Kalaburagi: ಹಣಕ್ಕಾಗಿ ಮೂವರನ್ನು ಬೆತ್ತಲೆಗೊಳಿಸಿ ಮರ್ಮಾಂಗಕ್ಕೆ ಶಾಕ್ ಕೊಟ್ಟ ದುಷ್ಕರ್ಮಿಗಳು: ಆಗಿದ್ದೇನು?
ಕಲಬುರಗಿ, ಮೇ 12: ಹಣಕ್ಕಾಗಿ ಕೆಲವು ಎಂತಹ ಕೀಳು ಮಟ್ಟಕ್ಕೆ ಇಳಿಯುತ್ತಾರೆ ಎಂದರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಕಾರು ಮಾರಾಟಗಾರ ಸೇರಿದಂತೆ ಒಟ್ಟು ಮೂವರನ್ನು ಕೂಡಿ ಹಾಕಿ ಬೆತ್ತಲೆ ಗೊಳಿಸಿದ್ದಲ್ಲದೇ, ಅವರ ಮೇಲೆ ಹಲ್ಲೆ ಮಾಡಿ ಮರ್ಮಾಂಗಕ್ಕೆ ಶಾಕ್ ಕೊಟ್ಟ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.
ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿ ಸಮಾಜವೇ ತಲೆ ತಗ್ಗಿಸುವ ಘಟನೆಯೊಂದು ವರದಿ ಆಗಿದೆ. ಕಾರು ಚಾಲಕ ಸೆಕೆಂಡ್ ಹ್ಯಾಂಡ್ ಕಾರು ಮಾರಾಟಗಾರ ಅರ್ಜುನಪ್ಪ ಹಣಮಂತ ಮಡಿವಾಳ, ಎಂಡಿ ಸಮಿರೂದ್ಧಿನ್ ಮತ್ತು ಅಬ್ದುಲ್ ರೆಹಮಾನ್ ಈ ಮೂವರು ಹಲ್ಲೆಗೆ ಒಳಗಾದವರು.

ಈ ಮೂವರನ್ನು ಹಣಕ್ಕಾಗಿ ಕೂಡಿ ಹಾಕಿ ಪುಂಡರು ಮನಬಂದಂತೆ ಮೃಗೀಯ ರೀತಿಯಲ್ಲಿ ವರ್ತಿಸಲಾಗಿದೆ. ಮನಬಂದ ಕಡೆಗಳಲ್ಲೆಲ್ಲ ದೇಹದ ಮೇಲೆ ದಾಳಿ ಮಾಡಿದ್ದಾರೆ. ಮೂವರನ್ನು ಬೆತ್ತಲೆ ಮಾಡಿ, ಸಿಗರೇಟ್ ಹಚ್ಚಿ, ಮರ್ಮಾಂಗಕ್ಕೆ ಶಾಕ್ ಕೊಟ್ಟು ಇನ್ನಿಲ್ಲದಂತೆ ಹಿಂಸೆ ಕೊಟ್ಟಿದ್ದಾರೆ. ದುಡ್ಡು ಕೊಡದಿದ್ದರೆ ಜೀವ ತೆಗೆಯುವ ಬೆದರಿಕೆ ಹಾಕಿದ್ದಾರೆ.
ಪ್ರಕರಣವನ್ನು ಗುಲ್ಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪೊಲೀಸರು ಆರೋಪಿಗಳಾದ ಇಮ್ರಾನ್ ಪಟೇಲ್ ಮೆಹಬೂಬ್ ಪಟೇಲ್, ಮಹ್ಮದ್ ಬಜಲ್ ಶೇಖ್ ಅನ್ವರ್ ಶೇಖ್, ರಮೇಶ್ ದೊಡ್ಡಮನಿ, ಸಾಗರ್ ಶ್ರೀಮಂತ ಕೋಳಿ ಸೇರಿದಂತೆ ಒಟ್ಟು ಏಳು ಮಂದಿಯನ್ನು ಬಂಧಿಸಿದ್ದಾರೆ.
ಆಗಿದ್ದೇನು? ಘಟನೆ ವಿವರ
ರಮೇಶ್ ದೊಡ್ಡಮನಿ ಎಂಬಾತನಿಗೆ ಒಂದು ಸೆಕೆಂಡ್ ಹ್ಯಾಂಡ್ ಕಾರು ಬೇಕಿತ್ತು. ಅದಕ್ಕಾಗಿ ಆತ ಅರ್ಜುನಪ್ಪ ಹಣಮಂತ ಮಡಿವಾಳ ಅವರಿಗೆ ಕಾರು ಕೊಡಿಸುವಂತೆ ಬೇಡಿಕೆ ಇಟ್ಟಿದ್ದರು. ಅದನ್ನು ತೋರಿಸಲು ಈ ಮೂವರು ತೆರಳಿದಾಗ ಅವರನ್ನು ಈ ದುಷ್ಕರ್ಮಿಗಳ ಗುಂಪು ಒಂದು ಮನೆಯಲ್ಲಿ ಕೂಡಿ ಹಾಕಿ ಈ ರೀತಿ ಚಿತ್ರಹಿಂಸೆ ಕೊಟ್ಟಿದ್ದಾರೆ ಎಂದು ವರದಿ ಆಗಿದೆ.

ಚಿತ್ತಾಪುರದ ಈ ರಮೇಶ್ ದೊಡ್ಡಮನಿ ಕಾರು ವ್ಯಾಪಾರಿ ಅರ್ಜುನಪ್ಪನಿಗೆ ಸುಮಾರು ಏಳೆಂಟು ವರ್ಷಗಳಿಂದ ಗೊತ್ತು. ತಾವು ತಾಲೂಕಾಧ್ಯಕ್ಷ ಆಗಿದ್ದರಿಂದ ಒಂದು ಒಳ್ಳೆ ಕಾರು ಇದ್ದರೆ ಹೇಳು ನಿನಗೆ ಒಂದು ಲಕ್ಷ ರೂ. ಕಮಿಷನ್ ಕೊಡುತ್ತೇನೆ ಎಂದು ರಮೇಶ್ ದೊಡ್ಡ ಮನಿ ಹೇಳಿದ್ದ.
ಹಣ ಕೊಡದಿದ್ದರೆ ಕೊಲ್ಲುವುದಾಗಿ ಜೀವ ಬೆದರಿಕೆ
ಅದರಂತೆ ಟಾಟಾ ಕಾರೊಂದನ್ನು ಅವರಿತೆ ತೋರಿಸಿ ವ್ಯಾಪಾರ ಮುಗಿಸಲು ಅರ್ಜುನಪ್ಪ ಸೇರಿ ಮೂವರು ತೆರಳಿದ್ದರು. ಈ ವೇಳೆ ಅಲ್ಲಿದ್ದ ದೊಡ್ಡಮನಿ ಜತೆಗೆ ದುಷ್ಕರ್ಮಿಗಳ ಕಾರಿನ ಟೆಸ್ಟ್ ಡ್ರೈವ್ ಮಾಡಿದ್ದಾರೆ. ಪುಸಲಾಯಿಸಿ ಮನೆಯಲ್ಲಿ ಕೂಡಿ ಹಾಕಿದ್ದಾರೆ. ಇಂದು ಸಂಜೆ ವೇಳೆಗೆ ಏಳು ಲಕ್ಷ ರೂ. ಹಣ ನೀಡಬೇಕು. ಕಾರಿನಿಂದ ಸಂಪಾದಿಸಿ ಹಣದಲ್ಲಿ ಪ್ರತಿ ತಿಂಗಳು ಹಣ ಕೊಡಬೇಕು. ಇಲ್ಲವಾದರೆ ನಿಮ್ಮ ಹೆಣ ಮನೆಗೆ ಕಳುಹಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ಮರ್ಮಾಂಗಕ್ಕೆ ಶಾಕ್ ಕೊಟ್ಟಿದ್ದಲ್ಲದೇ ಲಾಂಗ್ ನಿಂದ ದೇಹವನ್ನು ಗಾಯ ಮಾಡಿದ್ದಾರೆ. ಸಿಗರೇಟಿನಿಂದ ಸುಟ್ಟಿದ್ದಲ್ಲದೇ, ಕೈ, ಕಾಲು, ತಲೆ ಹೀಗೆ ಎಲ್ಲಿಬೇಕೋ ಅಲ್ಲಿಗೆ ದೊಣ್ಣೆಯಿಂದ ಈ ಮೂವರಿಗೆ ಹೊಡೆದಿದ್ದಾರೆ. ಇದೇ ವೇಳೆ ಪೊಲೀಸರು ದಾಳಿ ನಡೆಸುತ್ತಿದ್ದಂತೆ ಮನೆಯಿಂದ ಕಾಲ್ಕಿತ್ತಿದ್ದಾರೆ. ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.












Click it and Unblock the Notifications