ಕೆಇಎ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ಗೆ ಕೈ ಶಾಸಕರು, ಮಂತ್ರಿಗಳ ನೆರವು: B.Y.ವಿಜಯೇಂದ್ರ ಆರೋಪ
ಕಲಬುರಗಿ, ನವೆಂಬರ್, 07: ಕೆಇಎ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಆರ್‌ಡಿ ಪಾಟೀಲ್ ಎಸ್ಕೇಪ್ ಪ್ರಕರಣಕ್ಕೆ ಬಗ್ಗೆ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಬಿ ವೈ ವಿಜಯೇಂದ್ರ ಅವರು, ಬಿಜೆಪಿ ಸರ್ಕಾರ ಇದ್ದಾಗ ಪಿಎಸ್‌ಐ ಪರೀಕ್ಷೆ ಅಕ್ರಮದ ಬಗ್ಗೆ ಕಾಂಗ್ರೆಸ್ ಸತತವಾಗಿ ಆರೋಪ ಮಾಡಿತ್ತು. ಈಗ ಪ್ರಕರಣದ ಆರೋಪಿ ಆರ್‌ಡಿ ಪಾಟೀಲ್‌ಗೆ ಕಾಂಗ್ರೆಸ್ ಶಾಸಕರು, ಮಂತ್ರಿಗಳೇ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಇನ್ನು ಎಲ್ಲಾ ಗೊತ್ತಿದ್ದರೂ ಪೋಲೀಸರಿಗೆ ಯಾಕೆ ಹಿಡಿಯಲು ಆಗುತ್ತಿಲ್ಲ ಎಂದು ಕಲಬುರಗಿಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ.ವೈ.ವಿಜಯೇಂದ್ರ ವಾಗ್ದಾಳಿ ಮಾಡಿದರು.

ಕೆಇಎ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಆರ್‌ಡಿ ಪಾಟೀಲ್ ನಗರದ ಜೇವರ್ಗಿ ರಸ್ತೆಯ ವರ್ಧಾ ಅಪಾರ್ಟ್ಮೆಂಟ್‌ನ ಹಿಂಬದಿಯ ಕಾಂಪೌಂಡ್ ಹಾರಿ ಎಸ್ಕೇಪ್ ಆಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ ಭಾನುವಾರದಿಂದ ಸೋಮವಾರದವರೆಗೆ ಕಲಬುರಗಿಯಲ್ಲೇ ಆರ್‌ಡಿ ಪಾಟೀಲ್ ತಂಗಿರುವ ಶಂಕೆ ವ್ಯಕ್ತವಾಗಿದ್ದು, ಈ ವಿಷಯ ಪೊಲೀಸರಿಗೆ ಗೋತ್ತಾಗುತ್ತಿದ್ದಂತೆ ಆರ್‌ಡಿ ಪಾಟೀಲ್ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ
ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ. ಹಿಂಗಾರು ಉತ್ತಮವಾಗಿ ಆಗಲಿ ಎಂದು ಹಾಸನಾಂಬೆಗೂ ಪ್ರಾರ್ಥನೆ ಮಾಡುತ್ತೇನೆ ಎಂದರು. ಇನ್ನು ಕೇವಲ ಶಾಸಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಯಾವತ್ತು ಸತ್ಯ ಹೇಳಿದ್ದಾರೆ. ಎಲ್ಲ ಬರೀ ಸುಳ್ಳೇ ಹೇಳಿಕೊಂಡು ಬರುತ್ತಿದ್ದಾರೆ. ಅದು ಬಿಟ್ಟರೆ ಅವರಿಗೆ ಬೇರೆ ಕೆಲಸ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಬರದ ವಿಚಾರದಲ್ಲಿ ನಾವು ಕೇಂದ್ರದ ಮೇಲೆ ಬೊಟ್ಟು ಮಾಡುತ್ತಿಲ್ಲ. ದುಡ್ಡು ಕೇಳುತ್ತಿದ್ದೇವೆ, ಕೇಳಬೇಕೆ ಬೇಡ್ವಾ? ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ, ಕೇಂದ್ರ ಸಮನ್ವಯದಿಂದ ಕೆಲಸ ಮಾಡಬೇಕು. ಕರ್ನಾಟಕದಲ್ಲಿ ಬರ ಬಂದರೆ ಕೇಂದ್ರದ ಜವಾಬ್ದಾರಿಯು ಇರುತ್ತದೆ. ಕೇಂದ್ರಕ್ಕೆ ತೆರಿಗೆ ಮೂಲಕ ಹಣ ಕೊಡುವುದೇ ರಾಜ್ಯಗಳು. ನಮಗೆ ಸಂಕಷ್ಟ ಎದುರಾದಾಗ ನೆರವಾಗಬೇಕಾಗಿದ್ದು ಕೇಂದ್ರದ ಜವಾಬ್ದಾರಿಯಾಗಿದೆ. 33,700 ಕೋಟಿ ರೂಪಾಯಿಗಳ ಬೆಳೆ ನಷ್ಟವಾಗಿದ್ದು, ಕೇಂದ್ರದ ಬಳಿ 17 ಸಾವಿರ ಕೋಟಿ ಕೇಳಿದ್ದೇವೆ. ರೈತರು ಸಂಕಷ್ಟದಲ್ಲಿದ್ದಾರೆ, ಬೇಗ ಹಣ ಕೊಡಿ ಎಂದು ಕೇಳುತ್ತಿದ್ದೇವೆ ಅಷ್ಟೇ ಎಂದರು.
ಸಿದ್ದರಾಮಯ್ಯ ಮೋದಿ ವಿರುದ್ಧ ದುರಹಂಕಾರದಿಂದ ಮಾತುಗಳನ್ನಾಡುತ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೋದಿಯವರು ನನ್ನ ಬಗ್ಗೆ ಮಾತನಾಡಬಹುದಾ? ಮಧ್ಯಪ್ರದೇಶ ಚುನಾವಣಾ ಪ್ರಚಾರದಲ್ಲಿ ಕರ್ನಾಟಕದ ವಿಚಾರ ಮಾತಾಡುವುದು ಏನಿರುತ್ತದೆ? ಮೊದಿಯವರಿಗೆ ನಮ್ಮ ಬಗ್ಗೆ ಭಯ ಇರಬೇಕು. ಅದಕ್ಕೆ ಹೀಗೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಶೇಮ್‌ಲೆಸ್ ಪಾರ್ಟಿ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಯತ್ನಾಳ್ ಹಿಮ್‌ಸೆಲ್ಫ್ ಈಸ್ ಎ ಶೇಮ್‌ಲೆಸ್ ಎಂದು ಲೇವಡಿ ಮಾಡಿದರು. ಯತ್ನಾಳ್ ಏನು ಬಹಳ ಸದ್ಗುಣ ಇರುವ ವ್ಯಕ್ತೀನಾ? ಅವರಿಗೆ ಬಿಜೆಪಿಯವರೇ ನಡವಳಿಕೆ ಸರಿ ಇಲ್ಲ ಎಂದು ನೋಟಿಸ್ ಕೊಟ್ಟಿಲ್ವಾ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ಹೊರಹಾಕಿದರು.
ಬೇರೆ ಪಕ್ಷದ ನಾಯಕರು ಕಾಂಗ್ರೆಸ್ ಸೇರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಯಾರನ್ನೂ ಕರೆದುಕೊಂಡು ಬರುವುದಿಲ್ಲ. ಪಕ್ಷದ ಸಿದ್ಧಾಂತ, ನಾಯಕತ್ವ ಒಪ್ಪಿ ಬಂದರೆ ಬೇಡ ಅನ್ನುವುದಿಲ್ಲ. ರಾಜ್ಯದಲ್ಲಿ ವಿದ್ಯುತ್ ಸ್ಥಿತಿ ಉತ್ತಮವಾಗುತ್ತಿದೆ. 7 ಗಂಟೆ ತ್ರೀ ಫೇಸ್ ವಿದ್ಯುತ್ ನೀಡಲು ನಿನ್ನೆ ತೀರ್ಮಾನಿಸಲಾಗಿದೆ. ಲೋಕಸಭಾ ಚುನಾವಣೆಗೆ ಎಲ್ಲರನ್ನೂ ಒಟ್ಟುಗೂಡಿ ಚರ್ಚಿಸಿ ಅಭ್ಯರ್ಥಿ ಹಾಕುತ್ತೇವೆ ಎಂದರು.












Click it and Unblock the Notifications