ಕಲಬುರಗಿಯಲ್ಲಿ ತಂದೆಯ ಕಣ್ಣೆದುರೇ ಮಗನನ್ನು ಕೊಂದ ದುಷ್ಕರ್ಮಿಗಳು
ಕಲಬುರಗಿ, ಜನವರಿ 8: ಲಾರಿಯನ್ನು ತಡೆದು, ಚಾಲಕನನ್ನು ಕೊಲೆ ಮಾಡಿದ ದುಷ್ಕರ್ಮಿಗಳು ಆ ನಂತರ ಪರಾರಿಯಾದ ಘಟನೆ ಕಲಬುರಗಿ-ಆಳಂದ ರಸ್ತೆಯ ಟೋಲ್ ಗೇಟ್ ಬಳಿ ಸಂಭವಿಸಿದೆ. ಯುವರಾಜ್ ( 19) ಕೊಲೆಯಾದ ಲಾರಿ ಚಾಲಕ. ಈತ ಮಹಾರಾಷ್ಟ್ರದ ಲಾತೂರ್ ನಿಂದ ಕಲಬುರಗಿಗೆ ಲಾರಿ ತರುತ್ತಿದ್ದ.
ಈತನ ತಂದೆ ದಿಗಂಬರ ಸಹ ಚಾಲಕರಾಗಿದ್ದರು. ಲಾರಿ ನಿಲ್ಲಿಸಿ ಬಹಿರ್ದೆಸೆಗೆ ಹೋಗಿದ್ದ ದಿಗಂಬರ್ ಮೇಲೆ ಆಗಂತುಕರು ಹಲ್ಲೆಗೆ ಮುಂದಾಗಿದ್ದಾರೆ. ಆಗ ತಂದೆಯ ರಕ್ಷಣೆಗೆ ಧಾವಿಸಿದ ಮಗ ಯುವರಾಜನ ಕುತ್ತಿಗೆಗೆ ಚಾಕುವಿನಿಂದ ಹೊಡೆದಿದ್ದಾರೆ. ಆಗಂತುಕರ ಈ ದಾಳಿಯ ವೇಳೆ ಚಾಲಕ ಯುವರಾಜ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಕಲಬುರಗಿಯ ಗ್ರಾಮೀಣದ ಡಿವೈಎಸ್ಪಿ ಎಸ್.ಎಸ್. ಹುಲ್ಲೂರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದರೋಡೆಕೋರರಿಂದ ಈ ಕೃತ್ಯ ನಡೆದಿರುವ ಶಂಕೆ ಇದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಹತ್ತೊಂಬತ್ತು ವರ್ಷದ ಯುವರಾಜ್ ನ ಜೀವ ಹೀಗೆ ತಂದೆಯ ಕಣ್ಣೆದುರು ಹೋಗಿದೆ.












Click it and Unblock the Notifications