ಸೇಡಂ ಶಾಸಕ ರಾಜ್‌ಕುಮಾರ್ ತೇಲ್ಕೂರ್‌ಗೂ ಕೊರೊನಾ ಸೋಂಕು

ಕಲಬುರಗಿ, ಜುಲೈ 11: ಕಲಬುರಗಿ ಜಿಲ್ಲೆಯ ಸೇಡಂ ವಿಧಾನಸಭಾ ಕ್ಷೇತ್ರದ ಶಾಸಕ ರಾಜ್‌ಕುಮಾರ್ ಪಾಟೀಲ್ ತೇಲ್ಕೂರ್ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿದೆ.

Recommended Video

      Drone Prathap ಇಷ್ಟು ದಿನ ಹೇಳಿದ್ದೆಲ್ಲಾ ಸುಳ್ಳಾ ? | Oneindia Kannada

      ಸದ್ಯ ಬೆಂಗಳೂರಿನಲ್ಲಿ ಇರುವ ಶಾಸಕರು ಇತ್ತೀಚೆಗೆ ಕೆಲವು ಬಿಜೆಪಿ ಮುಖಂಡರಿಗೆ ಕೊವಿಡ್ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತರಾಗಿ ತಪಾಸಣೆಗೆ ಒಳಪಟ್ಟಿದ್ದರು. ಅವರಿಗೆ ಪರೀಕ್ಷೆಯ ವರದಿ ಬಂದಿದ್ದು, ಅವರಿಗೆ ಪಾಸಿಟಿವ್ ಇರುವುದು ತಿಳಿದುಬಂದಿದೆ.

      ರಾಜ್ಯದಲ್ಲಿ ಜನಪ್ರತಿನಿಧಿಗಳಲ್ಲೇ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ಅವರ ಸಂಪರ್ಕದಲ್ಲಿದ್ದವರು ಮಾತ್ರವಲ್ಲದೇ, ರಾಜಕಾರಣಿಗಳು ಓಡಾಡಿದ ಪ್ರದೇಶಗಳ ಜನರು ಕೂಡ ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಈ ಮಧ್ಯೆ ಶಾಸಕ ಡಾ.ಅಜಯ್ ಸಿಂಗ್ ಅವರಿಗೂ ಕೊರೊನಾ ಸೋಂಕು ತಗುಲಿದೆ.

      Sedam MLA Rajakumar Patil Telkur Tested Positive For Coronavirus

      ಮಾಜಿ ಮುಖ್ಯಮಂತ್ರಿ ಧರಂ ಸಿಂಗ್‌ ಅವರ ಪುತ್ರರಾಗಿರುವ ಡಾ.ಅಜಯ್ ಸಿಂಗ್ ಕೊರೊನಾ ಪಾಸಿಟಿವ್ ಇರುವುದು ಕನ್ಫರ್ಮ್ ಆಗಿದ್ದು, ಸ್ವತಃ ವೈದ್ಯರಾಗಿರುವ ಅವರು ಬೆಂಗಳೂರಿನ ತಮ್ಮ ಮನೆಯಲ್ಲಿಯೇ ಪ್ರತ್ಯೇಕವಾದ ಕೋಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಎರಡು ವಾರಗಳ ಕಾಲ ಕ್ವಾರೆಂಟಯನ್‌ನಲ್ಲಿ ಇರುವುದಾಗಿ ಸ್ವತಃ ಅಜ್ ಸಿಂಗ್ ತಿಳಿಸಿದ್ದಾರೆ.

      ತಮಗೆ ಕೊರೊನಾ ಇರುವುದು ದೃಢಪಡುತ್ತಿದ್ದಂತೆ ಕ್ಷೇತ್ರದ ಜನರಲ್ಲಿ ಮನವಿ ಮಾಡಿರುವ ಶಾಸಕ ಅಜಯ್ ಸಿಂಗ್, ಕ್ಷೇತ್ರದ ಜನರು ಭೇಟಿಯಾಗಲು ಬರಬಾರದು. ಸಮಸ್ಯೆಗಳಿದ್ದರೆ ಮೊಬೈಲ್‌ನಲ್ಲೇ ಸಂಪರ್ಕಿಸಬೇಕು. ಶೀಘ್ರವೇ ಗುಣಮುಖವಾಗಿ ಕ್ಷೇತ್ರದ ಸೇವೆಯಲ್ಲಿ ತೊಡಗುವೆ ಎಂದು ತಿಳಿಸಿದ್ದಾರೆ.

      ತೇಲ್ಕೂರ್ ಅವರು ಜು. 9ರ ಸಂಜೆ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡುವ ಸಾಧ್ಯತೆಯಿದೆ. ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಶಾಸಕ ತೇಲ್ಕೂರ್ ಸದ್ಯ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.

      ಕಳೆದ ಕೆಲವು ದಿನಗಳಿಂದ ಕೊರೊನಾ ವಾರಿಯಗಳಿಗೂ, ಜನಪ್ರತಿನಿಧಿಗಳನ್ನು ಕೊರೊನಾ ಬೆಂಬಿಡದೆ ಕಾಡುತ್ತಿದೆ. ಜನಪ್ರತಿನಿಧಿಗಳಿಗೆ ಸೋಂಕು ದೃಢಪಡುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+