ಕಲಬುರಗಿ: ಶಾಪಿಂಗ್ ಮಾಲ್ ನಲ್ಲಿ ಅಗ್ನಿ ಅವಘಡ, ತಾಯಿ-ಮಕ್ಕಳು ಅಸ್ವಸ್ಥ
ಕಲಬುರಗಿ, ಸೆಪ್ಟೆಂಬರ್ 23 : ನಗರದ ತಿಮ್ಮಾಪೂರ ಸರ್ಕಲ್ ಬಳಿ ಇರುವ ಏಷಿಯನ್ ಪ್ಲಾಜಾ ಕಟ್ಟಡದಲ್ಲಿ ಶನಿವಾರ ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿದೆ.
ಮೂರು ಅಂತಸ್ತಿನ ಶಾಪಿಂಗ್ ಮಾಲ್ ಇದಾಗಿದ್ದು, ಮೊದಲನೆಯ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಾಲ್ ನಲ್ಲಿರುವ ಮೂರು ಅಂಗಡಿಗಳಿಗೆ ಬೆಂಕಿ ತಗುಲಿದ್ದು. ದಟ್ಟವಾದ ಹೊಗೆ ಆವರಿಸಿದೆ.

ಇದೇ ಕಟ್ಟಡದ 3ನೇ ಅಂತಸ್ತಿನಲ್ಲಿ ವಾಸವಾಗಿದ್ದ ತಾಯಿ ಇಬ್ಬರು ಮಕ್ಕಳು ಹೊಗೆಯಿಂದ ಉಸಿರುಗಟ್ಟಿ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸರು ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications