ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಳಜಾಪುರ ಅಂಬಾ ಭವಾನಿ ಜಾತ್ರೆಗೆ ವಿಶೇಷ ಬಸ್ ವ್ಯವಸ್ಥೆ

By Mahesh
|
Google Oneindia Kannada News

ಕಲಬುರಗಿ, ಸೆ.28: ತುಳಜಾಪುರದಲ್ಲಿ ಜರುಗಲಿರುವ ಶ್ರೀ ಮಾತಾ ಅಂಬಾಭವಾನಿ ಜಾತ್ರೆಗೆ ಆಗಮಿಸಲಿರುವ ಭಕ್ತಾಧಿಗಳ ಅನುಕೂಲಕ್ಕಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಲಬುರಗಿ ವಿಭಾಗ-1ರಿಂದ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 18ರವರೆಗೆ ತುಳಜಾಪುರದಲ್ಲಿ ಜರುಗಲಿರುವ ಶ್ರೀ ಮಾತಾ ಅಂಬಾಭವಾನಿ ಜಾತ್ರೆಗೆ ಆಗಮಿಸಲಿರುವ ಭಕ್ತಾಧಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ.

ಕಲಬುರಗಿ-ತುಳಜಾಪುರ, ಚಿಂಚೋಳಿ-ತುಳಜಾಪುರ, ಕಾಳಗಿ-ತುಳಜಾಪುರ, ಚಿತ್ತಾಪೂರ-ತುಳಜಾಪುರ, ಸೇಡಂ-ತುಳಜಾಪುರ ಮಾರ್ಗಗಳಲ್ಲಿ ಹೆಚ್ಚುವರಿ ವಿಶೇಷ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಂ. ವಾಸು ತಿಳಿಸಿದ್ದಾರೆ.

ಘಟಕಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಂದ 54ಜನ ಪ್ರಯಾಣಿಕರು ತುಳಜಾಪುರಕ್ಕೆ ಪ್ರಯಾಣಿಸಿದ್ದಲ್ಲಿ ಅವರಿಗೆ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು.

Special buses for Tulja Bhavani temple Jatra

ಸಾರ್ವಜನಿಕರು/ ಭಕ್ತಾದಿಗಳು ಹೆಚ್ಚಿನ ಮಾಹಿತಿಗಾಗಿ ವಿಭಾಗೀಯ ಸಾರಿಗೆ ಅಧಿಕಾರಿ ಮೊಬೈಲ್ ಸಂ.-77609 92102,
ಕಲಬುರಗಿ ಘಟಕ-1ರ ಮೊಬೈಲ್ ಸಂ.-77609 92113,
ಚಿಂಚೋಳಿ ಮೊಬೈಲ್ ಸಂ.-77609 92117,
ಚಿತ್ತಾಪುರ ಮೊಬೈಲ್ ಸಂ.-77609 92119,
ಕಾಳಗಿ ಮೊಬೈಲ್ ಸಂ.-77609 92120,
ಸೇಡಂ ಮೊಬೈಲ್ ಸಂ.-77609 92466,
ವಿಭಾಗೀಯ ಕಚೇರಿ ಮೊಬೈಲ್ ಸಂ.-7760992108 ಗಳನ್ನು ಸಂಪರ್ಕಿಸಲು ಕೋರಿದೆ.

ತುಳಜಾ ಭವಾನಿ ಜಾತ್ರೆ: ಮಹಾರಾಷ್ಟ್ರದ ಮರಾಠ್ ವಾಡ ಪ್ರದೇಶದ ಒಸ್ಮಾನಾಬಾದ್ ಜಿಲ್ಲೆಯಲ್ಲಿ ಹಿಂದೂಗಳ ಪವಿತ್ರ ಕ್ಷೇತ್ರ ತುಳಜಾಪುರ. 12ನೇ ಶತಮಾನದಲ್ಲಿ ನಿರ್ಮಾಣಗೊಂಡ ಈ ಭವಾನಿ ದೇಗುಲವು 51 ಶಕ್ತಿಪೀಠಗಳಲ್ಲಿ ಒಂದೆನಿಸಿದೆ ಎಂದು ಸ್ಕಂದ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಐತಿಹಾಸಿಕವಾಗಿಯೂ ಮಹತ್ವ ಪಡೆದಿರುವ ಈ ದೇಗುಲಕ್ಕೆ ಛತ್ರಪತಿ ಶಿವಾಜಿ ಮಹಾರಾಜರು ಭೇಟಿ ಕೊಡುತ್ತಿದ್ದರು. ಇಲ್ಲಿನ ದೇವಿಯ ಅನುಗ್ರಹದಿಂದಲೇ ಅವರಿಗೆ 'ಭವಾನಿ ಖಡ್ಗ' ಲಭಿಸಿತು ಎಂಬ ಪ್ರತೀತಿ ಇದೆ.

English summary
North East division of Karnataka State Regional Transport Corporation has arranged special busses to Tuljapura in Osmanabad, Maharashtra. On the eve of Tulja Bhavani Temple Jatra, KSRTC will run buses from September 28 to Oct 18, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X