ಕಲಬುರಗಿ : ಸೀಮೆಎಣ್ಣೆ ಸ್ಟೌವ್ ಸ್ಫೋಟ, 4 ಮಕ್ಕಳ ಸಜೀವ ದಹನ

ಕಲಬುರಗಿ, ಸೆಪ್ಟೆಂಬರ್ 25 : ಸೀಮೆಎಣ್ಣೆ ಸ್ಟೌವ್ ಸಿಡಿದು ನಾಲ್ವರು ಮಕ್ಕಳು ಸಜೀವವಾಗಿ ದಹನವಾದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿಂಚೋಳಿ ತಾಲೂಕಿನ ಫತ್ತು ನಾಯಕತಾಂಡದಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದೆ. ವೀರಶೆಟ್ಟಿ ಎಂಬುವವರ ಹೋಟೆಲ್‌ನಲ್ಲಿ ಸೀಮೆಎಣ್ಣೆ ಸ್ಟೌವ್ ಸಿಡಿದಿದ್ದು ಪ್ರೀತಂ (3), ರಿತಿಕಾ ಲೋಕನಾಥ್ (4) ಎಂಬ ಮಕ್ಕಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಅಕ್ಷತಾ ವೆಂಕಟೇಶ್ (5), ರಿತೇಶ ಎಂಬ ಮಕ್ಕಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮುಗ್ಧ ಮಕ್ಕಳ ಸಾವಿನಿಂದಾಗಿ ತಾಂಡದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಪೋಷಕರ ಆಕ್ರಂದನ ಮುಗಿಲು ಬಿಟ್ಟಿದೆ.

4 children in kerosene stove blast at Kalaburagi

ಹೋಟೆಲ್ ಮಾಲೀಕ ವೀರಶೆಟ್ಟಿ ಗಂಭೀರವಾಗಿ ಗಾಯಗೊಂಡಿದ್ದು, ಬೀದರ್ ಜಿಲ್ಲೆಯ ಚಿಟಗುಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ ಭೇಟಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+