ಮೆಡಿಕಲ್ ವಿದ್ಯಾರ್ಥಿನಿಯರ ಬೈಕ್ ಗಳಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು

Posted By: Nayana
Subscribe to Oneindia Kannada

ಕಲಬುರಗಿ, ಡಿಸೆಂಬರ್ 02 : ಲೇಡೀಸ್ ಪಿಜಿ ಎದುರು ಬಂದು ಯುವಕರು ದಾಂಧಲೆ ಮಾಡುವುದು, ಕೀಟಲೆ ಕೊಡುವುದು ಸಾಮಾನ್ಯ ಆದರೆ ಲೇಡೀಸ್ ಪಿಜಿ ಎದುರು ನಿಲ್ಲಿಸಿರುವ ಬೈಕ್ ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಶುಕ್ರವಾರ ತಡರಾತ್ರಿ ಕಲಬುರಗಿಯ ಎಂಬಿ ನಗರದ ಪಿಜಿ ಮುಂದೆ ಈ ಘಟನೆ ನಡೆದಿದ್ದು, ಎಂಟು ಬೈಕ್ ಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಮೆಡಿಕಲ್ ವಿದ್ಯಾರ್ಥಿನಿಯರಿಗೆ ಸೇರಿದ ಎಂಟು ಬೈಕ್ ಗಳು ಸುಟ್ಟು ಭಸ್ಮವಾಗಿದೆ.

Miscreants burned bike near ladies PG

ಪಿಜಿಯಲ್ಲಿ ಸೂಕ್ತ ಭದ್ರತೆ ಇಲ್ಲದಾಗಿದೆ, ಜತೆಗೆ ಭದ್ರತಾ ಸಿಬ್ಬಂದಿಯನ್ನು ಕೂಡ ನೇಮಕ ಮಾಡಿಕೊಂಡಿಲ್ಲ. ಪಿಜಿಗೆ ಸಿಸಿಟಿವಿ ಅಳವಡಿಸದೇ ಇರುವುದಕ್ಕೆ ಮಾಲೀಕರ ವಿರುದ್ಧ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದು, ಎಂಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Miscreants have burned eight bikes which were parked in front of Ladies PG in Kalaburagi Friday night.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ