ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಬಿಜೆಪಿ ಪರಿವರ್ತನಾ ಯಾತ್ರೆ ಜನರ ದಾರಿ ತಪ್ಪಿಸುವಂತದ್ದು'

By ಕಲಬುರಗಿ ಪ್ರತಿನಿಧಿ
|
Google Oneindia Kannada News

ಕಲಬರಗಿ, ಡಿಸೆಂಬರ್ 13: ಬಿಜೆಪಿ ಪರಿವರ್ತನಾ ಯಾತ್ರೆ ಜನರಿಗೆ ದಾರಿ ತಪ್ಪಿಸುವ ಯಾತ್ರೆಯಾಗಿದೆ. ಬಿಜೆಪಿಯವರು ತಮಗೆ ತಾವೇ ಮೊದಲು ಪರಿವರ್ತನೆ ಮಾಡಿಕೊಳ್ಳಲಿ ಎಂದು ಸಚಿವ ಶರಣಪ್ರಕಾಶ ಪಾಟೀಲ್ ಹೇಳಿದರು.

ಬಿಜೆಪಿ ಉಗ್ರಗಾಮಿತ್ವ ಹುಟ್ಟುಹಾಕುತ್ತಿದೆ: ವೀರಪ್ಪ ಮೊಯ್ಲಿಬಿಜೆಪಿ ಉಗ್ರಗಾಮಿತ್ವ ಹುಟ್ಟುಹಾಕುತ್ತಿದೆ: ವೀರಪ್ಪ ಮೊಯ್ಲಿ

ಕಲಬುರಗಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈ.ಕ ಅಭಿವೃದ್ಧಿ ಬಗ್ಗೆ ಖರ್ಗೆ ಅವರೊಂದಿಗೆ ಭಹಿರಂಗ ಚರ್ಚೆಗೆ ಕೇಂದ್ರ ಸಚಿವ ಅನಂತಕುಮಾರ ಅವರು ಹಾಕಿದ ಸವಾಲಿನ ಕುರಿತು ಮಾತನಾಡಿ, ಖರ್ಗೆ ಅವರೊಂದಿಗೆ ಭಹಿರಂಗ ಚರ್ಚೆಗೆ ಅನಂತಕುಮಾರ, ಯಡಿಯೂರಪ್ಪಗೆ ಯೋಗ್ಯತೆ ಇಲ್ಲ. ಇವರೊಂದಿಗೆ ಭಹಿರಂಗ ಚರ್ಚೆಗೆ ನಾನು ಸಾಕು.. ಚರ್ಚೆಗೆ ನಾನು ಯಾವಾಗಲೂ ಸಿದ್ಧ ಎಂದರು.

BJP Parivarthan Yatra misleading the people: Sharan prakash patil

ನಾನು ಯಾರೊಂದಿಗೂ ಒಂದೇ ರೂಪಾಯಿ ಕಮಿಷನ್ ತಿಂದಿಲ್ಲ ಹೀಗೆ ಆರೋಪಿಸುವ ಅನಂತಕುಮಾರ ಅವರು ಅದೇ ದಂಧೆಯಲ್ಲಿ ತೊಡಗಿಸಿಕೊಂಡಂತಿದೆ. ರಾಜ್ಯಕ್ಕೆ ಅನಂತಕುಮಾರ ಕೊಡುಗೆ ಏನಿದೆ ಮೊದಲು ಹೇಳಲಿ ಎಂದು ಬಿಜೆಪಿ ಮುಖಂಡರ ವಿರುದ್ಧ ಡಾ ಶರಣಪ್ರಕಾಶ ಪಾಟೀಲ್ ಕಿಡಿಕಾರಿದ್ದಾರೆ.

'ನವ ಕರ್ನಾಟಕ ನಿರ್ಮಾಣಕ್ಕಾಗಿ' ಬೀದರ್ ನಲ್ಲಿ ಸಿದ್ದರಾಮಯ್ಯ ಮಹಾರ‍್ಯಾಲಿ'ನವ ಕರ್ನಾಟಕ ನಿರ್ಮಾಣಕ್ಕಾಗಿ' ಬೀದರ್ ನಲ್ಲಿ ಸಿದ್ದರಾಮಯ್ಯ ಮಹಾರ‍್ಯಾಲಿ

ಸಿಎಂ ರಾಜ್ಯ ಪ್ರವಾಸದ ಬಗ್ಗೆ ಪಕ್ಷದಲ್ಲಿ ಯಾವುದೇ ರೀತಿಯ ಅಪಸ್ವರ ಇಲ್ಲ. ಇದು ಸರಕಾರಿ ಕಾರ್ಯಕ್ರಮವಾದ್ದರಿಂದ ಪ್ರೋಟೋಕಾಲ್ ಪ್ರಕಾರ ನಡೆಯುತ್ತದೆ. ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಪ್ರತ್ಯೇಕ ಯಾತ್ರೆ ಕೈಗೊಳ್ಳಲಾಗುತ್ತದೆ. ಸಿಎಂ ಯಾತ್ರೆಯ ಬಗ್ಗೆ ನಮ್ಮಲ್ಲಿ ಯಾವುದೇ ರೀತಿಯ ಅಸಮಾಧಾನ , ಅಪಸ್ವರ ಇಲ್ಲವೇ ಇಲ್ಲ ಎಂದು ಹೇಳಿದರು.

ಹಲವು ಯೋಜನೆಗಳಿಗೆ ಅಡಿಗಲ್ಲು, ಉದ್ಘಾಟನೆ ಮತ್ತು ಈಗಾಗಲೇ ಕೈಗೊಂಡಿರುವ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಲು ಈ ಯಾತ್ರೆ ಕೈಗೊಳ್ಳಲಾಗಿದೆ. ಸರಕಾರಿ ಹಣದಲ್ಲಿ ಪಕ್ಷದ ಪ್ರಚಾರ ಅನ್ನೋ ಟೀಕೆ ಸರಿಯಲ್ಲ. ಈ ರೀತಿಯ ಯಾತ್ರೆಗಳು ನಮಗೆ ಹೊಸದೇನೂ ಅಲ್ಲ ಎಂದರು.

English summary
Medical education minister Sharan prakash Patil has alleged that the Parivarthan Yatra led by Former Chief minister BS Yeddyurappa is misleading the people of the state. As the congress government has fulfill its promise which told in the manifesto.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X