ಹೈದರಾಬಾದ್ ಕರ್ನಾಟಕದಲ್ಲಿ ಬಿಜೆಪಿ ಉಸ್ತುವಾರಿ ಜಾವ್ಡೇಕರ್ ಪ್ರವಾಸ
ಕಲಬುರಗಿ, ಸೆಪ್ಟೆಂಬರ್ 22: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಹಾಗೂ ಕರ್ನಾಟಕ ಬಿಜೆಪಿ ಉಸ್ತುವಾರಿ ಪ್ರಜಾಶ್ ಜಾವ್ಡೇಕರ್ ಗುರುವಾರದಿಂದ ಹೈದರಾಬಾದ್ ಕರ್ನಾಟಕದಲ್ಲಿ ಪ್ರವಾಸ ಆರಂಭಿಸಿದ್ದಾರೆ. ಒಟ್ಟು ಮೂರು ದಿನ ಅವರು ಪ್ರವಾಸ ನಡೆಸಲಿದ್ದಾರೆ.
ಗುರುವಾರ ಬೀದರ್ ನ ಹುಮ್ನಾಬಾದ್ ನಿಂದ ಪ್ರವಾಸ ಆರಂಭಿಸಿದ್ದು, ಇಂದು ಕಲಬುರಗಿಗೆ ಭೇಟಿ ನೀಡಲಿದ್ದಾರೆ. ಪ್ರವಾಸದ ಸಂದರ್ಭ ಜಾವ್ಡೇಕರ್ ಯಾದಗಿರಿ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿಯೂ ಸುತ್ತಾಟ ನಡೆಸಲಿದ್ದಾರೆ.

ರಾಜಕೀಯದ ಮೇಲೆ ಪರಿಣಾಮ ಬೀರಬಹುದಾದ ಸ್ಥಳೀಯ ಅಂಶಗಳು, ತಳಮಟ್ಟದಲ್ಲಿ ಬಿಜೆಪಿಯ ಸಾಮರ್ಥ್ಯವನ್ನು ಜಾವ್ಡೇಕರ್ ಪ್ರವಾಸದ ವೇಳೆ ಖುದ್ದು ತಿಳಿದುಕೊಳ್ಳಲಿದ್ದಾರೆ.
ಇನ್ನು ಗ್ರಾಮ ಮಟ್ಟದಲ್ಲಿ ಕಾರ್ಯಕರ್ತರನ್ನು ಅಣಿಗೊಳಿಸಲು ಅಮಿತ್ ಶಾ ನೀಡಿದ ಸಲಹೆಗಳ ಅನುಷ್ಠಾನವನ್ನೂ ಜಾವ್ಡೇಕರ್ ಪರಿಶೀಲನೆ ನಡೆಸಲಿದ್ದಾರೆ.












Click it and Unblock the Notifications