ಕಲಬುರಗಿ: ಕೇಂದ್ರೀಯ ವಿವಿ ವಿದ್ಯಾರ್ಥಿಗಳ ಮೇಲೆ ಹಲ್ಲೆ; ಮೂವರ ವಿರುದ್ಧ FIR ದಾಖಲು

ಕಲಬುರಗಿ, ಏಪ್ರಿಲ್ 11: ಭಾನುವಾರದಂದು (ಏ.10) ರಾಮನವಮಿ ಆಚರಿಸಿ ಮರುಳುವಾಗ ಕಲಬುರಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸಾಧಿಕ್, ರಾಹುಲ್ ಹಾಗೂ ರಾಹುಲ್ ಆರ್ಯ ಎಂಬುವರ ಮೇಲೆ ನರೋಣ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 143 (ಕಾನೂನು ಬಾಹಿರ ಚಟುವಟಿಕೆ), 147 (ಗಲಭೆ), 341 (ತಪ್ಪು ಗ್ರಹಿಕೆ), 323 (ಸ್ವಯಂಪ್ರೇರಿತ ಹಲ್ಲೆ), 324(ಆಯುಧಗಳಿಂದ ಹಲ್ಲೆ), 307 (ಹತ್ಯೆಗೆ ಯತ್ನ), 504 (ಉದ್ದೇಶಪೂರಕವಾಗಿ ಅವಹೇಳನ ಮಾಡುವುದಕ್ಕೆ), 506 (ಕ್ರಿಮಿನಲ್ ಬೆದರಿಕೆ)ರ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ಘಟನೆ ಹಿನ್ನೆಲೆ
ರಾಮನವಮಿ ನಿಮಿತ್ತ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿರುವ ಲಕ್ಷ್ಮೀ ಮಂದಿರದಲ್ಲಿ ಪೂಜೆ ಸಲ್ಲಿಸಿದ್ದ ವಿದ್ಯಾರ್ಥಿಗಳು ಮರಳಿ ಬರುವಾಗ ನಾವು ಎಬಿವಿಪಿ, ಆರ್‌ಎಸ್‌ಎಸ್ ಸಂಘಟನೆಯವರು ಎಂಬ ಕಾರಣಕ್ಕೆ ಹಲ್ಲೆ ನಡೆಸಿದ್ದರು. ಹಲ್ಲೆ ಮಾಡಿದವರು ಯಾವ ಸಂಘಟನೆಯವರು ಎಂದು ಗೊತ್ತಿಲ್ಲ. ಆದರೆ ನಾವು ಎಬಿವಿಪಿ ಸಂಘಟನೆಯವರು ಅಂತ ಹಲ್ಲೆ ಮಾಡಿದ್ದಾರೆ. ಕ್ಯಾಂಪಸ್ ಆವರಣದಲ್ಲಿ ಯಾಕೆ ರಾಮನವಮಿ ಮಾಡಿದ್ದೀರಿ? ಎಂದು ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ವಿಶ್ವನಾಥ್ ಹೇಳಿದ್ದು, ಅವರು ನೀರಿದ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದೆ.

Kalaburagi: Assault on Karnataka Central University Students; FIR Filed Against Three

ರಾಮನವಮಿ ಆಚರಣೆ ಮುಗಿದ ನಂತರ ವಿಶ್ವನಾಥ ಮತ್ತು ನರೇಂದ್ರ ಕುಮಾರ ಬೈಕ್ ಮೇಲೆ ತೆರಳುತ್ತಿದ್ದಾಗ, ಅಡ್ಡಗಟ್ಟಿದ ತೆಲಂಗಾಣ ಮೂಲದ ಸಾಧಿಕ್, ಆಂಧ್ರಪ್ರದೇಶ ಮೂಲದ ರಾಹುಲ್ ಮತ್ತು ಕಲಬುರಗಿಯ ರಾಹುಲ್ ಆರ್ಯಾ ಎನ್ನುವ ಮೂವರು ವಿದ್ಯಾರ್ಥಿಗಳೇ ಹಲ್ಲೆ ಮಾಡಿದವರು ಎಂದು ಗಾಯಾಳುಗಳು ನರೋಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ‌.

Recommended Video

      David Warner ಹಂಚಿಕೊಂಡ ಹೊಸ ವಿಡಿಯೋ ವೈರಲ್ | Oneindia Kannada

      ಇದನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರು ವಿವಿಯ ಮುಂದೆ ಪ್ರತಿಭಟನೆ ನಡೆಸಿ ಈ ವಿದ್ಯಾರ್ಥಿಗಳ ಬಂಧನಕ್ಕೆ ಆಗ್ರಹಿಸಿದರು. ಕಲಬುರಗಿ ಕೇಂದ್ರೀಯ ವಿವಿಯನ್ನು ಮತ್ತೊಂದು ಜೆಎನ್‌ಯು ಮಾಡಲು ಹೊರಟಿದ್ದಾರೆ ಎಂದು ಎಬಿವಿಪಿ ಕಾರ್ಯಕರ್ತರು ಮತ್ತು ಶ್ರೀರಾಮಸೇನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+