ಕಲಬುರಗಿಯಲ್ಲಿ ನ.24ರಿಂದ ಹೆಲ್ಮೆಟ್ ಕಡ್ಡಾಯ

Posted By: Gururaj
Subscribe to Oneindia Kannada

ಕಲಬುರಗಿ, ನವೆಂಬರ್ 23 : ಕಲಬುರಗಿ ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯ ನಿಯಮ ನ.24ರಿಂದ ಜಾರಿಗೆ ಬರಲಿದೆ. ಜಿಲ್ಲೆಯಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ, ಆದ್ದರಿಂದ, ನಿಯಮ ಜಾರಿಗೊಳಿಸಲು ಪೊಲೀಸರು ನಿರ್ಧರಿಸಿದ್ದಾರೆ.

ಕಲಬುರಗಿ ಸಂಚಾರಿ ಪೊಲೀಸರು ಈಗಾಗಲೇ ರಸ್ತೆ ಸುರಕ್ಷತಾ ಅಭಿಯಾನವನ್ನು ನಡೆಸಿ, ಜನರಲ್ಲಿ ಅರಿವು ಮೂಡಿಸಿದ್ದಾರೆ. ಈಶಾನ್ಯ ವಲಯ ಐಜಿಪಿ ಆಲೋಕ್ ಕುಮಾರ್ ಅವರು ಬುಧವಾರ ನಡೆದ ಸುರಕ್ಷತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಕಲಬುರಗಿ : ಇಬ್ಬರು ವಕೀಲರು ಸೇರಿ ಮೂರು ಸಾವು

Helmets mandatory in Kalaburagi form November 24, 2017

'ಹಲವು ಅಪಘಾತ ಪ್ರಕರಣದಲ್ಲಿ ದ್ವಿಚಕ್ರ ವಾಹನ ಸವಾರರ ಜೀವವನ್ನು ಹೆಲ್ಮೆಟ್ ಉಳಿಸಿದೆ. ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಅಪಘಾತದಲ್ಲಿ ಹೆಚ್ಚು ಗಾಯಗೊಳ್ಳುತ್ತಿದ್ದಾರೆ' ಎಂದು ಅಲೋಕ್ ಕುಮಾರ್ ಹೇಳಿದರು.

ಕಲಬುರಗಿ: ಟ್ಯಾಂಕರ್ ಡಿಕ್ಕಿಯಾಗಿ ಕ್ರೂಷರ್ ನುಚ್ಚುನೂರು, 5 ಸಾವು

ಲಾರಿ ಮಾಲೀಕರು, ಚಾಲಕರು ಮದುವೆ ಸಮಾರಂಭಗಳಿಗೆ ತಮ್ಮ ವಾಹನಗಳನ್ನು ಬಳಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಂಚಾರಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ನವೆಂಬರ್ 22ರಂದು ನಡೆದ ಅಪಘಾತದಲ್ಲಿ ಮೂವರು, ನವೆಂಬರ್ 21ರಂದು ನಡೆದ ಅಪಘಾತದಲ್ಲಿ 5 ಜನರು ಸಾವನ್ನಪ್ಪಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Kalaburagi police are gearing up to make helmets mandatory from November 24, 2017 after following an increase in road accidents in the district. ಕಲಬುರಗಿಯಲ್ಲಿ ನ.24ರಿಂದ ಹೆಲ್ಮೆಟ್ ಕಡ್ಡಾಯ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ