿ ವಿಮಾನ ನಿಲ್ದಾಣದಲ್ಲಿ ಪ್ರಾಯೋಗಿಕ ಲ್ಯಾಂಡಿಂಗ್ ಯಶಸ್ವಿಯಾಗಿದೆ.

ಶ್ರೀನಿವಾಸ ಸಡರಗಿ ಹತ್ತಿರ ನಿರ್ಮಾಣಗೊಂಡಿರುವ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಪ್ರಾಯೋಗಿಕ ಹಾರಾಟ ನಡೆಯಿತು. ಹೈದರಾಬಾದ್‌ನ ಡೈಮಂಡ್ ಡಿಎ 40, ಡಿಮಂಡ್ ಡಿಎ 42 ಲಘು ವಿಮಾನ ಯಶಸ್ವಿಯಾಗಿ ಹಾರಾಟ ನಡೆಸಿ ಲ್ಯಾಂಡಿಂಗ್ ಮಾಡಿತು.

ಕಲಬುರಗಿ ವಿಮಾಣ ನಿಲ್ದಾಣ ಕಾಮಗಾರಿ ಪೂರ್ಣಕಲಬುರಗಿ ವಿಮಾಣ ನಿಲ್ದಾಣ ಕಾಮಗಾರಿ ಪೂರ್ಣ

Trial landing success in Kalaburagi airport

ಕಲಬುರಗಿ ಜನರ ವಿಮಾನ ಹಾರಾಟದ ಕನಸು ಶೀಘ್ರವೇ ನನಸುಕಲಬುರಗಿ ಜನರ ವಿಮಾನ ಹಾರಾಟದ ಕನಸು ಶೀಘ್ರವೇ ನನಸು

740 ಎಕರೆ ಜಾಗದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ. 3,725 ಮೀಟರ್ ರನ್‌ವೇಯನ್ನು ವಿಮಾನ ನಿಲ್ದಾಣ ಹೊಂದಿದೆ. ಇಂದು ಪ್ರಾಯೋಗಿಕ ವಿಮಾನ ಹಾರಾಟ ಯಶಸ್ವಿಯಾಗಿದೆ.

2006ರಲ್ಲಿ ಕಲಬುರಗಿ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಈಗ ಕಾಮಗಾರಿ ಪೂರ್ಣಗೊಂಡಿದೆ. ಇನ್ನು ಮೂರು ತಿಂಗಳಿನಲ್ಲಿ ವಿಮಾನ ಹಾರಾಟ ಆರಂಭವಾಗುವ ನಿರೀಕ್ಷೆಇದೆ.

ಕಲಬುರಗಿ ವಿಮಾನ ನಿಲ್ದಾಣವನ್ನು ಎರಡು ಹಂತಗಳಾಗಿ ವಿಂಗಡನೆ ಮಾಡಿ ಕಾಮಗಾರಿ ಆರಂಭಿಸಲಾಗಿತ್ತು. 109 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲು ಅಂದಾಜಿಸಲಾಗಿತ್ತು. ಆದರೆ, ಕಾಮಗಾರಿಯ ಅಂದಾಜು ಮೊತ್ತ ಶೇ 15.3ರಷ್ಟು ಹೆಚ್ಚಾಗಿದೆ.

English summary
Trial landing successful at Kalaburagi airport on August 26, 2018. Airport construed in 740 acre of land. 3,725 meter run way set for flight service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X