ಮಹದಾಯಿ ವಿವಾದ ಬಗೆಹರಿಯುವುದು ಮೋದಿಗೆ ಬೇಕಿಲ್ಲ:ಖರ್ಗೆ
ಕಲಬುರಗಿ, ಡಿಸೆಂಬರ್ 23: ಮಹದಾಯಿ ವಿಚಾರದಲ್ಲಿ ಪ್ರಧಾನಿ ಮೋದಿ ಅವರ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಸಂಸದ ಮಲ್ಲಿಕಾರ್ಜುನ ಖರ್ಗೆ ಮಹದಾಯಿ ವಿಚಾರವಾಗಿ ಮೋದಿ ಅವರು ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ ಎಂದರು.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಕ್ಷಕ್ಕೆ ನಿಷ್ಠರಾಗಿಯಷ್ಟೆ ನಡೆದುಕೊಳ್ಳುತ್ತಿರುವ ಮೋದಿ ಅವರು ವಿವಾದ ಬಗೆಹರಿಸಲು ಬೇಕೆಂದೇ ಆಸಕ್ತಿ ತೋರುತ್ತಿಲ್ಲ ಎಂದರು.

'ಮಹದಾಯಿ ಯೋಜನೆ ಜಾರಿ ವಿಚಾರದಲ್ಲಿ ಸಿಎಂ ಪರಿಕ್ಕರ್‌ಗೆ ಬುದ್ಧಿ ಹೇಳುವ ಧೈರ್ಯ ಮೋದಿ ಮಾಡುತ್ತಿಲ್ಲ, ಅವರಿಗೆ ಅದು ಬೇಕಿಲ್ಲ. ಪ್ರಧಾನಿ ಮನಸ್ಸು ಮಾಡಿದರೆ ಕ್ಷಣಾರ್ಧದಲ್ಲಿ ವಿವಾದ ಬಗೆಹರಿಯುತ್ತದೆ ಆದರೆ ಅವರಿಗೆ ಹಾಗೂ ಅವರ ಪಕ್ಷದವರಿಗೆ ವಿವಾದ ಬಗೆಹರಿಯುವುದು ಬೇಕಿಲ್ಲ' ಎಂದರು.
ಮಹದಾಯಿ ವಿವಾದ ಗೋವಾ-ಕರ್ನಾಟಕ ಮಧ್ಯೆ ಇರುವ ಬಹುದೊಡ್ಡ ಸಮಸ್ಯೆ, ನಮ್ಮ ಪ್ರದೇಶದಲ್ಲಿ ಹರಿಯುವ ನೀರು ನಮಗೆ ಕೊಡಲೇಬೇಕು ಎಂಬುದು ನಮ್ಮ ವಾದ, ಕರ್ನಾಟಕದ ಪಾಲಿನ 7.5 ಟಿಎಂಸಿ ನೀರು ಗೋವಾ ಕೊಡಲೇ ಬೇಕು ಎಂದು ಅವರು ಆಗ್ರಹಿಸಿದರು.












Click it and Unblock the Notifications