ಹೆಣ್ಣು ಮಕ್ಕಳನ್ನು ಬಿಜೆಪಿ ಶಾಸಕರಿಂದ ರಕ್ಷಿಸಿ: ರಾಹುಲ್ ಗಾಂಧಿ

ಕಲಬುರಗಿ, ಮೇ 04: ಮೋದಿಯವರೇ ನಿಮ್ಮ 'ಭೇಟಿ ಪಡಾವ್, ಭೇಟಿ ಬಚಾವ್' ಅನ್ನು ಬದಲಾಯಿಸಿ 'ಭೇಟಿಯೋಂಕೊ ಬಿಜೆಪಿ ಎಂಎಲ್‌ಎ ಸೆ ಬಚಾವ್' (ಹೆಣ್ಣು ಮಕ್ಕಳನ್ನು ಬಿಜೆಪಿ ಶಾಸಕರಿಂದ ಉಳಿಸಿ) ಎಂದು ಬದಲಾಯಿಸಿ ಎಂದು ರಾಹುಲ್ ಗಾಂಧಿ ಆಕ್ರೋಶ ಭರಿತವಾಗಿ ಹೇಳಿದರು.

ಕಲಬುರಗಿಯ ಕಾಳಗಿಯಲ್ಲಿ ಕಾಂಗ್ರೆಸ್ ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು, 'ಉತ್ತರ ಪ್ರದೇಶ ಮತ್ತು ಕಾಶ್ಮೀರದಲ್ಲಿ ಬಿಜೆಪಿ ಶಾಸಕ ಮಂತ್ರಿಗಳೇ ಅತ್ಯಾಚಾರ ಮಾಡಿದ್ದಾರೆ, ಅತ್ಯಾಚಾರ ಮಾಡಿದವರ ಬೆಂಬಲಕ್ಕೆ ನಿಂತಿದ್ದಾರೆ ಆದರೆ ಇದರ ಬಗ್ಗೆ ಮೋದಿ ಒಂದೂ ಮಾತು ಆಡುವುದಿಲ್ಲ' ಎಂದು ಹೇಳಿದರು.

ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಹಾಗೂ ಬಿಜೆಪಿ ಅವರ ಮೇಲೆ ಹರಿಹಾಯ್ದ ರಾಹುಲ್ ಗಾಂಧಿ, 'ಬಸವಣ್ಣ ಅವರಿಗೆ ಹಾರ ಹಾಕಿ ಕೈಮುಗಿಯುವ ಮೋದಿ ಅವರು 'ನುಡಿದಂತೆ ನಡೆದಿಲ್ಲ' ಎಂದರು.

ನಮ್ಮ ಪ್ರಧಾನಿ ಅವರು ಸುಳ್ಳು ಹೆಚ್ಚು ಹೇಳುತ್ತಾರೆ, '2 ಕೋಟಿ ಉದ್ಯೋಗ ಸೃಷ್ಠಿಸುವುದಾಗಿ ಹೇಳಿದ್ದಿರಿ, ಆದರೆ ಮಾಡಲಿಲ್ಲ, ಪ್ರತಿಯೊಬ್ಬರ ಖಾತೆಗೆ 150000 ಹಾಕುತ್ತೇನೆ ಎಂದಿದ್ದರಿ ಆದರೆ ಹಾಕಲಿಲ್ಲ ಏಕೆ ಇಷ್ಟು ಸುಳ್ಳು ಹೇಳಿ ಜನರ ಹಾದಿ ತಪ್ಪಿಸುತ್ತೀರಿ' ಎಂದು ರಾಹುಲ್ ಪ್ರಶ್ನಿಸಿದರು.

ನಾವು 10 ದಿನದಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ

ನಾವು 10 ದಿನದಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ

ನರೇಂದ್ರ ಮೋದಿ ಅವರು ಅವರ ಗೆಳೆಯರಾದ ನೀರವ್ ಮೋದಿ, ಲಲಿತ್ ಮೋದಿ, ವಿಜಯ್ ಮಲ್ಯಾರ ಸಾಲ ಮನ್ನಾ ಮಾಡುತ್ತದೆ ಆದರೆ ರೈತರ ಸಾಲ ಮನ್ನಾ ಮಾಡುವುದಿಲ್ಲ, ಆದರೆ ನಮ್ಮ ಸಿದ್ದರಾಮಯ್ಯ ಅವರು ರೈತರ ಸಾಲ ಮನ್ನಾ ಮಾಡಿದ್ದಾರೆ. ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಕೇವಲ 10 ದಿನದಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ರಾಹುಲ್ ಹೇಳಿದರು.

ಯಡಿಯೂರಪ್ಪ ಜೈಲು ಹಕ್ಕಿ

ಯಡಿಯೂರಪ್ಪ ಜೈಲು ಹಕ್ಕಿ

ಜೈಲಿಗೆ ಹೋಗಿ ಬಂದಿರುವ ಯಡಿಯೂರಪ್ಪ ಹಾಗೂ ಅವರ ಜೊತೆಗಾರರ ಹೆಗಲ ಮೇಲೆ ಕೈಹಾಕಿಕೊಂಡು ನೀವು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತೀರಿ, ರೆಡ್ಡಿ ಸಹೋದದರಿಗೆ ಟಿಕೆಟ್ ನೀಡಿರುವ ನೀವು ಭ್ರಷ್ಟಾರಾದ ಮಾತಾಡುತ್ತೀರಿ ಎಂದು ರಾಹುಲ್ ಗಾಂಧಿ ಹರಿಹಾಯ್ದರು. ರಫೇಲ್ ಹಗರಣ, ಜೈ ಶಾ ಅವರ ಹಗರಣದ ಬಗ್ಗೆ ಒಂದೂ ಮಾತಾಡದ ನೀವು ಕರ್ನಾಟಕಕ್ಕೆ ಬಂದಾಗ ಮಾತ್ರ ಭ್ರಷ್ಟಾಚಾರದ್ ಮಾತಾಡುತ್ತೀರಿ ಎಂದು ರಾಹುಲ್ ಹೇಳಿದರು.

ನಾನು ಅವರ ಮೇಲೆ ವೈಯಕ್ತಿಕ ದಾಳಿ ನಡೆಸೆನು

ನಾನು ಅವರ ಮೇಲೆ ವೈಯಕ್ತಿಕ ದಾಳಿ ನಡೆಸೆನು

ಮೋದಿ ಅವರು ನನ್ನ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ವೈಯಕ್ತಿಕ ದಾಳಿ ನಡೆಸಿದ್ದಾರೆ. ನನ್ನ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಸರಿ ನನಗೇನು ಬೇಸರವಿಲ್ಲ ಆದರೆ ನಾನು ನಿಮ್ಮ ಬಗ್ಗೆ ಹಾಗೆ ಗೌರವ ಹೀನವಾಗಿ ಮಾತನಾಡುವುದಿಲ್ಲ, ನಿಮ್ಮ ಸ್ಥಾನಕ್ಕೆ ನಾನು ಗೌರವ ಕೊಡುತ್ತೇನೆ, ಆದರೆ ನಿಮ್ಮನ್ನು ಪ್ರಶ್ನೆ ಮಾಡುವುದನ್ನು ಬಿಡುವುದಿಲ್ಲ ಎಂದು ರಾಹುಲ್ ಗಾಂಧಿ ಅವರು ಹೇಳಿದರು.

ಕರ್ನಾಟಕದ ಸಾಧನೆಗಳ ಪಟ್ಟಿ ಹೇಳಿದ ರಾಹುಲ್

ಕರ್ನಾಟಕದ ಸಾಧನೆಗಳ ಪಟ್ಟಿ ಹೇಳಿದ ರಾಹುಲ್

ಕರ್ನಾಟಕವನ್ನು ಸಿದ್ದರಾಮಯ್ಯ ಸರ್ಕಾರ ಹಸಿವು ಮುಕ್ತವನ್ನಾಗಿಸಿದೆ. ಆದರೆ 20 ವರ್ಷದಿಂದ ಬಿಜೆಪಿ ಆಡಳಿತದಲ್ಲಿರುವ ಗುಜರಾತ್‌ನಲ್ಲಿ ಇನ್ನೂ ಹಸಿವು ತಾಂಡವವಾಡುತ್ತಿದೆ. ಇಲ್ಲಿನ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ಇಲ್ಲಿನ ದಲಿತರಿಗೆ ಕೇಂದ್ರ ಒಟ್ಟಾರೆ ದೇಶಕ್ಕೆ ಕೊಡುವ ಹಣದ ಅರ್ಧ ಭಾಗವನ್ನು ಕರ್ನಾಟಕ ಸರ್ಕಾರ ನೀಡಿದೆ ಎಂದು ಸಿದ್ದರಾಮಯ್ಯ ಸರ್ಕಾರದ ಗುಣಗಾನವನ್ನು ರಾಹುಲ್ ಮಾಡಿದರು.

ನೀವು ರಾಜ್ಯಕ್ಕೆ ಬರುವುದು ಮತ್ತೊಬ್ಬರ ಬಗ್ಗೆ ಮಾತನಾಡಲಾ?

ನೀವು ರಾಜ್ಯಕ್ಕೆ ಬರುವುದು ಮತ್ತೊಬ್ಬರ ಬಗ್ಗೆ ಮಾತನಾಡಲಾ?

ಮೋದಿ ಅವರು ಕರ್ನಾಟಕಕ್ಕೆ ಬಂದಾಗಲೆಲ್ಲಾ ಬೇರೆಯವರ ವೈಯಕ್ತಿಕ ವಿಚಾರಗಳನ್ನು ಮಾತನಾಡಿ ದ್ವೇಷದ ಭಾಷಣ ಮಾಡುತ್ತಾರೆ. ಆದರೆ ಮೋದಿಯವರೆ ನೀವು ಏನು ಕೆಲಸ ಮಾಡಿದ್ದೀರಿ ಎಂದು ಜನರಿಗೆ ತಿಳಿ ಹೇಳಿ ವೋಟು ಕೇಳಿ ಅದು ಬಿಟ್ಟು ಅನ್ಯರ ವೈಯಕ್ತಿಕ ವಿಷಯದ ಬಗ್ಗೆ ಮಾತನಾಡಿ ಏಕೆ ಮತ ಕೇಳುತ್ತೀರಿ ಎಂದು ಛಾಟಿ ಬೀಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+