ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಇಲ್ಲದೆ ಕೆ.ಪಿ.ಎಂ.ಇ ಕಾಯ್ದೆ ಮಂಡನೆ ಆಗುತ್ತಿರಲಿಲ್ಲ : ರಮೇಶ್ ಕುಮಾರ್

By Manjunatha
|
Google Oneindia Kannada News

ಕಲಬುರಗಿ, ನವೆಂಬರ್ 28 : ಹಲವಾರು ಅಡೆತಡೆಗಳ ನಡುವೆಯೂ ಕೆ.ಪಿ.ಎಂ.ಇ ಕಾಯ್ದೆಯನ್ನು ಯಶಸ್ವಿಯಾಗಿ ಮಂಡಿಸಿ ಅನುಮೋದನೆ ಗಳಿಸಿಕೊಂಡಿರುವ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಆತ್ಮತೃಪ್ತಿಯಿಂದ ಬೀಗುತ್ತಿದ್ದಾರೆ. ಈ ಸಮಯದಲ್ಲಿ ಅವರು ಕಾಯ್ದೆ ತರಲು ಬೆನ್ನೆಲೆಬಾಗಿ ಸಹಕರಿಸದವರನ್ನು ನೆನೆಯುವುದನ್ನು ಮರೆತಿಲ್ಲ.

ಕೆಪಿಎಂಇ ಕಾಯ್ದೆ ಹಲ್ಲು ಕಿತ್ತ ಹಾವಲ್ಲ ಹಗ್ಗ : ರಮೇಶ್ ಕುಮಾರ್ಕೆಪಿಎಂಇ ಕಾಯ್ದೆ ಹಲ್ಲು ಕಿತ್ತ ಹಾವಲ್ಲ ಹಗ್ಗ : ರಮೇಶ್ ಕುಮಾರ್

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಕುಮಾರ್ ಅವರು ಕೆ.ಪಿ.ಎಂ.ಇ ಕಾಯ್ದೆ ಮಂಡನೆಯಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಬಹಳ ದೊಡ್ಡದು, ಅವರ ಬೆಂಬಲ ಇಲ್ಲದಿದ್ದರೆ ಕಾಯ್ದೆ ಮಂಡನೆ ಆಗುತ್ತಿರಲಿಲ್ಲ ಎಂದರು.

KPME : minister Rameshkumar thanks Siddaramaiah for support

'ಸಿದ್ದರಾಮಯ್ಯ ಅವರು ಕಲ್ಲುಬಂಡೆಯಾಗಿ ಈ ಕಾಯ್ದೆ ಮಂಡನೆ ವಿಚಾರದಲ್ಲಿ ನಿಂತಿದ್ದಾರೆ, ಅವರು ಇಲ್ಲದಿದ್ದಲ್ಲಿ ಕಾಯ್ದೆ ಮಂಡನೆ ಅಸಾಧ್ಯವಾಗುತ್ತಿತ್ತು' ಎಂದು ಅವರು ಸಿದ್ದರಾಮಯ್ಯ ಅವರ ಬೆಂಬಲವನ್ನು ನೆನೆದರು.

ಸಿದ್ದರಾಮಯ್ಯ ಅವರು ಕಾಯ್ದೆ ಮಂಡನೆಯಲ್ಲಿ ವಿಶೇಷ ಆಸ್ತೆ ತೋರಿದ್ದರಿಂದ ಕೆಪಿಎಮ್‌ಇ ಕಾಯ್ದೆ ಮಂಡನೆಯಿಂದ ನನ್ನ ಭಾರ ಕಡಿಮೆಯಾಗಿದೆ ಎಂದ ಅವರು ಈ ವಿಚಾರದಲ್ಲಿ ಸಿದ್ದರಾಮಯ್ಯನವರಿಗೆ ಅಭಾರಿಯಾಗಿದ್ದೇನೆ ಎಂದರು.

ಕೆಪಿಎಂಇ ಕಾಯ್ದೆ ವಿಧಾನಪರಿಷತ್ ನಲ್ಲಿ ಅಂಗೀಕಾರಕೆಪಿಎಂಇ ಕಾಯ್ದೆ ವಿಧಾನಪರಿಷತ್ ನಲ್ಲಿ ಅಂಗೀಕಾರ

ಈ ಕಾಯ್ದೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ಸಾಕಷ್ಟು ಅಂಶಗಳಿವೆ ಅದನ್ನು ಜನ ಗುರುತಿಸಬೇಕು, ನಮ್ಮ ಜನರಿಗೆ ಅಸಡ್ಡೆ ಮನೋಭಾವವಿದೆ, ನಮಗ್ಯಾಕೇ ಉಸಬಾರಿ ಅಂತಾರೆ, ಆದರೆ ಜನರು ಜಾಗೃತರಾಗಬೇಕು ಎಂದು ಅವರು ಹೇಳಿದರು.

English summary
Health Minister Ramesh Kumar said that Siddaramaiah is the driving force behind me in KPME bill. RameshKumar thanks CM for giving all his support in KPME issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X