ಇದು ಪ್ರತಿಯೊಬ್ಬರ ಕರುಳು ಹಿಂಡುವ ಕರುಣಾಜನಕ ಸ್ಟೋರಿ
ಕಲಬುರಗಿ, ಮೇ 28: ನಾಲ್ಕನೇ ಹಂತದ ಲಾಕ್ ಡೌನ್ ಜಾರಿಗೆ ಬಂದು ಹಲವು ನಿಯಮಗಳು ಸಡಿಲಗೊಂಡರೂ, ವಲಸೆ ಕಾರ್ಮಿಕರ ಸಂಕಷ್ಟ, ನೋವು, ಯಾತನೆ ಮಾತ್ರ ಕಡಿಮೆಯಾಗಿಲ್ಲ.
ಲಾಕ್ ಡೌನ್ ನಿಂದಾಗಿ ದಿನಗೂಲಿ ಕಾರ್ಮಿಕರ ಜೀವನೋಪಾಯಕ್ಕೆ ಭಾರಿ ಹೊಡೆತ ಬಿದ್ದಿದ್ದು, ಬೇರೆ ವಿಧಿ ಇಲ್ಲದೆ ಕಾರ್ಮಿಕರು ತಮ್ಮ ತಮ್ಮ ಸ್ವಗ್ರಾಮಗಳಿಗೆ ತೆರಳುತ್ತಿದ್ದಾರೆ. ರಾಯಚೂರಿನ ಮಾನ್ವಿಯಲ್ಲಿರುವ ಕಾರ್ಮಿಕರದ್ದೂ ಇದೇ ದುಃಸ್ಥಿತಿ.
ಕೈಯಲ್ಲಿ ಕಾಸಿಲ್ಲದೆ, ಸಾರಿಗೆ ವ್ಯವಸ್ಥೆ ಇಲ್ಲದೆ, ತಿನ್ನಲು ಆಹಾರವೂ ಇಲ್ಲದ ಸುಮಾರು 50 ಕಾರ್ಮಿಕರು ನಡೆದುಕೊಂಡೇ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದಾರೆ. ಪುಟ್ಟ ಪುಟ್ಟ ಕಂದಮ್ಮಗಳನ್ನ ತೋಳಲ್ಲಿ ಹೊತ್ತುಕೊಂಡು ರಣಬಿಸಿಲಿನಲ್ಲಿ ಗೂಡು ಸೇರಲು ಹೊರಟಿದ್ದಾರೆ ವಲಸೆ ಕಾರ್ಮಿಕರು.

ಹೈರಾಣಾಗಿರುವ ಕಾರ್ಮಿಕರು ಕಲಬುರಗಿ ಜಿಲ್ಲೆಯ ಅಫ್ಜಲಪುರ ತಾಲೂಕಿನ ಬಳೂರಗಿ ಗ್ರಾಮದ ಬಳಿ ಅನ್ನ-ನೀರು ಇಲ್ಲದೆ ಒದ್ದಾಡುತ್ತಿದ್ದಾರೆ. ಉರಿಬಿಸಿಲಿನಲ್ಲೇ ರಸ್ತೆ ಮೇಲೆ ಮಕ್ಕಳನ್ನು ಮಲಗಿಸಿದ್ದಾರೆ.
ಬಸವಳಿದಿರುವ ಕಾರ್ಮಿಕರ ಸಹಾಯಕ್ಕೆ ಯಾರೂ ಬಾರದೇ ಇರುವುದೇ ದುರಂತ.!












Click it and Unblock the Notifications