ಮದುವೆ ಯಾವಾಗ ಎಂದದ್ದಕ್ಕೆ ರಾಹುಲ್ ನೀಡಿದ ಉತ್ತರ ಇದು

Posted By:
Subscribe to Oneindia Kannada
   ಮದುವೆ ಯಾವಾಗ ಅಂತ ಪ್ರಶ್ನೆ ಕೇಳಿದಕ್ಕೆ ರಾಹುಲ್ ಗಾಂಧಿ ಕೊಟ್ಟ ಉತ್ತರ? | Oneindia Kannada

   ಕಲಬುರಗಿ, ಫೆಬ್ರವರಿ 13: ಭಾರತದ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್‌ಗಳಲ್ಲಿ ಒಬ್ಬರಾದ ರಾಹುಲ್ ಗಾಂಧಿ ಅವರಿಗೆ ಕಲಬುರಗಿಯಲ್ಲಿ ಮದುವೆ ಯಾವಾಗ ಪ್ರಶ್ನೆ ಎದುರಾಯಿತು.

   ಕಲಬುರಗಿಯಲ್ಲಿ ವಿದ್ಯಾರ್ಥಿಗಳು, ನವೋದ್ಯಮಿಗಳು, ವ್ಯಾಪಾರಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯುವ ವೇಳೆ ಸಭಿಕರೊಬ್ಬರು ರಾಹುಲ್ ಗಾಂಧಿ ಅವರನ್ನು 'ನಿಮ್ಮ ಮದುವೆ ಯಾವಾಗ?' ಎಂದು ಜೋರಾಗಿ ಕೂಗಿ ಪ್ರಶ್ನೆ ಕೇಳಿದರು.

   ಕೇಂದ್ರದ ವಿದೇಶ ನೀತಿ ಸರಿಯಿಲ್ಲ, ಏಷ್ಯಾದಲ್ಲಿ ಭಾರತ ಒಂಟಿ: ರಾಹುಲ್

   ಅಲ್ಲಿಯವರೆಗೆ ಗಂಭೀರ ವದನರಾಗಿದ್ದ ರಾಹುಲ್ ಮದುವೆ ಪ್ರಶ್ನೆ ತೂರಿ ಬರುತ್ತಿದ್ದಂತೆ ನಸುನಕ್ಕರು. 'ಈ ಪ್ರಶ್ನೆ ಕೇಳಿದ್ದಕ್ಕೆ ಧನ್ಯವಾದ, ವೇದಿಕೆ ಮೇಲೆ ಇರುವವರೂ ಇದೇ ಪ್ರಶ್ನೆ ಕೇಳುತ್ತಿದ್ದಾರೆ' ಎಂದು ವೇದಿಕೆ ಮೇಲೆ ಕುಳಿತಿದ್ದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹಾಗೂ ಸಂಸದ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ರಾಹುಲ್ ಗಾಂಧಿ ನೋಡಿದರು. ಅವರೂ ನಗುತ್ತಿದ್ದರು.

   Rahul Gandhi responds to question about his marriage

   ರಾಹುಲ್ ಅವರಿಗೆ ಮದುವೆ ಪ್ರಶ್ನೆ ಇದು ಮೊದಲಲ್ಲ ಅವರು ಕಾಲೇಜು ಸಮಾರಂಭಗಳಿಗೆ ಹೋದಾಗ ಸಾಮಾನ್ಯವಾಗಿ ಈ ಪ್ರಶ್ನೆಯನ್ನು ಎದುರಿಸುತ್ತಲೇ ಇರುತ್ತಾರೆ. ಆದರೆ ಎಲ್ಲಿಯೂ ಪ್ರಶ್ನೆಗೆ ಸಮಂಜಸ ಉತ್ತರ ನೀಡದ ರಾಹುಲ್ ಕೇವಲ ನಸುನಕ್ಕು ಸುಮ್ಮನಾಗುತ್ತಾರೆ. ಇಂದೂ ಅದನ್ನೇ ಮಾಡಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   AICC president Rahul Gandhi asked about his marriage in Kalaburagi in a public program. He simply smiles and said 'thanks for the question, party seniors were also asking the same question'.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ