Temperature: ಕಲಬುರಗಿಯಲ್ಲಿ ರಾಜ್ಯದ ಗರಿಷ್ಠ ತಾಪಮಾನ, ಹೇಗಿರಲಿವೆ ಮುಂದಿನ ದಿನಗಳು?

ಕಲಬುರಗಿ, ಏಪ್ರಿಲ್ 02: ಕರ್ನಾಟಕದ ಅರ್ಧ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಆಗುತ್ತಿದ್ದರೆ, ಮತ್ತೆ ಅರ್ಧ ಭಾಗದಲ್ಲಿ ಅತ್ಯಧಿಕ ತಾಪಮಾನ, ಉಷ್ಣ ಅಲೆ ಮುಂದುವರಿದಿದೆ. ಈ ಪೈಕಿ ರಾಜ್ಯದ ಅತೀ ಗರಿಷ್ಠ ತಾಪಮಾನ ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ ದಾಖಲಾಗಿದೆ. ಕಳೆದ ಕೆಲವು ದಿನಗಳಿಂದ ಕಲಬುರಗಿಯಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚಿನ ಉಷ್ಣಾಂಶ ದಾಖಲಾಗುತ್ತಿದೆ. ಒಂದೊಮ್ಮೆ 42 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

ಫೆಬ್ರವರಿಯಿಂದಲೇ ರಾಜ್ಯದಲ್ಲಿ ಬಿಸಿಲು ತಾಂಡವವಾಡುತ್ತಿದೆ. ಆ ಹೊತ್ತಿಗಾಗಲೇ ಕಲಬುರಗಿ, ರಾಯಚೂರು ಭಾಗದಲ್ಲಿ ತಂಪು ವಾತಾವರಣ ಮರೆಯಾಗಿತ್ತು. ಈ ವರ್ಷದ ಬೇಸಿಗೆಯಲ್ಲಿ ಎಲ್ಲ ಜಿಲ್ಲೆಗಳ ಪೈಕಿ ಅತ್ಯಧಿಕ ತಾಪಮಾನ ಕಂಡಿದ್ದು ಕಲಬುರಗಿ. ಜಿಲ್ಲೆ ವ್ಯಾಪ್ತಿಯಲ್ಲಿ ಎರಡು ಮೂರು ವಾರಗಳಿಂದ ಒಂದೇ ತೆರನಾದ ವಾತಾವರಣ ನಿರ್ಮಾಣವಾಗಿದೆ.

Hottest Kalaburagi has Recorded Highest Temperature in Karnataka today Weather

ತೊಗರಿ ನಾಡು ಎಂದೇ ಖ್ಯಾತಿ ಪಡೆದ ಕಲಬುರಗಿ ಜಿಲ್ಲೆಯಲ್ಲಿ ಪ್ರತಿ ಬೇಸಿಗೆಯಂತೆ ಈ ವರ್ಷವು ಗರಿಷ್ಠ ತಾಪಮಾನ ದಾಖಲಾಗಿದ್ದು, ಬಿಸಿಲ ನಾಡು ಎಂಬ ಹೆಸರು ಪಡೆದಿದೆ. ಇದೊಂದೆ ಅಲ್ಲದೇ ಸುತ್ತಮುತ್ತಲಿನ ರಾಯಚೂರು, ಬೀದರ್, ಯಾದಗಿರಿ ಜಿಲ್ಲೆಗಳು ಅತೀವ ಬಿಸಿಲಿನಿಂದ ತತ್ತರಿಸಿವೆ.

ಮುಂದಿನ ಕೆಲವು ವಾರ ಉರಿಬಿಸಲಿನ ಎಚ್ಚರಿಕೆ

ಮಂಗಳವಾರ ಏಪ್ರಿಲ್ 1 ಮತ್ತು 2ರಂದು ಬುಧವಾರ ಕಲಬುರಗಿಯಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ ಒಂದು ವಾರಗಳ ಕಾಲ 38, 39 ಮತ್ತು 40 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಏಪ್ರಿಲ್ ಮಧ್ಯ ಭಾಗಕ್ಕೆ 40 ಡಿಗ್ರಿ ಸೆಲ್ಸಿಯಸ್ ದಾಟಿದರೂ ಅಚ್ಚರಿಪಡಬೇಕಿಲ್ಲ. ಮುಂದಿನ ಎರಡು ವಾರದ ಜಿಲ್ಲೆ ಕಾದ ಹಂಚಿನಂತಾಗಲಿದೆ. ಒಣಹವೆಯ ಎಚ್ಚರಿಕೆ ನೀಡಲಾಗಿದೆ ಎಂದು ಸದ್ಯದ ಹವಾಮಾನ ವರದಿ ತಿಳಿಸಿದೆ.

ನಿತ್ಯ ಬೆಳಗ್ಗೆ 9 ಗಂಟೆಯಿಂದ ಸಂಜ್ಯೆ 5 ಇಲ್ಲವೇ ಗಂಟೆವರೆಗೆ ಪಟ್ಟಣದಲ್ಲಿ ಒಣಹವೆ ಕಂಡು ಬರುತ್ತಿದೆ. ಜನರು ಉರಿಬಿಸಲಿಗೆ ಬಸವಳಿದಿದ್ದಾರೆ. ಮುಂದಿನ ಎರಡು ವಾರವು ಇದೇ ರೀತಿ ಇರಲಿದೆ. ತೇವಾಂಶ ಭರಿತ ಗಾಳಿ ರಾತ್ರಿ ಇಲ್ಲವೇ ಬೆಳಗಿನ ಜಾವ ಬೀಸಿದರೆ ಹೆಚ್ಚು ಎಂಬಂತಾಗಿದೆ.

Hottest Kalaburagi has Recorded Highest Temperature in Karnataka today Weather

ಈ ಭಾಗದಲ್ಲಿ ಮಳೆ ಲಕ್ಷಣ ಇಲ್ಲ

ಸದ್ಯ ಮೈಸೂರು, ಚಾಮರಾಜನಗರ, ಶಿವಮೊಗ್ಗ, ಬೆಂಗಳೂರು, ಹಾವೇರಿ, ಕೊಡಗು, ಹಾಸನ, ಮೈಸೂರು, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ತುಮಕೂರು ಸೇರಿದಂತೆ ವಿವಿದ ಜಿಲ್ಲೆಗಳಲ್ಲಿ ಮಳೆ ಆಗಿದೆ. ಆದರೆ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ಬೇರಾವ ಜಿಲ್ಲೆಗಳಲ್ಲೂ ಮಳೆ ಆಗಿಲ್ಲ. ಸದ್ಯ ಕಲಬುರಗಿ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಪೂರ್ವ ಮುಂಗಾರು ಮಳೆಯ ಚುರುಕಿನ ಲಕ್ಷಣ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+