ಖರ್ಗೆ ನಾಡಿನಲ್ಲಿ ಕುರುಬ ಸಮಾವೇಶ: ಇದೇನು ಸಿದ್ದರಾಮಯ್ಯ ಶಕ್ತಿ ಪ್ರದರ್ಶನವೋ?
Recommended Video
ಕಲಬುರಗಿ, ಸೆ 29: ಕರ್ನಾಟಕ ಹಿರಿಯ ಕಾಂಗ್ರೆಸ್ ಮುಖಂಡರ ಅಸಹನೆಯ ಕಟ್ಟೆ ಈ ಮಟ್ಟಿಗೆ ಒಡೆಯುತ್ತದೆ ಎಂದು ಬಹುಷಃ ಕಾಂಗ್ರೆಸ್ ಹೈಕಮಾಂಡ್ ನಿರೀಕ್ಷಿಸಿರಲಿಕ್ಕಿಲ್ಲ.
ಸಿದ್ದರಾಮಯ್ಯ ವಿರುದ್ದ ಹಿರಿಯ ಮತ್ತು ಮೂಲ ಕಾಂಗ್ರೆಸ್ಸಿಗರು ಒಂದಾಗಿದ್ದಾರೆ. ಪಕ್ಷದೊಳಗೆ ಎರಡು ಬಣಗಳಾಗಿರುವುದು ಅತ್ಯಂತ ಸ್ಪಷ್ಟವಾಗಿರುವ ಈ ಸಮಯದಲ್ಲಿ ಕಲಬುರಗಿಯಲ್ಲಿ ಸಮಾವೇಶವೊಂದನ್ನು ಭಾನುವಾರ (ಸೆ 29) ಆಯೋಜಿಸಲಾಗಿದೆ.
ಮಲ್ಲಿಕಾರ್ಜುನ ಖರ್ಗೆಯವರ ರಾಜಕೀಯ ಕರ್ಮಭೂಮಿ ಕಲಬುರಗಿಯಲ್ಲಿ ಕುರುಬ ಸಮಾವೇಶ ನಡೆಯಲಿದೆ. ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನರು ಇದರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಭಾನುವಾರ ಮಧ್ಯಾಹ್ನ ಕುರುಬ ಸಮುದಾಯದ ಪ್ರತಿಭಾ ಸಮಾವೇಶ ನಡೆಯಲಿದೆ. ಸಿದ್ದರಾಮಯ್ಯ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಖರ್ಗೆಯವರಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಮಂತ್ರಣ ಹೋಗಿದೆ. ಆದರೆ, ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಕಮ್ಮಿ ಎಂದು ಹೇಳಲಾಗುತ್ತಿದೆ.
ತಮ್ಮ ವಿರುದ್ದ ಕತ್ತಿ ಮಸಿಯುತ್ತಿರುವ ಹಿರಿಯ ಕಾಂಗ್ರೆಸ್ ಮುಖಂಡರ ವಿರುದ್ದ, ಶಕ್ತಿ ಪ್ರದರ್ಶನ ಮಾಡಲು ಸಿದ್ದರಾಮಯ್ಯ ಈ ವೇದಿಕೆಯನ್ನು ಬಳಸುವ ಸಾಧ್ಯತೆಯಿಲ್ಲದಿಲ್ಲ.












Click it and Unblock the Notifications