'ಬುರ್ಖಾ ಇಲ್ಲದೆ ಬಸ್ ಹತ್ತುವಂತಿಲ್ಲ' ಶಾಲಾ ವಿದ್ಯಾರ್ಥಿನಿಯರಿಗೆ ಚಾಲಕ ಧಮ್ಕಿ!
ಕಲಬುರಗಿ ಜುಲೈ 27: ಬಸ್ ಚಾಲಕನೊಬ್ಬ ಶಾಲಾ ವಿದ್ಯಾರ್ಥಿನಿಯರು ಬುರ್ಖಾ ಧರಿಸದ ಹೊರತು ಬಸ್ ಅನ್ನು ಹತ್ತಲು ನಿರಾಕರಿಸಿದ್ದು ಭಾರೀ ಆಕ್ರೋಶಕ್ಕೆ ಕಾರಣವಾದ ಘಟನೆ ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ವಿದ್ಯಾರ್ಥಿಗಳು ನಿತ್ಯ ಶಾಲೆಗೆ ತೆರಳಲು ಕಮಲಾಪುರ ತಾಲೂಕಿನ ಓಕಳಿ ಗ್ರಾಮದಿಂದ ಬಸವಕಲ್ಯಾಣಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಬಸವಕಲ್ಯಾಣ-ಕಲಬುರಗಿ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಸ್ ಚಾಲಕ, ಬಸ್ ಹತ್ತುವ ಮೊದಲು ಎಲ್ಲಾ ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಧರಿಸಬೇಕೆಂದು ಹೇಳಿದ್ದಾರೆ. ಮುಸ್ಲಿಮ್ ವಿದ್ಯಾರ್ಥಿಗಳಿಗೆ ಬುರ್ಖಾ ತಪ್ಪದೆ ಹಾಕಬೇಕು ಎಂದು ಚಾಲಕ ಹೇಳುವುದರೊಂದಿಗೆ ಹಿಜಾಬ್ (ತಲೆ ಸ್ಕಾರ್ಫ್) ಧರಿಸಿದವರಿಗೆ ಬಸ್ ಪ್ರವೇಶವನ್ನು ನಿರಾಕರಿಸಿದ್ದಾನೆ.

"ನೀವು ಮುಸ್ಲಿಮರಾಗಿದ್ದರೆ ಬುರ್ಖಾ ಧರಿಸಿ. ಆಗ ಮಾತ್ರ ನಾವು ನಿಮಗೆ ಬಸ್ ಹತ್ತಲು ಅವಕಾಶ ನೀಡುತ್ತೇವೆ" ಎಂದು ಚಾಲಕ ಹೇಳಿದ್ದಾನೆ ಎಂದು ಆರೋಪಿಸಲಾಗಿದೆ.
ಹೆಸರನ್ನು ಹೇಳಲು ಇಚ್ಚಿಸದ ವಿದ್ಯಾರ್ಥಿಯೊಬ್ಬರು ಘಟನೆಯನ್ನು ವಿವರಿಸಿದ್ದಾರೆ. 'ಚಾಲಕ ಅವರ ಧರ್ಮದಂತೆ ನಡೆಯಲು ನಮಗೆ ಒತ್ತಾಯಿಸಿದ್ದಾನೆ. ನಮಗೆ ಬುರ್ಖಾವನ್ನು ಧರಿಸುವಂತೆ ಒತ್ತಾಯಿಸಿದ್ದಾನೆ. ವಿದ್ಯಾರ್ಥಿ ಅದನ್ನು ಹಾಕಿಕೊಳ್ಳಲು ನಿರಾಕರಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಸ್ ಹತ್ತದಂತೆ ಓಡಿಸಿದ್ದಾನೆ' ಎಂದು ಹೇಳಿಕೊಂಡಿದ್ದಾರೆ.

ಚಾಲಕನ ಕೃತ್ಯದ ಬಗ್ಗೆ ಇತರ ಪ್ರಯಾಣಿಕರು ಪ್ರಶ್ನೆಸಿದಾಗ, ಬಸ್ ಕೆಲಸ ಮಾಡುವ ಸ್ಥಿತಿಯಲ್ಲಿಲ್ಲ. ಹೀಗಾಗಿ ವಿದ್ಯಾರ್ಥಿಗಳು ತೊಂದರೆ ಉಂಟಾಗದಿರಲು ಬಸ್ ಹತ್ತದಂತೆ ನಿರಾಕರಿಸಿದೆ ಎಂದು ಚಾಲಕ ಸಮರ್ಥಿಸಿಕೊಂಡಿದ್ದಾನೆ.












Click it and Unblock the Notifications