ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮೃತ ಯೋಜನೆಗೆ ಹೈ-ಕ ಭಾಗದ 6 ಪಟ್ಟಣಗಳ ಆಯ್ಕೆ

ಮೃತ ಅಭಿಯಾನ ಯೋಜನೆಯಡಿ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಬೀದರ್, ಕಲಬುರಗಿ, ಬಳ್ಳಾರಿ, ರಾಯಚೂರು, ಗಂಗಾವತಿ ಹಾಗೂ ಹೊಸಪೇಟೆ ನಗರಗಳು ಆಯ್ಕೆಯಾಗಿವೆ ಎಂದು ಸಚಿವ ಈಶ್ವರ ಖಂಡ್ರೆ ಅವರು ಹೇಳಿದ್ದಾರೆ.

By Mahesh
|
Google Oneindia Kannada News

ಕಲಬುರಗಿ, ನವೆಂಬರ್ 24: ಅಮೃತ ಅಭಿಯಾನ ಯೋಜನೆಯಡಿ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಬೀದರ್, ಕಲಬುರಗಿ, ಬಳ್ಳಾರಿ, ರಾಯಚೂರು, ಗಂಗಾವತಿ ಹಾಗೂ ಹೊಸಪೇಟೆ ನಗರಗಳು ಆಯ್ಕೆಯಾಗಿವೆ ಎಂದು ಪೌರಾಡಳಿತ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾದ ಈಶ್ವರ ಖಂಡ್ರೆ ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರ 80 ಕೋಟಿ , ರಾಜ್ಯ ಸರ್ಕಾರ 32 ಕೋಟಿ ಹಾಗೂ ಸ್ಥಳೀಯ ಸಂಸ್ಥೆಗಳಿಂದ 48 ಕೋಟಿಗಳನ್ನು ಒಟ್ಟುಗೂಡಿಸಿ ಈ ನಗರಗಳಿಗೆ ಕುಡಿಯುವ ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ, ಮಳೆ ನೀರು ಚರಂಡಿ ಯೋಜನೆ, ಉದ್ಯಾನಗಳ ಅಭಿವೃದ್ದಿ, ನಗರ ಸಾರಿಗೆ ಯೋಜನೆಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದೆಂದು ಹೇಳಿದರು.[ಅಮೃತ್ ಯೋಜನೆಯಡಿ ಬೆಂಗಳೂರಿಗೆ ಹೆಚ್ಚು ಅನುದಾನ]

Six cities from Hyderabad- Karnataka region AMRUT Project : Eshwar Khandre

Atal Mission for Rejuvenation and Urban Transformation (AMRUT) ಅಮೃತ್ ಯೋಜನೆಗೆ ಯಾವ ನಗರಗಳು : ರಾಜ್ಯದ ಚಿತ್ರದುರ್ಗ, ಭದ್ರಾವತಿ, ಕೋಲಾರ, ರಾಬರ್ಟ್‌ಸನ್‌ ಪೇಟೆ, ಉಡುಪಿ, ಹಾಸನ, ಚಿಕ್ಕಮಗಳೂರು, ಮಂಡ್ಯ, ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ-ಬೆಟಗೇರಿ, ರಾಣೆಬೆನ್ನೂರು, ಬೀದರ್‌, ಬಳ್ಳಾರಿ ಮುಂತಾದ ನಗರಗಳು ಅಮೃತ್ ಯೋಜನಗೆ ಆಯ್ಕೆಯಾಗಿವೆ

ಕರ್ನಾಟಕ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ ಬೆಳಗಾವಿ, ಹುಬ್ಬಳ್ಳಿ- ಧಾರವಾಡ, ದಾವಣಗೆರೆ, ಮಂಗಳೂರು, ಶಿವಮೊಗ್ಗ ಮತ್ತು ತುಮಕೂರು ಸೇರಿದಂತೆ ಆರು ನಗರಗಳ ಅಭಿವೃದ್ಧಿ ಯೋಜನೆಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ.

English summary
Six cities from Hyderabad- Karnataka region Bidar, Kalaburagi, Raichur, Gangavati and Hospet has been selected for Atal Mission for Rejuvenation and Urban Transformation (AMRUT) project said Minister of State for Municipal Administration Eshwar Khandre
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X