ಆಳಂದ ಅಭ್ಯರ್ಥಿ ಘೋಷಣೆ : ಬಿಜೆಪಿಯಲ್ಲಿ ಅಸಮಾಧಾನ
ಕಲಬುರಗಿ, ಏಪ್ರಿಲ್ 10 : ಆಳಂದ ಕ್ಷೇತ್ರಕ್ಕೆ ಸುಭಾಷ್ ಗುತ್ತೇದಾರ್ ಬಿಜೆಪಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಇದರಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಚಂದ್ರಶೇಖರ ಹಿರೇಮಠ ಅವರು ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ.
ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಚಂದ್ರಶೇಖರ ಹಿರೇಮಠ ಅವರ, 'ಮದ್ಯ ಮಾರಾಟಗಾರನಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ನೈತಿಕತೆ ಮರೆತಿದೆ. ಮದ್ಯ ಮುಕ್ತ ಆಳಂದ ಮಾಡಲು ಸಾಕಷ್ಟು ಹೋರಾಟವನ್ನು ನಾನು ಮಾಡಿದ್ದೇನೆ' ಎಂದರು.
'ನನಗೆ ಟಿಕೆಟ್ ನೀಡುತ್ತೇನೆಂದು ಭರವಸೆ ಕೊಟ್ಟಿದ್ದ ಬಿಜೆಪಿ ನಾಯಕರು. ಈಗ ಮದ್ಯ ಮಾರುವವನಿಗೆ ಟಿಕೆಟ್ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಮದ್ಯ ಮಾರಾಟಗಾರನಿಗೆ ಬೆಂಬಲ ನೀಡಲು ಸಾಧ್ಯವಿಲ್ಲ' ಎಂದು ಹೇಳಿದರು.

'ಪಕ್ಷ ಮತ್ತು ಪಕ್ಷದ ಮುಖಂಡರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಟಿಕೆಟ್ ನೀಡಿರುವ ಬಗ್ಗೆ ಮತ್ತೊಮ್ಮೆ ಪರಾಮರ್ಶೆ ನಡೆಸಬೇಕು. ಅಭ್ಯರ್ಥಿಯನ್ನು ಬದಲಾವಣೆ ಮಾಡಬೇಕು' ಎಂದು ಒತ್ತಾಯಿಸಿದರು.
ಭಾನುವಾರ ಬಿಜೆಪಿ 72 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯನ್ನು ಬಿಡುಗಡೆ ಮಾಡಿತ್ತು. ಆಳಂದ ಕ್ಷೇತ್ರಕ್ಕೆ ಸುಭಾಷ್ ಗುತ್ತೇದಾರ್ ಅವರು ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದ್ದು, ಸ್ಥಳೀಯ ಬಿಜೆಪಿ ನಾಯಕರ ಅಸಮಾಧಾನ ಹೆಚ್ಚಾಗುವಂತೆ ಮಾಡಿದೆ.












Click it and Unblock the Notifications