ಚಿತ್ರಗಳು : ಕಲಬುರಗಿ ಜನರ ದಶಕಗಳ ಕನಸು ನನಸಾದ ಕ್ಷಣ

ಕಲಬುರಗಿ, ಆಗಸ್ಟ್ 26 : ಕಲಬುರಗಿ-ಸೇಡಂ ರಸ್ತೆಯಯಲ್ಲಿರುವ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಭಾನುವಾರ ನಡೆಸಲಾದ ಪ್ರಾಯೋಗಿಕ ಲಘು ವಿಮಾನದ ಹಾರಾಟ ಯಶಸ್ವಿಯಾಗಿದೆ. ಈ ಮೂಲಕ ಸೂರ್ಯ ನಗರಿ ಕಲಬುರಗಿ ಜನರ ದಶಕದ ಕನಸು ನನಸಾಗಿದೆ.

ಹೈದರಾಬಾದ್‌ನ ಏಶಿಯನ್ ಪೆಸಿಫಿಕ್ ಫ್ಲೈಟ್ ಟ್ರೇನಿಂಗ್ ಅಕಾಡೆಮಿಯ ಡೈಮಂಡ್ 40 ಮತ್ತು ಡೈಮಂಡ್ 42 ಎಂಬ 4 ಅಸನವುಳ್ಳ ಎರಡು ಲಘು ವಿಮಾನಗಳು ಬೆಳಗ್ಗೆ ಕ್ರಮವಾಗಿ 10 ಗಂಟೆ 50 ನಿಮಿಷಕ್ಕೆ ಮತ್ತು 11 ಗಂಟೆ 20 ನಿಮಿಷಕ್ಕೆ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಬಂದಿಳಿದವು.

ವಿಮಾನ ಹಾರಾಟ ಯಶಸ್ವಿಯಾಗಿದ್ದರಿಂದ ಕಲಬುರಗಿ ಜಿಲ್ಲೆಯ ಜನರ ಗಗನ ಹಾರಾಟದ ಆಸೆಗೆ ಹಸಿರು ನಿಶಾನೆ ತೋರಿಸಿದಂತಾಯಿತು. ಈ ಸಂದರ್ಭದಲ್ಲಿ ವಿಮಾನ ಲ್ಯಾಂಡ್ ಮಾಡಿದ ಪೈಲಟ್ ಮತ್ತು ಇತರೆ ಸಿಬ್ಬಂದಿಗಳನ್ನು ಕಲಬುರಗಿ ಸಂಸದ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಸ್ವಾಗತಿಸಿದರು.

'ಇಂದು ನಡೆಸಲಾದ ಪ್ರಾಯೋಗಿಕ ವಿಮಾನ ಹಾರಾಟ ಯಶಸ್ವಿಯಾಗಿದ್ದು, ಪೈಲಟ್‍ಗಳು ನಿಲ್ದಾಣ ಮತ್ತು ರನ್ ವೇ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಬೃಹತ್ ಆಕಾರದ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಯಾನ ಸಚಿವಾಲಯದ ನಿರ್ದೇಶನದನ್ವಯ ರನ್ ವೇ ಸಿದ್ಧಪಡಿಸಲಾಗಿದ್ದು, ಜೆಟ್ ಸೇರಿದಂತೆ ದೊಡ್ಡ ವಿಮಾನಗಳು ಸಹ ಇಲ್ಲಿ ಲ್ಯಾಂಡ್ ಮಾಡಬಹುದಾಗಿದೆ' ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಹಲವು ವರ್ಷಗಳ ಬೇಡಿಕೆ ಈಡೇರಿದೆ

ಹಲವು ವರ್ಷಗಳ ಬೇಡಿಕೆ ಈಡೇರಿದೆ

'ರಾಜ್ಯದ ಇತರ ವಿಮಾನ ನಿಲ್ದಾಣಗಳು ಕ್ರಮೇಣವಾಗಿ ಅಭಿವೃದ್ಧಿಗೊಂಡಿದರೆ ಕಲಬುರಗಿ ವಿಮಾನ ನಿಲ್ದಾಣ ಆರಂಭದಲ್ಲಿಯೇ ಎಲ್ಲಾ ಸೌಲಭ್ಯಗಳು ಹೊಂದಿರುವುದು ವಿಶೇಷ. ಕಲಬುರಗಿ ಜನರ ಹತ್ತಾರು ವರ್ಷದ ಬೇಡಿಕೆ ಸಾಕಾರಗೊಂಡ ಕ್ಷಣ ಇದಾಗಿದೆ' ಎಂದು ಮಲ್ಲಿಕಾರ್ಜುನ ಖರ್ಗೆ ಹರ್ಷ ವ್ಯಕ್ತಪಡಿಸಿದರು.

'ಕಲಬುರಗಿ ವಿಮಾನ ನಿಲ್ದಾಣದಿಂದ ವಾಣಿಜ್ಯ ಕಾರ್ಯಾಚರಣೆ ಆರಂಭಿಸಲು ಈಗಾಗಲೇ ರಾಜ್ಯ ಸರ್ಕಾರದಿಂದ ನಾಗರೀಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆಯಲಾಗಿದ್ದು, ತಾವು ಸಹ ಸಚಿವಾಲಯದ ಅಧಿಕಾರಿಗಳನ್ನು ಖುದ್ದಾಗಿ ಭೇಟಿ ಮಾಡಿ ಉಡಾನ್ ಯೋಜನೆಯಡಿ ಕಲಬುರಗಿ ವಿಮಾನ ನಿಲ್ದಾಣ ತೆಗೆದುಕೊಂಡು ಇಲ್ಲಿನ ಜನರ ಗಗನ ಹಾರಾಟಕ್ಕೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಲಾಗುವುದು' ಎಂದು ಖರ್ಗೆ ಹೇಳಿದರು.

ಏರ್ ಇಂಡಿಯಾ ವಿಮಾನ ಹಾರಾಟ?

ಏರ್ ಇಂಡಿಯಾ ವಿಮಾನ ಹಾರಾಟ?

'371ಜೆ ವಿಶೇಷ ಸ್ಥಾನಮಾನ ಹೊಂದಿರುವ ಹೈದ್ರಾಬಾದ್‌ ಕರ್ನಾಟಕದಲ್ಲಿ ಕಲಬುರಗಿ ವಿಮಾನ ನಿಲ್ದಾಣ ಸಜ್ಜುಗೊಂಡಿದ್ದು, ಏರ್ ಇಂಡಿಯಾ ಸಂಸ್ಥೆಯು ವಿಶೇಷ ಕಾಳಜಿ ವಹಿಸಿ ಪ್ರತಿ ದಿನ ಬೆಳಗ್ಗೆ ಮತ್ತು ಸಾಯಂಕಾಲ ಸಾರ್ವಜನಿಕರ ಪ್ರಯಾಣಕ್ಕೆ ವಿಮಾನ ಸೇವೆಯ ಅವಕಾಶ ಮಾಡಿಕೊಡಬೇಕು' ಎಂದು ಕೇಂದ್ರ ಸರ್ಕಾರವನ್ನು ಖರ್ಗೆ ಒತ್ತಾಯ ಮಾಡಿದರು.

'740 ಎಕರೆ ಪ್ರದೇಶದ ವಿಸ್ತೀರ್ಣ ಹೊಂದಿರುವ ವಿಮಾನ ನಿಲ್ದಾಣದಲ್ಲಿ ವಿಮಾನಯಾನಕ್ಕೆ ಸಂಬಂಧಿಸಿದಂತೆ ಚಟುವಟಿಕೆಗಳು ನಿರಂತರವಾಗಿ ನಡೆಯಲು ಇಲ್ಲಿ ಫ್ಲೈಟ್ ಟ್ರೇನಿಂಗ್ ತರಬೇತಿ ಶಾಲೆ ಆರಂಭಿಸುವ ಚಿಂತನೆ ಸಹ ಇದ್ದು, ಇದರಿಂದ ವಿಮಾನ ನಿಲ್ದಾಣ ನಿರ್ವಣೆಗೆ ಸಹಕಾರಿಯಾಗಲಿದೆ' ಎಂದು ಖರ್ಗೆ ಹೇಳಿದರು.

ಬಂದಿಳಿದ ಮಹಿಳಾ ಪೈಲಟ್

ಬಂದಿಳಿದ ಮಹಿಳಾ ಪೈಲಟ್

ಕಲಬುರಗಿ ವಿಮಾನ ನಿಲ್ದಾಣಕ್ಕೆ ಭಾನುವಾರ ಹೈದರಾಬಾದ್‌ನಿಂದ ಬಂದಿಳಿದ ಎರಡು ಲಘು ವಿಮಾನಗಳ ಪೈಕಿ ಮಹಿಳಾ ಪೈಲಟ್ ಆಗಿರುವ ಕ್ಯಾಪ್ಟನ್ ಜಾನವಿ ಅವರಿದ್ದ ವಿಮಾನ ಕಲಬುರಗಿ ನೆಲದಲ್ಲಿ ಮೊದಲ ಬಾರಿಗೆ ಭೂಸ್ಪರ್ಶ ಮಾಡಿತು. ಕ್ಯಾಪ್ಟನ್ ಶಹೀನ ಶಹಾ ಮತ್ತು ಚೀಫ್ ಅಪರೇಟಿವ್ ಆಫೀಸರ್ ಹೇಮಂತ ಡಿ.ಪಿ. ಜೊತೆಗಿದ್ದರು.

ನಂತರ ಕ್ಯಾಪ್ಟನ್ ಅರುಣ ಮತ್ತು ಕ್ಯಾಪ್ಟನ್ ಅಭಿಜಿತ್ ಅವರಿದ್ದ ಎರಡನೇ ಲಘು ವಿಮಾನ ಬಂದಿಳಿಯಿತು. ಐತಿಹಾಸಿಕದ ಈ ಕ್ಷಣಕ್ಕೆ ಸಮಾಜ ಕಲ್ಯಾಣ ಸಚಿವ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ, ಕಲಬುರಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣ ಹಣಮಂತರಾಯ ಮಲಾಜಿ ಮುಂತಾದವರು ಸಾಕ್ಷಿಯಾದರು.

ಉಡಾನ್ ಯೋಜನೆಗೆ ಸೇರ್ಪಡೆ

ಉಡಾನ್ ಯೋಜನೆಗೆ ಸೇರ್ಪಡೆ

'ಕಲಬುರಗಿ ಸೇರಿದಂತೆ ಹೈದರಾಬಾದ್ ಕರ್ನಾಟಕ ಭಾಗದ ನಾಗರಿಕರು ಕಲಬುರಗಿ ಪ್ರಾದೇಶಿಕ ವಿಮಾನ ನಿಲ್ದಾಣದಿಂದ ದೂರದ ಬೆಂಗಳೂರು, ಮುಂಬೈ ಸೇರಿದಂತೆ ದೇಶದ ಇನ್ನಿತರ ಭಾಗಕ್ಕೆ ವಿಮಾನ ಪ್ರಯಾಣ ಮಾಡಲು ಅನುಕೂಲವಾಗಲು ಕೇಂದ್ರ ಸರ್ಕಾರವು "ಉಡಾನ್" ಯೋಜನೆಯಡಿ ಕಲಬುರಗಿ ವಿಮಾನ ನಿಲ್ದಾಣವನ್ನು ತೆಗೆದುಕೊಳ್ಳಬೇಕೆಂಬುದು ರಾಜ್ಯ ಸರ್ಕಾರದ ಆಶಯವಾಗಿದ್ದು, ಈ ನಿಟ್ಟಿನಲ್ಲಿ ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ' ಎಂದು ಸಮಾಜ ಕಲ್ಯಾಣ ಸಚಿವ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.

3,725 ಕಿ.ಮೀ. ರನ್‌ ವೇ

3,725 ಕಿ.ಮೀ. ರನ್‌ ವೇ

'742 ಎಕರೆ ಬೃಹತ್ ಪ್ರದೇಶ ಹೊಂದಿರುವ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಲಘು ವಿಮಾನಗಳು ಸೇರಿದಂತೆ ಏರ್‌ಬಸ್ 320 ಸಹ ಭೂಸ್ಪರ್ಶ ಮಾಡುವಂತೆ 3.725 ಕಿ.ಮಿ. ಉದ್ದದ ರನ್‍ವೇ ಸಿದ್ದಪಡಿಸಲಾಗಿದೆ. ವಿಮಾನ ನಿಲ್ದಾಣ ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಇಲ್ಲಿ ವಿಮಾನಯಾನ ಸೇವೆಗೆ ಸಂಬಂಧಪಟ್ಟಂತೆ ಕಾರ್ಯಚಟುವಟಿಕೆಗಳು ನಿರಂತರ ಸಾಗಲು ಏಶಿಯಾ ಪೆಸಿಫಿಕ್ ಫ್ಲೈಟ್ ಟ್ರೇನಿಂಗ್ ಸ್ಕೂಲ್ ಮತ್ತು ಎವಿಕಾನ್ ಟ್ರೇನಿಂಗ್ ಇನ್‌ಸ್ಟಿಟ್ಯೂಟ್ ಫ್ಲೈಯಿಂಗ್ ಸ್ಕೂಲ್ ಆರಂಭಿಸಲು ಪ್ರಸ್ತಾವನೆ ಬಂದಿದ್ದು, ನಾಗರಿಕ ವಿಮಾನಯಾನ ಪ್ರಾಧಿಕಾರದ ಅನುಮತಿ ಪಡೆದು ಇಲ್ಲಿ ತರಬೇತಿ ಶಾಲೆ ಪ್ರಾರಂಭಿಸಲಾಗುವುದು' ಎಂದು ಸಚಿವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+