• search
  • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೇರಿಕಾದ ನಾಸಾಕ್ಕೆ ಹೋಗಿ ಬಂದ ಕಲಬುರಗಿ ಬಾಲಕಿ!

By ಕಲಬುರಗಿ ಪ್ರತಿನಿಧಿ
|

ಕಲಬುರಗಿ ಜನವರಿ 1 : ಕಲಬುರಗಿ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಹೆಣ್ಣು ಮಗು ಹುಟ್ಟಿದೆ ಎಂದರೆ ಆ ಮನೆಗೆ ಹುಣ್ಣು ಹುಟ್ಟಿದ ಹಾಂಗೆ ಎಂದು ಹಳ್ಳಿಯ ಜನ ಹೇಳಿರೋದು ಸುಳ್ಳು ಅನ್ನಿಸುತ್ತದೆ.

ಆದರೆ ಇದೆಲ್ಲವನ್ನು ಮೆಟ್ಟಿನಿಂತು ತನ್ನ ಬುದ್ದಿವಂತಿಕೆಯಿಂದ ವಿಶ್ವದಲ್ಲಿ ಶ್ರೇಷ್ಟವಾದ ಅಮೇರಿಕಾದ ಬಾಹ್ಯಕಾಶ ಸಂಸ್ಥೆ ನಾಸಾವರೆಗೆ ಹಳ್ಳಿ ಹುಡುಗಿ ಹೋಗಿ ಬಂದಿದ್ದಾಳೆ. ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಕುಗ್ರಾಮವಾದ ಹೆಗ್ಗನಹಳ್ಳಿಯ ಈ ಬಾಲೆ ಬಸವರಾಜ ಮತ್ತು ಭುವನೇಶ್ವರಿ ದಂಪತಿಯ ಪುತ್ರಿಯಾದ ನೇಹಾ ಕಿರಣ್ ವಿದೇಶದಲ್ಲಿ ತಮ್ಮ ಬುದ್ದಿವಂತಿಕೆಯಿಂದ ಹೆಸರು ಮಾಡುತ್ತಿದ್ದಾಳೆ.

ತಮಿಳುನಾಡಿನ ವಿದ್ಯಾರ್ಥಿ ಸಾಧನೆ ಮೆಚ್ಚಿದ ನಾಸಾ!

ಕೇವಲ ಹೈದಿನೈದು ವರ್ಷದ ನೇಹಾ ಕಿರಣ್ ತನ್ನ ಬುದ್ದಿವಂತಿಕೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ. ಭುವನೇಶ್ವರಿ ಮತ್ತು ಬಸವರಾಜ ದಂಪತಿಯು ಯುಎಇನಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ಬಸವರಾಜ ಅವರು ಸಿಮೆಂಟ್ ಕಂಪನಿಯಲ್ಲಿ ಎಂಜಿನಿಯರ್ ಹಾಗೂ ತಾಯಿ ಭುವನೇಶ್ವರಿ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಎಲ್ ಕೆಜಿಯಿಂದ ಯುಎಇನ ಪುಜೈರಾ ಪ್ರದೇಶದಲ್ಲಿರುವ ಮಾರ್ಡನ್ ಇಂಡಿಯನ್ ಶಾಲೆಯಲ್ಲಿ ಓದುತ್ತಿರುವ ನೇಹಾ ಕಿರಣ್ ಇದೀಗ ಅಮೆರಿಕದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾಳೆ.

ಗಗನಯಾನಕ್ಕೆ ಆಯ್ಕೆಯಾದ ಅನಿವಾಸಿ ಭಾರತೀಯ ರಾಜಚಾರಿ

9ನೇ ತರಗತಿಯ ಓದುತ್ತಿರುವ ನೇಹಾ ಕಿರಣ್ ಅವರ ಸಂಶೋಧನೆಗಳನ್ನು ಮೆಚ್ಚಿ ನಾಸಾ ಸಂಸ್ಥೆಯು ಆಕೆಯನ್ನು ಅಮೇರಿಕಾಕ್ಕೆ ಕರೆದುಕೊಂಡು ಹತ್ತು ದಿನಗಳ ಕಾಲ ಬಾಹ್ಯಾಕಾಶ ಬಗ್ಗೆ ತರಭೇತಿ ನೀಡಿ ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಮಾಡಲು ಪ್ರೇರೇಪಿಸಿದೆಯಂತೆ.

ಇನ್ನೂ ಯುಎಇನಲ್ಲಿ ನೇಹಾ ಕಿರಣ್ ಇದೀಗ ಯುಎಇನಲ್ಲಿ ವಿಜ್ಞಾನದ ಸ್ಪರ್ದೆಯಲ್ಲಿದ್ದರೂ ಕೂಡ ಭಾಗವಹಿಸಿ ಅಲ್ಲಿ ಪ್ರಥಮ ಸ್ಥಾನ ಪಡೆಯುತ್ತಿದ್ದಾಳೆ. ಕನ್ನಡ, ಇಂಗ್ಲಿಷ್, ಹಿಂದಿ ಅರೆಬಿಯಾ ಭಾಷೆಗಳನ್ನು ಅರುಳು ಹುರಿದಂತೆ ಮಾತನಾಡುವ ನೇಹಾ ಕಿರಣ್ ರಸಪ್ರಶ್ನೆ ಇರಲಿ ಪತ್ರಿಯೊಂದರಲ್ಲೂ ತನ್ನ ಪ್ರತಿಭೆ ತೋರಿಸುತ್ತಿದ್ದಾಳೆ.

ಯಾವ ಕ್ಷೇತ್ರದಲ್ಲಿ ನಾಸಾಗೆ ಆಯ್ಕೆ: ನೇಹಾ ಕಿರಣ್ ಅವರು ನಾಸಾ ನಡೆಸುವ ಟ್ಯಾಲೆಂಟ್ ಹಂಟ್ ನಡೆಸಿದ್ದಾಗ ಅನೇಕ ವಿದ್ಯಾರ್ಥಿಗಳಿಗೆ ಸಂಶೋಧನೆಯ ಕುರಿತ್ತು ಪ್ರಾಜೆಕ್ಟ್ ವರ್ಕ್ ನೀಡಿದ್ದರಂತೆ ಅದರಲ್ಲಿ ನೇಹಾ ಕಿರಣ್ ರೋಬೋಟ್ ಗಳ ಕುರಿತು ಸಂಶೋಧನೆ ಮಾಡಿದ ವರದಿಯನ್ನು ಮೆಚ್ಚಿಕೊಂಡ ನಾಸಾ ಕಳೆದ 14ರಿಂದ 24ರವರೆಗೆ ಹತ್ತು ದಿನಗಳ ಕಾಲ ಆಕೆಯನ್ನು ನಾಸಾಕ್ಕೆ ಕರೆಸಿಕೊಂಡು ಸಂಶೋಧನೆ ಕುರಿತು ಮಾಹಿತಿ ನೀಡಿದ್ದಾರೆ. ಆ ಮೂಲಕ ವಿದ್ಯಾರ್ಥಿಗಳಲ್ಲಿನ ಸಂಶೋಧನೆ ಮನೋಭಾವ ಹೆಚ್ಚಿಸುವ ಕೆಲಸ ಮಾಡಿದ್ದರಿಂದ ಅಂತಹ ಅವಕಾಶವನ್ನು ನೇಹಾಗೆ ದೊರೆತಿದೆ.

ಹೈದರಾಬಾದ್ ಕರ್ನಾಟಕದ ಹಿಂದುಳಿದ ಕುಟುಂಬದವರಾದ ಇವರು ಮುಂದಿನ ವರ್ಷದಿಂದ ಭಾರತದಲ್ಲಿ ನೆಲೆಸಿ ಇನ್ನೂ ಹೆಚ್ಚಿನ ಸಂಶೋಧನೆ ಮಾಡಿ ಭಾತರದ ಕೀರ್ತಿ ಜಗತ್ತಿನ ಮುಂದೆ ಇಡಲು ಸಜ್ಜಾಗಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಹುಟ್ಟಿರುವ ಪ್ರತಿಭಾವಂತ ಬಾಲಕಿಯ ಇದೀಗ ವಿಶ್ವದಲ್ಲಿ ಹೆಸರು ಮಾಡುತ್ತಿದ್ದಾಳೆ ಚಿಕ್ಕ ವಯಸ್ಸಿನಲ್ಲಿಯೇ ಬಾಹ್ಯಾಕಾಶ, ರೋಬೋಟ್ ಗಳು ಸೇರಿದಂತೆ ಅನೇಕ ವಿಷಯಗಳಲ್ಲಿ ಸಂಶೋಧನೆ ಮಾಡುತ್ತಿದ್ದು ಅವಳ ಸಂಶೋಧನೆಗೆ ಅನೇಕ ವಿಜ್ಞಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಇಂತಹ ಪ್ರತಿಭೆಗಳಿಗೆ ಇನ್ನಷ್ಟು ಪ್ರೋತ್ಸಾಹ ಸಿಕ್ಕರೆ ದೇಶದ ಕೀರ್ತಿಯನ್ನು ಜಗತ್ತಿನಲ್ಲಿ ಪಸರಿಸಲು ಅನುಕೂಲವಾಗಲಿದೆ. ಇನ್ನೂ ಹೆಣ್ಣು ಹುಟ್ಟಿದೆ ಎಂದು ಮರುಗುತ್ತಿರುವ ಜನರಿಗೆ ನೇಹಾ ಕಿರಣ್ ಸಾಧನೆಯು ಒಂದು ಆದರ್ಶವಾಗಲಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 15 year old girl, Neha Kiran from Hegganahalli village of Sedam taluk in Kalaburagi district, who is studying in ninth standard in UAE has been selected for NASA training in aerospace science through a talent hunt program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more