• search
  • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಳಗಾವಿಯಲ್ಲಿ ಕನ್ನಡಿಗರಾಗಿ ಪರಿವರ್ತನೆಯಾದವರ ಬಗ್ಗೆ ಸಮೀಕ್ಷೆ

|

ಕಲಬುರಗಿ, ಜನವರಿ 19: " ಬೆಳಗಾವಿಯಲ್ಲಿ ಮರಾಠಿ ಭಾಷೆ ಮಾತನಾಡುವವರು ಈವರೆಗೆ ಕನ್ನಡಿಗರಾಗಿ ಪರಿವರ್ತನೆಯಾಗಿರುವುದರ ಬಗ್ಗೆ ಸಾಮಾಜಿಕ ಸಮೀಕ್ಷೆ ಮಾಡಲಾಗುವುದು" ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಎಸ್. ನಾಗಾಭರಣ ಹೇಳಿದ್ದಾರೆ.

ಮಂಗಳವಾರ ಕಲಬುರಗಿಯಲ್ಲಿ ಮಾತನಾಡಿದ ಅವರು, "ಇತಿಹಾಸ, ಐತಿಹ್ಯ ಹಾಗೂ ಈಗಿನ ಕಾಲಘಟ್ಟದ ಬಗ್ಗೆಯೂ ತಿಳಿಯಬೇಕಿದೆ. ರಾಜ್ಯ ವಿಂಗಡಣೆಯಾಗಿ 65 ವರ್ಷಗಳಾದರೂ ಇನ್ನೂ ಗೊಂದಲ ಸೃಷ್ಟಿಸಲಾಗುತ್ತಿದೆ" ಎಂದು ವಿಷಾದ ವ್ಯಕ್ತಪಡಿಸಿದರು.

ಬೆಳಗಾವಿ ಕನ್ನಡ ಧ್ವಜ ವಿವಾದ; ಕುಮಾರಸ್ವಾಮಿ ಟ್ವೀಟ್ ಬೆಳಗಾವಿ ಕನ್ನಡ ಧ್ವಜ ವಿವಾದ; ಕುಮಾರಸ್ವಾಮಿ ಟ್ವೀಟ್

"ಹೊರ ರಾಜ್ಯದದಿಂದ ಕರ್ನಾಟಕಕ್ಕೆ ಬಂದ ಸರ್ಕಾರಿ ಅಧಿಕಾರಿಗಳಿಗೆ 4 ಹಂತಗಳಲ್ಲಿ ಭಾಷೆಯನ್ನು ಕಲಿಯಲು ಅವಕಾಶ ನೀಡಲಾಗುತ್ತದೆ. ಹಂತ-ಹಂತವಾಗಿ ಕನ್ನಡ ಭಾಷೆಯನ್ನು ಕಲಿಯಲು ಕಡ್ಡಾಯವಾಗಿ ನಿಯಮಗಳಿವೆ" ಎಂದು ಹೇಳಿದರು.

ಗಡಿ ತಂಟೆಗೆ ಬಂದರೆ ಎಚ್ಚರ: ಉದ್ಧವ್ ಠಾಕ್ರೆ ವಿರುದ್ಧ ಗುಡುಗಿದ ಶಾಸಕಿ ರೂಪಾಲಿ ಗಡಿ ತಂಟೆಗೆ ಬಂದರೆ ಎಚ್ಚರ: ಉದ್ಧವ್ ಠಾಕ್ರೆ ವಿರುದ್ಧ ಗುಡುಗಿದ ಶಾಸಕಿ ರೂಪಾಲಿ

"ರಾಜ್ಯದ ಗಡಿ ಭಾಗದಿಂದ 1 ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಉದ್ಯೋಗಾವಕಾಶದಲ್ಲಿ ಸರ್ಕಾರವು ಶೇ.5ರಷ್ಟು ಮೀಸಲಾತಿ ನೀಡುತ್ತದೆ. ಇದರಿಂದ ಕನ್ನಡಿಗರಿಗೆ ಉತ್ತೇಜನ ನೀಡಿದಂತಾಗುತ್ತದೆ" ಎಂದರು.

ಗಡಿ ವಿವಾದ ಕೆದಕಿದ ಠಾಕ್ರೆ; ಕಾಂಗ್ರೆಸ್‌ನತ್ತ ಕೈ ತೋರಿಸಿದ ಸಿಟಿ ರವಿ ಗಡಿ ವಿವಾದ ಕೆದಕಿದ ಠಾಕ್ರೆ; ಕಾಂಗ್ರೆಸ್‌ನತ್ತ ಕೈ ತೋರಿಸಿದ ಸಿಟಿ ರವಿ

"ಕನ್ನಡ ಭಾಷೆ ಅನುಷ್ಠಾನದಲ್ಲಿ ಜಿಲ್ಲಾಡಳಿತದಿಂದ ಉತ್ತಮ ಸ್ಪಂದನೆ ಸಿಕ್ಕಿದೆ" ಎಂದು ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ನಾಗಾಭರಣ ಅವರು ಕೃತಜ್ಞತೆ ಹೇಳಿದರು. "ಕನ್ನಡ ಭಾಷೆ ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ಮುಂದಿನ ದಿನಗಳಲ್ಲಿ ಮತ್ತಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುವುದಾಗಿ" ತಿಳಿಸಿದರು.

"ಕನ್ನಡ ಭಾಷಾ ಚಟುವಟಿಕೆಗಳ ಮೂಲಕ ಕನ್ನಡ ಕಾಯಕ ವರ್ಷ ಅನುಷ್ಠಾನದ ಅಗತ್ಯವಿದೆ. ಕನ್ನಡ ಭಾಷೆ ಇನ್ನಷ್ಟು ಗಟ್ಟಿಯಾಗಿ ಕಟ್ಟಲು ಸಾಕಷ್ಟು ಹಂತಗಳ ಕಾರ್ಯ ಯೋಜನೆ ರೂಪಿಸಿಕೊಳ್ಳಲಾಗುವುದು" ಎಂದು ಹೇಳಿದರು.

English summary
T. S. Nagabharana chairman of Kannada development authority said that survey will be conducted on Marathi speaking people's who convert as Kannadiga in Belagavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X