ಕಲಬುರಗಿ: ಓರಿಯಂಟ್ ಕಂಪನಿಯಲ್ಲಿ ಕಾರ್ಮಿಕರಿಬ್ಬರ ದುರ್ಮರಣ, ಪ್ರತಿಭಟನೆ

By: ನಮ್ಮ ಪ್ರತಿನಿಧಿ
Subscribe to Oneindia Kannada

ಕಲಬುರಗಿ, ಅಕ್ಟೋಬರ್ 12: ಜಿಲ್ಲೆಯ ಚಿತ್ತಾಪೂರ ತಾಲ್ಲೂಕಿನ ಇಟಗಾ ಗ್ರಾಮದಲ್ಲಿ ಸ್ಥಾಪನೆಯಾಗಿದ್ದ ಓರಿಯಂಟ್ ಕಂಪನಿಯಲ್ಲಿ ಬುಧವಾರ ವಿದ್ಯುತ್ ಸ್ಪರ್ಶದಿಂದ ಇಬ್ಬರು ಕಾರ್ಮಿಕರ ಸಾವನ್ನಪ್ಪಿದ್ದಾರೆ.

ಮೃತ ಕಾರ್ಮಿಕರನ್ನುಮೋನಪ್ಪ ಹಣಮಂತ ಡಿಗ್ಗಿ (33), ಮಹೇಶ ಹಣಮಂತ ಭೇಟಿಗೇರಿ (30) ಎಂದು ಗುರುತಿಸಲಾಗಿದೆ.

Kalaburagi: Two workers died in Orient Company

ಕಾರ್ಮಿಕರು ಸಾವನ್ನಪ್ಪಿದ್ದರಿಂದ ಕಾರ್ಮಿಕರ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಕಂಪನಿಗೆ ಮುತ್ತಿಗೆ ಹಾಕಿದ್ದರು.

ಕಂಪನಿಯ ಅಧಿಕಾರಿಗಳು ಸ್ಥಳಕ್ಕೆ ತಡವಾಗಿ ಅಂದರೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆಗಮಿಸಿದ್ದರಿಂದ ಜನ ರೊಚ್ಚಿಗೆದ್ದಿದ್ದರು.

Kalaburagi: Two workers died in Orient Company

ಈ ವೇಳೆ ಕಲ್ಲು ತೂರಾಟದಿಂದ ಪೊಲೀಸರಿಗೆ, ಪರ್ತಕರ್ತರಿಗೆ ಹಾಗೂ ಹಲವು ಗ್ರಾಮಸ್ಥರಿಗೆ ಗಾಯಗಳಾಗಿವೆ.

ಕುಟುಂಬಸ್ಥರು ಮತ್ತು ಗ್ರಾಮಸ್ಥರ ಪ್ರತಿಭಟನೆಯಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ರೊಚ್ಚಿಗೆದ್ದಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two labourers were killed on Wednesday in Orient company, which was founded at Itaga village in Chittapura taluk of the Kalaburagi district. The deceased have been identified as Monappa Hanamantha Diggi (33) and Mahesh (30).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ