ಕಲಬುರಗಿಯಲ್ಲಿ ಮತ್ತೆ 6 ಕೊರೊನಾ ಸೋಂಕು ಪತ್ತೆ: 141ಕ್ಕೆ ಏರಿಕೆ

ಕಲಬುರಗಿ, ಮೇ 24: ಮಹಾರಾಷ್ಟ್ರ ರಾಜ್ಯ ಪ್ರವಾಸ ಹಿನ್ನೆಲೆಯ 5 ಮತ್ತು ಆಂಧ್ರಪ್ರದೇಶ ಪ್ರವಾಸ ಹಿನ್ನೆಲೆಯ ಓರ್ವ ವ್ಯಕ್ತಿ ಸೇರಿದಂತೆ ಜಿಲ್ಲೆಯ 6 ಜನ ವಲಸಿಗರಿಗೆ ಕೊರೊನಾ ವೈರಸ್ ಸೋಂಕು‌ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ ಯಡ್ರಾಮಿ ತಾಲೂಕಿನ ಅಲ್ಲಾಪುರ ಗ್ರಾಮದ 32 ವರ್ಷದ ಯುವಕ (P-1965) ಮತ್ತು ಸುಂಬಡ ಗ್ರಾಮದ 20 ವರ್ಷದ ಯುವಕನಿಗೆ (P-1966) ಕೊರೊನಾ ವೈರಸ್ ಸೋಂಕು ಕಂಡುಬಂದಿದೆ.

ಮಹಾರಾಷ್ಟ್ರ‌ ಪ್ರವಾಸ ಹಿನ್ನೆಲೆಯಿಂದ ಕಮಲಾಪುರ ತಾಲೂಕಿನ ಅಂಬಲಗಾ ಗ್ರಾಮದ ಬಳಿಯ ಕುದಮೂಡ್ ತಾಂಡಾದ 48 ವರ್ಷದ ಪುರುಷ(P-1967) ಮತ್ತು ಚಿಂಚೋಳಿ ತಾಲೂಕಿನ‌ ಕುಂಚಾವರಂ ಗ್ರಾಮದ 50 ವರ್ಷದ ಮಹಿಳೆಗೂ ಕೊರೊನಾ ವೈರಸ್ ಸೋಂಕು ಅಂಟುಕೊಂಡಿದೆ.

6 New Coronavirus Infection Detected In Kalaburagi District

ಇದಲ್ಲದೆ ಮಹಾರಾಷ್ಟ್ರ‌ ಪ್ರವಾಸ ಹಿನ್ನೆಲೆಯಿಂದ ಕಲಬುರಗಿ ನಗರದ ತಾಜ್ ಸುಲ್ತಾನಪುರ ರಿಂಗ್ ರಸ್ತೆ‌ಯ ನಿಜಾಮಪುರದ ಲಂಗರ್ ಹನುಮಂತ‌ ನಗರದ 45 ವರ್ಷದ ವ್ಯಕ್ತಿ (P-2000) ಮತ್ತು ಆಂಧ್ರ ಪ್ರದೇಶ ಪ್ರವಾಸ ಹಿನ್ನೆಲೆಯಿಂದ ಕಲಬುರಗಿ ನಗರದ ಹೊಸ ಘಾಟಗೆ ಲೇಔಟ್ ಪ್ರದೇಶದ 30 ವರ್ಷದ ಯುವಕನಿಗೂ (P-2001) ಮಹಾಮಾರಿ ಸೋಂಕು ತಗುಲಿದೆ.

ಆರು‌ ಜನ ಸೋಂಕಿತರು ಸರ್ಕಾರಿ ಕ್ವಾರಂಟೈನ್ ಕೇಂದ್ರದಲ್ಲಿದ್ದವರಾಗಿದ್ದು, ಸೋಂಕು ದೃಢವಾದ‌ ನಂತರ ಅವರೆಲ್ಲರನ್ನೂ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ‌ ನೀಡಲಾಗುತ್ತಿದೆ ಎಂದು ಡಿಸಿ ಶರತ್ ಬಿ. ಹೇಳಿದ್ದಾರೆ.

ಇದರಿಂದ ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 141 ಕ್ಕೆ ಹೆಚ್ಚಳವಾಗಿದ್ದು, ಇದರಲ್ಲಿ 62 ಜನ ಗುಣಮುಖರಾಗಿದ್ದಾರೆ. ಉಳಿದಂತೆ 7 ಜನರು ಮೃತಪಟ್ಟಿದ್ದು, 72 ಜನರಿಗೆ ಚಿಕಿತ್ಸೆ‌ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+