ಬೇಸಿಗೆ ಶುರು, ರಾಜ್ಯದ ಈ 8 ಜಿಲ್ಲೆಗಳ ಸರಕಾರಿ ಕಚೇರಿ ಸಮಯ ಬದಲು

Posted By: ಕಲಬುರಗಿ ಪ್ರತಿನಿಧಿ
Subscribe to Oneindia Kannada

ಕಲಬುರಗಿ, ಏಪ್ರಿಲ್ 7: ಬೇಸಿಗೆ ಕಾರಣಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರಕಾರಿ ಕಚೇರಿ ಕೆಲಸದ ವೇಳೆಯಲ್ಲಿ ಬದಲಾವಣೆ ಮಾಡಲಾಗಿದೆ. ಕಲಬುರಗಿ ವಿಭಾಗದ 6 ಜಿಲ್ಲೆಗಳು ಹಾಗೂ ಬೆಳಗಾವಿ ವಿಭಾಗದ 2 ಜಿಲ್ಲೆಗಳಲ್ಲಿ ಸರಕಾರಿ ಕಚೇರಿ ವೇಳೆ ಬದಲಾವಣೆ ಆಗಲಿದೆ. ಆದ್ದರಿಂದ ಯಾವುದೇ ಸರಕಾರಿ ಕೆಲಸಗಳಿದ್ದರೆ ಬದಲಾವಣೆ ಸಮಯ ಗಮನಿಸಿಕೊಂಡು ಹೋಗಿ.

ಉತ್ತರ ಭಾರತದಲ್ಲಿ ಉಷ್ಣ ಹವೆ: ದಕ್ಷಿಣದಲ್ಲೂ ರಣಬಿಸಿಲು

ಏಪ್ರಿಲ್ 6 ರಿಂದ ಮೇ 31ರ ವರೆಗೆ ಈ ಆದೇಶ ಅನ್ವಯ ಆಗುತ್ತದೆ. ಈ ಅವಧಿಯಲ್ಲಿ ಸರಕಾರಿ ಕಚೇರಿಗಳು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30ರ ವರೆಗೆ ಮಾತ್ರ ಕರ್ತವ್ಯ ನಿರ್ವಹಿಸುತ್ತವೆ. ಈ ಬಗ್ಗೆ ಸರಕಾರದ ಅಧೀನ ಕಾರ್ಯದರ್ಶಿ (ಸಿಬ್ಬಂದಿ ಆಡಳಿತ ಸುಧಾರಣೆ) ಸುಜಾತ ಎಚ್.ಎಸ್. ಆದೇಶ ಹೊರಡಿಸಿದ್ದಾರೆ.

Karnataka state 8 districts government office timings changed due to summer

ಕಲಬುರಗಿ ವಿಭಾಗದ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ ಹಾಗೂ ಬಳ್ಳಾರಿ ಮತ್ತು ಬೆಳಗಾವಿ ವಿಭಾಗದ ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಸರಕಾರಿ ಕಚೇರಿಗಳ ಕೆಲಸದ ಸಮಯದಲ್ಲಿ ಈ ಬದಲಾವಣೆ ಅನ್ವಯ ಆಗುತ್ತದೆ. ಇನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಿದ ಅಧಿಕಾರಿಗಳು ಈ ಸಮಯ ಬದಲಾವಣೆಯಿಂದ ಆಡಳಿತಕ್ಕೆ ತೊಂದರೆ ಆಗದಂತೆ ನಡೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Government offices of 6 districts in Kalaburagi region and 2 district in Belagavi region working time changed to 8 AM to 1.30 PM from April 6th to May 31st due to summer.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ