ಕಲಬುರಗಿಯಲ್ಲಿ ವರುಣನ ಅರ್ಭಟ, ಆಸ್ಪತ್ರೆಗೆ ನುಗ್ಗಿದ ನೀರು
ಕಲಬುರಗಿ, ಸೆಪ್ಟೆಂಬರ್ 14 : ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಬುಧವಾರ ರಾತ್ರಿಯಿಂದ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ಥವ್ಯಸ್ಥಗೊಂಡಿದೆ.
ಈ ಮಳೆಯಿಂದ ಸಿಡಿಲು ಬಡಿದು ಸೇಡಂ ತಾಲೂಕಿನ ರಾಮಪ್ಪ ಮತ್ತು ಆಳಂದ ತಾಲೂಕಿನ ಹಳ್ಳೆಪ್ಪಾ ಎಂಬ ಇಬ್ಬರು ವ್ಯಕ್ತಿಗಳು ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಕೆಲವು ಮನೆಗಳಲ್ಲಿ ಅಡುಗೆ ಮಾಡಲು ಸಾಧ್ಯವಾಗುತ್ತಿಲ್ಲ. ಅಂತಹ ಮನೆಗಳಿಗೆ ಮಹಾನಗರ ಪಾಲಿಕೆಯಿಂದ ಊಟದ ಪ್ಯಾಕೇಟ್‍ಗಳನ್ನು ವಿತರಿಸಲಾಯಿತು.
ನಗರದ ಕೆಬಿಎನ್ ಆಸ್ಪತ್ರೆಗೆ ನೀರು ನುಗ್ಗಿದ್ದು, ರೋಗಿಗಳು ಪರದಾಡುವ ಸ್ಥಿತಿ ಎದುರಾಗಿದೆ. ಆಸ್ಪತ್ರೆಯಲ್ಲಿ ರೋಗಿಗಳ ಕೊಠಡಿಗಳಲ್ಲೆಲ್ಲಾ ನೀರು ನಿಂತಿದ್ದರಿಂದ ರೋಗಿಗಳು ಬೇರೆ ಕಡೆ ಹೋಗಿ ರಾತ್ರಿ ಕಳೆದಿದ್ದಾರೆ. ಬಳಿಕ ಇಂದು ಬೆಳಗ್ಗೆ ಆಸ್ಪತ್ರೆಯ ಸಿಬ್ಬಂದಿ ರೋಗಿಗಳನ್ನು ಬೇರಡೆ ಶಿಪ್ಟ್ ಮಾಡಲಾಗಿದೆ.

ಮಳೆ ಬಂದಾಗೊಮ್ಮೆ ಇದೇ ರೀತಿ ಆಗುತ್ತದೆ. ಆದರೆ, ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಆಡಳಿತ ಮಂಡಳಿ ವಿಫಲವಾಗಿದೆ ಎಂದು ಅಲ್ಲಿಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications