ಕಲಬುರಗಿಯಲ್ಲಿ SSLC ವಿದ್ಯಾರ್ಥಿಗಳಿಗೆ ಚೀಟಿ ನೀಡುವ ಪ್ರಯತ್ನ
ಬೆಂಗಳೂರು, ಜೂನ್ 25: ಕೊರೊನಾ ಸೋಂಕಿನ ನಡುವೆ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆದಿದೆ. ಆದರೆ, ಈ ಪರಿಸ್ಥಿತಿಯಲ್ಲಿಯೂ ನಕಲಿ ಮಾಡುವ ಪ್ರಯತ್ನಗಳು ಮಾತ್ರ ನಿಂತಿಲ್ಲ.
ಕಲಬುರಗಿಯ ಹಳೆ ಜೇವರ್ಗಿ ರಸ್ತೆಯಲ್ಲಿ ಲೋಕೋಪಯೋಗಿ ವಸತಿ ಗೃಹದ ಹತ್ತಿರದಲ್ಲಿರುವ ಸರ್ಕಾರಿ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ನಕಲಿ ಮಾಡುವ ಪ್ರಯತ್ನಗಳು ನಡೆದಿವೆ. ಕೆಲವು ಯುವಕರು ವಿದ್ಯಾರ್ಥಿಗಳಿಗೆ ಚೀಟಿ ನೀಡುವ ದೃಶ್ಯಗಳು ಫೋಟೋದಲ್ಲಿ ಸೆರೆಯಾಗಿವೆ.
ಮೊದಲ ದಿನವೇ ನಕಲು ಮಾಡುವ ಪ್ರಯತ್ನ ನಡೆದಿದೆ. ಸರ್ಕಾರಿ ಪ್ರೌಢಶಾಲೆ ಪರೀಕ್ಷಾ ಕೇಂದ್ರದ ಗೋಡೆಯ ಮೇಲೆ ಹತ್ತಿ ವಿದ್ಯಾರ್ಥಿಗಳಿಗೆ ಚೀಟಿ ಹಂಚಿದ್ದಾರೆ. ಒಬ್ಬ ಯುವಕ ಗೋಡೆಯ ಆ ಬದಿಗೆ ಚೀಟಿ ನೀಡುತ್ತಿದ್ದು, ಉಳಿದ ಯುವಕರು ರಸ್ತೆಯ ಬದಿ ನಿಂತಿದ್ದಾರೆ.

ಪರೀಕ್ಷೆಯ ಕೇಂದ್ರದ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಇದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಶಾಲೆಯ ಹೊರೆಗೆ ಯಾವುದೇ ಪೊಲೀಸರು ಇಲ್ಲದ ಇರುವುದನ್ನು ನೋಡಿ ಯುವಕರು ತಮ್ಮ ಕೆಲಸ ಮಾಡಲು ಮುಂದಾಗಿದ್ದಾರೆ.
ಈ ಬಾರಿ ರಾಜ್ಯದಲ್ಲಿ 8,48,203 ಮಕ್ಕಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದಾರೆ.












Click it and Unblock the Notifications