ಈಶಾನ್ಯ ವಲಯ ಐಜಿಪಿಯಾಗಿ ಎಸ್.ಮುರಗನ್ ಅಧಿಕಾರ ಸ್ವೀಕಾರ

Posted By: ಕಲಬುರಗಿ ಪ್ರತಿನಿಧಿ
Subscribe to Oneindia Kannada

ಕಲಬುರಗಿ, ಜನವರಿ 05: ಈಶಾನ್ಯ ವಲಯ ಐಜಿಪಿಯಾಗಿ ಹಿರಿಯ ಪೊಲೀಸ್ ಅಧಿಕಾರಿ ಎಸ್ ಮುರಗನ್ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.

ಐಜಿಪಿ ಅಲೋಕ್ ಕುಮಾರ್ ವರ್ಗಾವಣೆಯಿಂದ ತೆರವಾಗಿದ್ದ ಈಶಾನ್ಯ ವಲಯ ಐಜಿಪಿ ಸ್ಥಾನವನ್ನು ತುಂಬಿದ ಮುರುಗನ್ ಅವರನ್ನು ಕಲಬುರಗಿ ನಗರದ ಪೊಲೀಸ್ ಭವನದಲ್ಲಿರುವ ಐಜಿಪಿ ಕಚೇರಿಯಲ್ಲಿ ಅಧಿಕಾರಿಗಳು ಹೂಗುಚ್ಛ ನೀಡಿ ಸ್ವಾಗತಿಸಿದರು.

ಎಸ್.ಮುರಗನ್ ಅವರು ಈ ಹಿಂದೆ ಬಳ್ಳಾರಿ ವಲಯದ ಐಜಿಪಿಯಾಗಿದ್ದರು. ಇದಕ್ಕೂ ಮೊದಲ ಮೈಸೂರು ಮತ್ತು ಶಿವಮೊಗ್ಗದಲ್ಲಿ ಎಸ್ಪಿಯಾಗಿ ಕಾರ್ಯನಿರ್ವಹಿಸಿರುವ ಮುರುಗನ್, ಮಂಗಳೂರ್ ಪೊಲೀಸ್ ಕಮಿಷನರ್ ಆಗಿ ಕೂಡಾ ಕಾರ್ಯನಿರ್ಹಹಿಸಿದ್ದಾರೆ. ಮೂಲತ ತಮಿಳನಾಡಿನವರಾಗಿರುವ ಎಸ್ ಮುರುಗನ್ 1997 ಕರ್ನಾಟಕ ಕೆಡೆರ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ.

S Murugan takes over as the Northeast zone IGP

ಈ ಮುಂಚೆ ಐಜಿಪಿ ಆಗಿದ್ದ ಅಲೋಕ್ ಕುಮಾರ್ ಅವರು ತಮ್ಮ ಅತ್ಯುತ್ತಮ ಸೇವೆ ಮೂಲಕ ಜನರ ವಿಶ್ವಾಸ ಗಳಿಸಿದ್ದರು, ಅಲೋಕ್ ಕುಮಾರ್ ಅವರು ಈಶಾನ್ಯ ಪೊಲೀಸ್ ಇಲಾಖೆಯಲ್ಲಿ ತಂದ ಶಿಸ್ತನ್ನು ಕಾಯ್ದುಕೊಂಡು ಹೋಗುವ ಜವಾಬ್ದಾರಿ ಮುರುಗನ್ ಅವರ ಮೇಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
S Murugan took charge as North East Zone IGP in Kalaburagi IGP office. S Murugan before worked as Bellary IGP and worked in Mangalore, Mysore as commissioner.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ