ಕಲಬುರಗಿ ರೈಲು ನಿಲ್ದಾಣಕ್ಕೆ ಹಸಿರು ಬಣ್ಣ: ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ
ಕಲಬುರಗಿ, ಡಿ. 13: ನಗರದ ರೈಲು ನಿಲ್ದಾಣದ ಗೋಡೆಗಳ ಮೇಲೆ ಹಸಿರು ಬಣ್ಣ ಬಳಿದಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಹಸಿರು ಬಣ್ಣವನ್ನು ತೆಗೆಯಬೇಕು ಎಂದು ಸ್ಥಳೀಯ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
#Hindu right wing groups demand #Kalaburgi railway station to be repainted. They allege it resembles that of a #mosque. The railway authorities had recently painted the walls green. Since the central structure is dome shaped. It resembles that of mosque they allege. #Karnataka pic.twitter.com/kd2CC4XkeY
— Imran Khan (@KeypadGuerilla) December 13, 2022
ರೈಲು ನಿಲ್ದಾಣದ ಹಸಿರು ಗೋಡೆಗಳು ಮಸೀದಿಯಂತೆ ಕಾಣಿಸುತ್ತಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿದ್ದು, ಡಿಸೆಂಬರ್ 13ರ ಮಂಗಳವಾರ ಪ್ರತಿಭಟನೆ ನಡೆಸುತ್ತಿವೆ.
ರೈಲ್ವೆ ಅಧಿಕಾರಿಗಳು ಇತ್ತೀಚೆಗೆ ರೈಲು ನಿಲ್ದಾಣದ ಗೋಡೆಗಳಿಗೆ ಹಸಿರು ಬಣ್ಣ ಬಳಿದಿದ್ದರು. ಈ ಕೂಡಲೇ ಹಸಿರು ಬಣ್ಣವನ್ನು ತೆಗೆಯುವಂತೆ ಆಗ್ರಹಿಸಿರುವ ಹಿಂದೂಪರ ಸಂಘಟನೆಗಳು ರೈಲ್ವೆ ನಿಲ್ದಾಣದ ಎದುರು ಪ್ರತಿಭಟನೆ ನಡೆಸುತ್ತಿವೆ.

ನಿಲ್ದಾಣದ ಮುಖ್ಯ ರಚನೆಯು ಗುಮ್ಮಟದ ಆಕಾರವನ್ನು ಹೊಂದಿದೆ. ಜೊತೆಗೆ ಈಗ ಹಸಿರು ಬಣ್ಣ ಬಳಿದಿರುವ ಕಾರಣ ಇದು ಮಸೀದಿಯನ್ನು ಹೋಲುತ್ತದೆ ಎಂದು ಅವರು ಸ್ಥಳೀಯ ಹಿಂದೂ ಪರ ಸಂಘಟನೆಗಳು ಆರೋಪಿಸಿವೆ.












Click it and Unblock the Notifications