ಕಲಬುರಗಿ : ದರೋಡೆ ಕೋರರಿಗೆ ಗುಂಡೇಟು

Posted By: Gururaj
Subscribe to Oneindia Kannada

ಕಲಬುರಗಿ, ಡಿಸೆಂಬರ್ 01 : ಕಲಬುರಗಿಯಲ್ಲಿ ದರೋಡೆಕೋರನನ್ನು ಹಿಡಿಯಲು ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಆರೋಪಿ ಇರ್ಫಾನ್ ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗುರುವಾರ ರಾತ್ರಿ ಕಲಬುರಗಿ ನಗರದ ಹೊರವಲಯದ ರಿಂಗ್ ರಸ್ತೆಯಲ್ಲಿ ಇರ್ಫಾನ್ (25) ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆತನ ಕಾಲಿಗೆ ಗುಂಡು ತಗುಲಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿ ಸರಗಳ್ಳನಿಗೆ ಪೊಲೀಸರಿಂದ ಗುಂಡೇಟು

Kalaburagi police open fire at robber

ರಾತ್ರಿ ಅಮರ್ ವೈನ್ಸ್ ಮ್ಯಾನೇಜರ್‌ನನ್ನು ಬಿದ್ದಾಪುರ ಕ್ರಾಸ್ ಬಳಿ ಅಡ್ಡಗಟ್ಟಿದ ಮೂವರ ತಂಡ, ಹಣ, ಮೊಬೈಲ್, ಬೈಕ್ ಕಸಿದು ಪರಾರಿಯಾಗುತ್ತಿದ್ದರು. ವಿಷಯ ತಿಳಿದ ಫರಹತ್ತಬಾದ್ ಮತ್ತು ಗ್ರಾಮೀಣ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ಆರಂಭಿಸಿದರು.

ಶಿವಮೊಗ್ಗ ಎಸ್‌ಪಿ ಕಚೇರಿಯಿಂದ ಆನೆ ದಂತ ನಾಪತ್ತೆ!

ಆರೋಪಿಗಳನ್ನು ಬಂಧಿಸಲು ಹೋದಾಗ ಅವರು ಇಟ್ಟಿಗೆ ಮತ್ತು ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾದರು. ಆಗ ಆತ್ಮ ರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದರು.

ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ. ಪಿಎಸ್‌ಐ ವಾಹಿದ್ ಕೋತ್ವಾಲ್, ಪೇದೆಗಳಾದ ಕೇಶವ ಬಾದಶಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kalaburagi police opened fire at robber when he tried to attack police constables on November 30, 2017 night.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ